ಹೆಣ್ಣು ಮಗುವಿನ ತಂದೆಯಾದ ಧ್ರುವ ಸರ್ಜಾ, ಸಂಭ್ರಮ ತಂದ ಮಹಾಲಕ್ಷ್ಮಿ

Social Share

ಬೆಂಗಳೂರು, ಅ.2- ಸ್ಯಾಂಡಲ್‍ವುಡ್‍ನ ಆ್ಯಕ್ಷನ್ ಪ್ರಿನ್ಸ್ ಧ್ರುವಸರ್ಜಾ ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದ್ದು ಕುಟುಂಬದವರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಧ್ರುವಸರ್ಜಾರ ಮಡದಿ ಪ್ರೇರಣಾಗೆ ನಿನ್ನೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಕೆ.ಆರ್. ರಸ್ತೆಯ ಅಕ್ಷ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಧ್ರುವ ಸಂತಸ:
ಹೆಣ್ಣು ಮಗುವಿನ ತಂದೆಯಾದ ಸಂಭ್ರಮದಲ್ಲಿ ಧ್ರುವಸರ್ಜಾ ಅವರು ಇಂದು ನಮ್ಮ ಮನೆಗೆ ಹೆಣ್ಣು ಮಗುವಿನ ಆಗಮನವಾಗಿರುವುದರಿಂದ ನಮ್ಮ ಸಂತಸ ಹೆಚ್ಚಿಸಿದೆ. ನಾನು ಈ ಮೊದಲೇ ನನ್ನ ಅಣ್ಣ ಚಿರಂಜೀವಿಸರ್ಜಾನ ಮಗ ರಾಯನ್ ನಮ್ಮ ಮನೆಯ ಗಂಡು ಮಗ ಎಂದು ಹೇಳಿದ್ದೆ, ಅದರಂತೆ ನಮ್ಮ ಮಡದಿ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ನಮ್ಮ ಸಂತಸವನ್ನು ಹೆಚ್ಚಿಸಿದೆ.

ವೈದ್ಯೆ ಮಾಧುರಿ ಸುಮಂತ್‍ಗೆ ಧನ್ಯವಾದಗಳು ಜೈ ಆಂಜನೇಯ ಎಂದು ಧ್ರುವಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಧ್ರುವಸರ್ಜಾನ ಮಾಡಿದ್ದ ಪೋಸ್ಟ್ ಅನ್ನು ನೋಡಿ ಚಿತ್ರರಂಗದ ಕೆಲ ಸೆಲಬ್ರೆಟಿಗಳು ಹಾಗೂ ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈದಿದ್ದಾರೆ.

ಅದ್ಧೂರಿ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ಧ್ರುವಸರ್ಜಾ ಬಹದ್ದೂರ್, ಭರ್ಜರಿ, ಪ್ರೇಮ ಬರಹ, ಪೊಗರು ಚಿತ್ರಗಳಲ್ಲಿ ನಟಿಸಿದ್ದು ಮಾರ್ಟಿನ್ ಹಾಗೂ ನಿರ್ದೇಶಕ ಪ್ರೇಮ್‍ರವರ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Articles You Might Like

Share This Article