ಸಾಯಿಬಾಬಾಗೆ 2 ಕೋಟಿ ಮೌಲ್ಯದ ಚಿನ್ನದ ಕಡಗ ಕೊಡುಗೆ

Spread the love

ಶಿರಡಿ, ಮೇ 18- ಮಹಾರಾಷ್ಟ್ರದ ಶಿರಡಿ ಪಟ್ಟಣದಲ್ಲಿರುವ ಪ್ರಸಿದ್ಧ ಸಾಯಿಬಾಬಾ ದೇವಸ್ಥಾನಕ್ಕೆ ಹೈದರಾಬಾದ್ ಮೂಲದ ಭಕ್ತರೊಬ್ಬರು 2 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಕಡಗವನ್ನು ಕೊಡುಗೆಯಾಗಿ ನೀಡಿದ್ದಾರೆ.

ಭಕ್ತ ಪಾರ್ಥಸಾರ್ಥಿ ರೆಡ್ಡಿ ಅವರು 2016 ರಲ್ಲೇ ಸಿಂಹಾಸನಾರೂಢ ಸಾಯಿಬಾಬಾ ವಿಗ್ರಹಕ್ಕೆ ಚಿನ್ನದ ಕಡಗ ತೊಡಿಸಲು ಬಯಸಿದ್ದರು. ಆದರೆ ಕೋವಿಡ್‍ನಿಂದ ಕಡಗ ನಿರ್ಮಾಣ ವಿಳಂಬವಾಗಿತ್ತು ಎಂದು ಟ್ರಸ್ಟ್ನ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಭಾಗ್ಯಶ್ರೀ ಬನಾಯತ್ ಹೇಳಿದ್ದಾರೆ.

ಈಗ ಸಾಯಿಬಾಬಾರವರ ಸಿಂಹಾಸನಕ್ಕೆ 2 ಕೋಟಿ ರೂಪಾಯಿ ಮೌಲ್ಯದ ನಾಲ್ಕು ಕೆಜಿ ಚಿನ್ನದಿಂದ ಮಾಡಿದ ಕಡಗವನ್ನು ಕೊಡುಗೆ ನೀಡಿದ್ದಾರೆ. 2007 ರಲ್ಲಿ ಹೈದರಾಬಾದ್ ಮೂಲದ ಮತ್ತೊಬ್ಬ ಭಕ್ತರೊಬ್ಬರು ದೇವಸ್ಥಾನದ ಟ್ರಸ್ಟ್‍ಗೆ 94 ಕೆಜಿ ಚಿನ್ನದ ಸಿಂಹಾಸನವನ್ನು ಕೊಡುಗೆ ನೀಡಿದ್ದರು.