ಡಿ.ಜಿ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ : ಬಹಿರಂಗವಾಯ್ತು ಸ್ಪೋಟಕ ಸತ್ಯ..!

ಬೆಂಗಳೂರು, ಆ.19- ಕೇಂದ್ರ ಗುಪ್ತಚರ ವಿಭಾಗ ಅಕಾರಿಗಳು ಸಕಾಲಕ್ಕೆ ಎಚ್ಚೆತ್ತುಕೊಳ್ಳದಿದ್ದರೆ ಬಂಧನಕ್ಕೊಳಲಾಗಿರುವ ಶಂಕಿತರು ಕರ್ನಾಟಕದಲ್ಲಿ ಭಾರೀ ವಿದ್ವಾಂಸಕ ಕೃತ್ಯ ನಡೆಸಲು ಹೊಂಚು ಹಾಕಿದ್ದರು ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಸೋಮವಾರ ಸಿಸಿಬಿ ಪೆÇಲೀಸರು ಬಂಸಿದ್ದ ಶಂಕಿತ ಸಮೀವುದ್ದೀನ್ ನಿಷೇತ ಐಸಿಸ್ ಉಗ್ರಗಾಮಿ ಸಂಘಟನೆ ಜೊತೆ ಸೇರಿಕೊಂಡು ರಾಜ್ಯದಲ್ಲಿ ದುಷ್ಟ್ಕøತ್ಯ ನಡೆಸಲು ಹೊಂಚು ಹಾಕಿದ್ದ.

ಇನ್ನು ನಿನ್ನೆ ಬೆಂಗಳೂರಿನ ಬಸವನಗುಡಿಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ವಶಕ್ಕೆ ಪಡೆದಿರುವ ಅಬ್ದುರ್ ರೆಹಮಾನ್ ಭಯೋತ್ಪಾದಕ ಸಂಘಟನೆಯ ಜೊತೆ ಸಂಪರ್ಕ ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಈ ಆಘಾತಕಾರಿ ಬೆಳವಣಿಗೆಯ ನಡುವೆಯೇ ಗಲಭೆ ಪ್ರಕರಣದಲ್ಲಿ ಬಂಸಲಾಗಿರುವ 40ಕ್ಕೂ ಹೆಚ್ಚು ಆರೋಪಿಗಳಿಗೆ ಭಯೋತ್ಪಾದನೆ ಸಂಘಟನೆಗಳ ಜೊತೆ ಇದೆ ಎಂದು ಕೇಂದ್ರ ಗುಪ್ತಚರ ವಿಭಾಗ ರಾಜ್ಯಕ್ಕೆ ಮಾಹಿತಿ ನೀಡಿದೆ.

ಇದರಲ್ಲಿ ಸಮೀವುದ್ದೀನ್ ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿ ಎದುರು ನಡೆದಿದ್ದ ಬಾಂಬ್ ಸೋಟ, ಚರ್ಚ್ ಸ್ಟ್ರೀಟ್‍ನಲ್ಲಿ ನಡೆದಿದ್ದ ಸೋಟ ಮತ್ತು ಆರೆಸ್‍ಎಸ್ ಮುಖಂಡ ರುದ್ರೇಶ್ ಹತ್ಯೆಯಲ್ಲಿ ಭಾಗಿಯಾಗಿರುವ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕದಲ್ಲಿದ್ದರು ಎಂಬ ಸಾಕ್ಷ್ಯ ಸಿಕ್ಕಿದೆ.

ಈತ ಜೈಲಿನಲ್ಲಿ ರುದ್ರೇಶ್ ಹತ್ಯೆ ಆರೋಪಿಗಳನ್ನ ಭೇಟಿಯಾಗಿದ್ದನು. ಈತನಿಗೆ ಬಾಂಗ್ಲಾದೇಶದ ನಿಷೇತ ಉಗ್ರ ಸಂಘಟನೆ ಅಲ್ ಹಿಂದ್ ಜೊತೆಗೆ ನಂಟಿತ್ತು. ಬಿಜೆಪಿ ಕಚೇರಿ ಎದುರು ಇಂಡಿಯನ್ ಮುಜÁಹಿದ್ದೀನ್ ಜೊತೆ ಸೇರಿಕೊಂಡು ಅಲ್ ಉಮಾ ಸಂಘಟನೆ ಬಾಂಬ್ ಸೋಟಿಸಿತ್ತು.

ಇವರೆಲ್ಲರ ಗುರಿ ಮಾತ್ರ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಬಾಂಬ್ ಸ್ಪೋಟ ನಡೆಸಿ ಕೋಮುಗಲಭೆ ಸೃಷ್ಟಿಸುವುದು, ಹಿಂದೂ ಮುಖಂಡರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುವುದು, ದೇವಾಲಯಗಳು, ಸರ್ಕಾರಿ ಕಟ್ಟಡಗಳು, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಮಾರುಕಟ್ಟೆ, ಮಾಲ್‍ಗಳು, ಜನನಿಬಿಡ ಪ್ರದೇಶ ಸೇರಿದಂತೆ ಮತ್ತಿತರ ಕಡೆ ವಿದ್ವಾಂಸಕ ಕೃತ್ಯ ನಡೆಸಲು ವ್ಯವಸ್ಥಿತವಾಗಿ ಸಂಚು ಹೆಣೆದಿದ್ದರು.

ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ತಜ್ಞನಾಗಿ ಕೆಲಸ ಮಾಡುತ್ತಿದ್ದ ಶಂಕಿತ ಅಬ್ದುಲ್ ರೆಹಮಾನ್ ಇಸ್ಲಾಮಿಕ್ ಸ್ಟೇಟ್ಸ್ ಜೊತೆ ನಂಟು ಇಟ್ಟುಕೊಂಡು ದುಬೈ ಮೂಲಕ ಒಂದು ಬಾರಿ ಸಿರಿಯಾಕ್ಕೆ ತೆರಳಿದ್ದ.

ಈತ ಮೂಲತಃ ಬೆಂಗಳೂರು ನಗರದವನಾಗಿದ್ದು, ನಗರದಲ್ಲಿ ಬಹುತೇಕ ಸ್ನೇಹಿತರ ಜೊತೆ ನಂಟು ಹೊಂದಿದ್ದ. ಹೀಗಾಗಿ ಸದ್ಯ ಮೂವರು ಸ್ನೇಹಿತರನ್ನ ಅಕಾರಿಗಳು ವಶಕ್ಕೆ ಪಡೆದಿದ್ದಾರೆ.

ಹೀಗಾಗಿ ಆರೋಪಿಯ ಚೈನ್ ಲಿಂಕ್‍ಅನ್ನು ಎನ್‍ಐಎ ಪತ್ತೆ ಹಚ್ಚಲು ಶೋಧ ಮುಂದುವರೆಸಿದೆ. ಮತ್ತೊಂದೆಡೆ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಪ್ರಮುಖ ಆರೋಪಿ ಸಮುಯುದ್ದೀನ್ ಸೇರಿದಂತೆ ಇತರೆ 40 ಆರೋಪಿಗಳು ಉಗ್ರರ ಜೊತೆ ಸಂಪರ್ಕ ಹೊಂದಿರುವ ವಿಚಾರ ತನಿಖಾಕಾರಿಗಳಿಗೆ ಗೊತ್ತಾಗಿದೆ.

ಹೀಗಾಗಿ ಎನ್‍ಐಎ ಕೂಡ ಡಿ.ಜೆ.ಹಳ್ಳಿ ಆರೋಪಿಗಳ ಮೇಲೆ ಕಣ್ಣಿಟ್ಟು, ಬಂತ ಡಾಕ್ಟರ್‍ಗೆ ಏನಾದರೂ ಲಿಂಕ್ ಇದೆಯೇ ಎಂಬ ಬಗ್ಗೆ ತನಿಖೆ ಮುಂದುವರೆಸಿದೆ.  ಸಿಲಿಕಾನ್ ಸಿಟಿ ಉಗ್ರರ ಟಾರ್ಗೆಟ್ ಬಂತ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಬಹುತೇಕರು ನಗರವನ್ನ ಟಾರ್ಗೆಟ್ ಮಾಡಿರುವ ವಿಚಾರ ಬಾಯಿಬಿಟ್ಟಿದ್ದಾರೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ನಡೆಯುವ ಗಲಭೆಯನ್ನ ಮಟ್ಟ ಹಾಕಲು ರಾಷ್ಟ್ರೀಯ ತನಿಖಾ ತಂಡ ಮುಂದಾಗಿದೆ ಎನ್ನಲಾಗುತ್ತಿದೆ.

# ಕೈ ಕೊಟ್ಟ ಲೆಕ್ಕಚಾರ :
ಅಂದುಕೊಂಡಂತೆ ಉಗ್ರರ ಕಾರ್ಯಾಚಾರಣೆ ಯಶಸ್ವೀಯಾಗಿದ್ದಾರೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಸದ್ಯದಲ್ಲೇ ಈ ಶಂಕಿತರು ರಕ್ತದೋಕುಳಿ ಹರಿಸಲು ಎಲ್ಲಾ ರೀತಿಯ ಸಿದ್ದತೆಯನ್ನು ನಡೆಸಿದ್ದರು.

ಆದರೆ, ಕೇರಳದಿಂದ ಸಿರಿಯಾಕ್ಕೆ ತೆರಳಿದ್ದ ಉಗ್ರನೊಬ್ಬ ಅಮೇರಿಕ ಸೇನಾ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದ. ಇದೇ ಉಗ್ರನನ್ನು ಬೆಂಗಳೂರಿನಿಂದ ದುಬೈ ಮೂಲಕ ಸಿರಿಯಾಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಭೇಟಿಯಾಗಿದ್ದಾರೆ ಎನ್ನುವ ಮಾಹಿತಿಯನ್ನು ಕೇಂದ್ರ ಗುಪ್ತಚರ ವಿಭಾಗಕ್ಕೆ ಅಮೇರಿಕಾದ ತನಿಖಾ ಅಕಾರಿಗಳು ಮಾಹಿತಿ ರವಾನಿಸಿದ್ದರು.

ಕಳೆದ ಆರು ತಿಂಗಳಿನಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದುಬೈಗೆ ಹೋಗಿರುವವರ ವಿವರವನ್ನು ಎನ್ ಐ ಎ ಅಕಾರಿಗಳು ವಲಸೆ ವಿಭಾಗದ ಅಕಾರಿಗಳಿಂದ ಮಾಹಿತಿ ಪಡೆದರು.

ದುಬೈಗೆ ತೆರಳಿದ್ದ ಅಬ್ದುಲ್ ರೆಹಮಾನ್ ಅಲ್ಲಿಂದ ಅಫಘಾನಿಸ್ತಾನದ ರಾಜಧಾನಿ ಕಾಬೂಲ್‍ಗೂ ಹೋಗಿ ನಂತರ ಅಲ್ಲಿಂದ ಸಿರಿಯಾಕ್ಕೆ ಭೇಟಿ ನೀಡಿ, ಶಂಕಿತ ಕೇರಳದ ಉಗ್ರನನ್ನು ಭೇಟಿಯಾಗಿದ್ದ. ಈ ವೇಳೆ ಆತ ಇಸ್ಲಾಂನ ಮೂಲಭೂತವಾದದ ಕಡೆ ಆಕರ್ಷಿತನಾಗಿ ವ್ಯಾಸಂಗದ ಕಡೆ ಹೆಚ್ಚು ಗಮನ ಹರಿಸಲಿಲ್ಲ.

ವಿಶ್ವದಲ್ಲಿ ಮುಸ್ಲಿಂರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ಇದರ ವಿರುದ್ಧ ಹೋರಾಟ ನಡಸಬೇಕು ಎಂದು ಅಲ್ಲಿನ ಉಗ್ರರು ಈತನನ್ನು ಮನ ಪರಿವರ್ತಿಸಿದ್ದರು.

ಈ ಎಲ್ಲ ಮಾಹಿತಿಯನ್ನು ಕೇಂದ್ರ ಗುಪ್ತಚರ ವಿಭಾಗ ರಾಷ್ಟ್ರೀಯ ತನಿಖಾ ದಳಕ್ಕೆ ಮಾಹಿತಿ ರವಾನಿಸಿತ್ತು. ಇದರ ಆಧಾರದ ಮೇಲೆ ಸರ್ಕಾರದ ಹಿರಿಯ ಅಕಾರಿಯೊಬ್ಬರಿಗೆ ಮಾಹಿತಿಯನ್ನು ಗೌಪ್ಯವಾಗಿಡುವಂತೆ ಸೂಚನೆ ಕೊಡಲಾಗಿತ್ತು. ಹೀಗಾಗಿ ರಾಜ್ಯದಲ್ಲಿ ನಡೆಯಬಹುದಾದ ಬಹುದೊಡ್ಡ ರಕ್ತಪಾತವನ್ನು ಪೆÇಲೀಸರು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Sri Raghav

Admin