ವಾರಾಣಾಸಿ,ಫೆ.5- ಮಾಘ ಹುಣ್ಣಿಮೆಯ ಅಂಗವಾಗಿ ಇಂದು ಲಕ್ಷಾಂತರ ಮಂದಿ ಗಂಗಾ ನದಿಯಲ್ಲಿ ಮಿಂದು ಪವಿತ್ರ ಸ್ನಾನ ಮಾಡಿ ಪುನಿತರಾದರು. ದೇಶದ ನಾನಾ ಮೂಲೆಗಳ ಲಕ್ಷಾಂತರ ಭಕ್ತರು, ಸಾಧು,ಸಂತರುಗಳು ಉತ್ತರ ಪ್ರದೇಶದ ವಾರಾಣಾಸಿಯ ಪ್ರಯಾಗ ಘಾಟ್‍ಗೆ ಆಗಮಿಸಿ ಪವಿತ್ರ ಗಂಗೆಯಲ್ಲಿ ಮಿಂದು ತಮ್ಮ ಪಾಪ ಕರ್ಮಗಳನ್ನು ಕಳೆದುಕೊಂಡರು.
ಮಾಘ ಹುಣ್ಣಿಮೆಯ ಸಂದರ್ಭದಲ್ಲಿ ಪವಿತ್ರ ಗಂಗಾ ಸ್ನಾನ ಮಾಡಲು ಆಗಮಿಸಿರುವ ಪ್ರವಾಸಿಗರಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯ ಯೋಗಿನಾಥ್ ಅವರು ಟ್ವಿಟರ್‍ನಲ್ಲಿ ಶುಭ ಕೋರಿದ್ದಾರೆ.
ಪವಿತ್ರ ಗಂಗಾಸ್ನಾನ ಮಾಡಿ ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸುವ ಭಕ್ತ ಸಾಗರ ನಂತರ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ ಶಿವನ ಆರಾಧನೆ ಮಾಡುವುದು ವಾಡಿಕೆ.
ಗೂಢಚಾರಿಕೆ ಬಲೂನ್ ಹೊಡೆದುರುಳಿಸಿದ ಅಮೆರಿಕ ವಿರುದ್ಧ ಚೀನಾ ಕೆಂಡ
ಒಂದು ತಿಂಗಳ ಕಾಲ ಸಂಗಮದ ಮರಳಿನ ಮೇಲೆ ಮಲಗಿ, ಒಪ್ಪೋತ್ತು ಊಟ ಮಾತ್ರ ಮಾಡಿ ಸರ್ವಶಕ್ತನ ಹೆಸರನ್ನು ಜಪಿಸುವ ಕಲ್ಪವಾಸ್ ಎನ್ನುವ ಆಧ್ಯಾತ್ಮಿಕ ಆಚರಣೆ ಮಾಘ ಹುಣ್ಣಿಮೆಯಂದು ಆಂತ್ಯವಾಗಲಿದೆ.
ಪತ್ನಿ ಮೇಲೆ ಹಲ್ಲೆ ಮಾಡಿದ ಕ್ರಿಕೆಟರ್ ವಿನೋದ್ ಕಾಂಬ್ಳಿ
ಹೀಗಾಗಿ ಕಳೆದ ಒಂದು ತಿಂಗಳಿನಿಂದ ಪ್ರಯಾಗ್ ಘಾಟ್‍ನಲ್ಲಿ ಬೀಡುಬಿಟ್ಟಿದ ಭಕ್ತ ಸಾಗರ ಇಂದು ಗಂಗಾ ಸ್ನಾನ ಮಾಡಿ ಒಂದು ತಿಂಗಳ ಕಲ್ಪವಾಸ್ ಆಚರಣೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದಾರೆ.
Devotees, take, holy dip, river, Ganga, Varanasi, occasion, Magh Purnima,