34 ಸಾವಿರ ಕೋಟಿ ದಿವಾನ್ ಫೈನಾನ್ಸ್ ಹಗರಣದ ತನಿಖೆ ಆರಂಭಿಸಿದ ಸಿಬಿಐ

Social Share

ನವದೆಹಲಿ ಜು.19- ಬ್ಯಾಂಕ್‍ಗಳಲ್ಲಿ 34,815 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗಾಗಿ ಸಿಬಿಐ ದಿವಾನ್ ಹೌಸಿಂಗ್ ಫೈನಾನ್ಸ್ ಕಾಪೆರ್ರೇಷನ್ ಲಿಮಿಟೆಡ್‍ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಕಪಿಲ್ ವಾಧವನ್ ಮತ್ತು ನಿರ್ದೇಶಕ ೀರಜ್ ವಾಧವನ್ ಅವರನ್ನು ಲಕ್ನೋದಿಂದ ದೆಹಲಿಗೆ ಕರೆತರಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಐದು ದಿನಗಳ ಪೊಲೀಸ್ ಕಸ್ಟಡಿಯನ್ನು ಪೂರ್ಣಗೊಳಿಸುತ್ತಿರುವ ಚೋಟಾ ಶಕೀಲ್ ಅಜಯ್ ನಾವಂದರ್‍ನನ್ನು ಆಪಾದಿತರೊಂದಿಗೆ ಮಂಗಳವಾರ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಎಫ್‍ಐಆರ್‍ಗೆ ಸಂಬಂಧಿಸಿದಂತೆ ಸಿಬಿಐ ವಾಧವಾನ್‍ರನ್ನು ಕಸ್ಟಡಿಗೆ ನೀಡುವಂತೆ ಮನವಿ ಸಲ್ಲಿಸಿದೆ.

ಪಿಎಫ್ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತರಾಗಿದ್ದ ಕಪಿಲ್ ಮತ್ತು ವಾಧವನ್ ಲಕ್ನೋದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು ಎಂದು ತನಿಖಾ ಸಂಸ್ಥೆ ತಿಳಿಸಿದೆ. ಸೋಮವಾರ ಸಂಜೆ ಆರೋಪಿಗಳನ್ನು ದೆಹಲಿಗೆ ಕರೆತರಲಾಗಿದೆ.

2010 ಮತ್ತು 2018 ರ ನಡುವೆ 17 ಸದಸ್ಯರ ಕೂಟ 42,871 ಕೋಟಿ ರೂಪಾಯಿಗಳ ಸಾಲ ಪಡೆದಿತ್ತು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ (ಯುಬಿಐ) ದೂರಿನ ಮೇರೆಗೆ ಸಿಬಿಐ ತನಿಖೆ ನಡೆಸುತ್ತಿದೆ. ಇತರರೊಂದಿಗೆ ಸೇರಿ ವಧವಾನ್‍ಗಳು ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ. ತಪ್ಪು ದಾಖಲೆಗಳನ್ನು ಸಲ್ಲಿಸಿದ್ದು, ಸತ್ಯ ಮರೆಮಾಚಿದ್ದಾರೆ, ನಂಬಿಕೆ ದ್ರೋಹವೆಸಗಿದ್ದಾರೆ ಎಂಬ ಆರೋಪಗಳನ್ನು ದಾಖಲಿಸಲಾಗಿದೆ.

ಮೇ 2019ರ ನಂತರ ಸಾಲ ಮರು ಪಾವತಿಸದೆ ಸುಸ್ತಿದಾರರಾಗಿ 34,615 ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಬ್ಯಾಂಕ್ ಆರೋಪಿಸಿದೆ. ಡಿಎಚ್‍ಎಫ್‍ಎಲ್ ಖಾತೆ ಪುಸ್ತಕಗಳ ಲೆಕ್ಕಪರಿಶೋಧನೆಯು ಕಂಪನಿಯು ಆರೋಪಿಸಿದೆ ಎಂದು ತೋರಿಸಿದೆ ಹಣಕಾಸು ಅವ್ಯವಹಾರ ನಡೆದಿರುವುದನ್ನು ಖಚಿತ ಪಡಿಸಿತ್ತು.

ಸಾಲ ಪಡೆದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದ್ದು, ದಾಖಲೆಗಳನ್ನು ತಿದ್ದಲಾಗಿದೆ. ಆರೋಪಿಗಳು ಸಾರ್ವಜನಿಕರ ಹಣವನ್ನು ದುರುಪಯೋಗ ಪಡಿಸಿಕೊಂಡು ಸ್ವಂತ ಆಸ್ತಿ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.

Articles You Might Like

Share This Article