ಮಧುಮೇಹ ನಿಯಂತ್ರಣಕ್ಕೆ ‘ಮಸಾಲೆ’ ಟ್ರೀಟ್‌ಮೆಂಟ್‌..!

Spread the love

ಮಾನವ ಕುಲವನ್ನು ಬಹುವಾಗಿ ಕಾಡುತ್ತಿರುವ ಅನೇಕ ರೋಗಗಳಲ್ಲಿ ಮಧುಮೇಹಕ್ಕೆ ಪ್ರಥಮ ಸ್ಥಾನ. ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿಯೂ ವ್ಯಾಪಕವಾಗಿ ಹಬ್ಬಿರುವ ಈ ಮಧುಮೇಹ ದಿನೇ ದಿನೇ ಊಹೆಗೂ ಮೀರಿ ಹೆಚ್ಚಾಗುತ್ತಿದೆ.

ಪ್ರಗತಿಶೀಲ ಹಾಗೂ ಪ್ರಗತಿಪರ ರಾಷ್ಟ್ರಗಳಲ್ಲಿ ಇದರ ಹಾವಳಿ ಹೆಚ್ಚಾಗಿದ್ದರೂ, ಹಿಂದುಳಿದ ರಾಷ್ಟ್ರಗಳಲ್ಲಿಯೂ ಸಹ ಇದರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ವೃದ್ಧಿಯಾಗುತ್ತಿದೆ. ಇತ್ತೀಚಿನ ವರದಿ ಪ್ರಕಾರ, ಏಷ್ಯಾ ಖಂಡದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ, ಅದರಲ್ಲೂ ದಕ್ಷಿಣ ಏಷ್ಯಾ ಪ್ರಾಂತ್ಯದ ಭಾರತದಲ್ಲಿ ಅತಿ ತೀವ್ರಗತಿಯಿಂದ ಹಬ್ಬುತ್ತಿದೆ.

ಇದು ಪ್ರತಿ ಮನೆಗಳಲ್ಲೂ ತೀರ ಸಾಮಾನ್ಯವಾಗಿ ಕಂಡುಬರುತ್ತಿರುವ ರೋಗವಾಗಿದೆ. ನಮ್ಮ ದೇಹದಲ್ಲಿನ ಮೇದೋಜಿರಕಾಂಗ (ಪ್ಯಾಂಕ್ರಿಯಾ) ಎಂಬ ನಿರ್ನಾಳ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಎಂಬ ಗ್ರಂಥಿಸ್ರಾವವು, ನಾವು ಜೀವಿಸುವ ಆಹಾರದಲ್ಲಿರುವ ಸಕ್ಕರೆಯ ಅಂಶವನ್ನು ಪಚನ ಮಾಡಿ ಜೀವಕೋಶಗಳಿಗೆ ಒದಗಿಸುವ ಕ್ರಿಯೆ ಮಾಡುತ್ತದೆ ಆದರೆ, ಈ ಗ್ರಂಥಿ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇದ್ದಾಗ ಇನ್ಸುಲಿನ್‍ನ ಉತ್ಪತ್ತಿ ಪ್ರಮಾಣ ಕುಂಠಿತವಾಗುತ್ತದೆ.

ಆಗ ಆಹಾರದಲ್ಲಿನ ಸಕ್ಕರೆ ಅಂಶ ಸರಿಯಾದ ರೀತಿಯಲ್ಲಿ ಜೀರ್ಣವಾಗಿ ಧಾತುಗತವಾಗದೆ ರಕ್ತದಲ್ಲಿ ಸೇರಿ ಮೂತ್ರದ ಮೂಲಕ ಹೊರಬರುತ್ತದೆ. ದೇಹದಲ್ಲಿನ ಈ ಪರಿಸ್ಥಿತಿಗೆ ಸಕ್ಕರೆ ಕಾಯಿಲೆ, ಸಿಹಿಮೂತ್ರರೋಗ ಎಂದು ಕರೆಯುತ್ತಾರೆ.

# ಆಹಾರ ಶೈಲಿ ಬದಲಾವಣೆ ಮತ್ತು ಆಹಾರ ಅಭ್ಯಾಸ:
ನಮ್ಮ ಸಂಪ್ರದಾಯ ಮತ್ತು ಆಚರಣೆಗಳನ್ನು ನಾವು ಗಮನಿಸಿದಾಗ, ನಮ್ಮ ಪೂರ್ವಜರಲ್ಲಿ ಮಧುಮೇಹ ಅತ್ಯಂತ ಅಪರೂಪದ ಕಾಯಿಲೆಯಾಗಿತ್ತು. ಈಗ ಭಾರತದಲ್ಲಿ 60 ದಶಲಕ್ಷಕ್ಕೂ ಹೆಚ್ಚು ಜನರು ಡಯಾಬಿಟಿಸ್ ರೋಗಕ್ಕೆ ಒಳಗಾಗಿದ್ದಾರೆ.

ಜೀವನ ಶೈಲಿಗೆ ಸಂಬಂಧಪಟ್ಟ ರೋಗ ಇದಾಗಿದ್ದು, ಜಾತಿ, ಮತ, ಪಂಥ ಅಥವಾ ಆದಾಯವನ್ನು ಗಣನೆಗೆ ತೆಗೆದುಕೊಳ್ಳದೆ ಈ ರೋಗ ಎಲ್ಲರನ್ನೂ ಕಾಡುತ್ತಿದೆ. ಆಹಾರಾಭ್ಯಾಸಗಳು, ಶ್ರಮವಿಲ್ಲದ ಜೀವನ ಶೈಲಿ, ಪರಿಸರ ಇತ್ಯಾದಿಗಳು ಈ ರೋಗಕ್ಕೆ ಕೊಡುಗೆ ನೀಡುತ್ತಿವೆ.

ಮಧುಮೇಹ ರೋಗಿಗಳು ಪ್ರತಿನಿತ್ಯ ತೆಗೆದುಕೊಳ್ಳುವ ಆಹಾರದಲ್ಲಿ ಮೂರನೆ ಒಂದು ಭಾಗದಷ್ಟು ತರಕಾರಿ ಮತ್ತು ಕಾಯಿಪಲ್ಲೆಗಳನ್ನು ಸೇವಿಸುವುದು ಬಹಳ ಉತ್ತಮ. ಇದರಿಂದ ದೇಹ ಪೋಷಣೆಗೆ ಮತ್ತು ಆರೋಗ್ಯ ರಕ್ಷಣೆಗೆ ಅವಶ್ಯವಾದ ಜೀವಸತ್ವಗಳು ಮತ್ತು ಖನಿಜ ಅಂಶಗಳು ದೊರೆತು ರೋಗದಿಂದ ಉಂಟಾಗುವ ನಿಶ್ಶಕ್ತಿ ದೂರವಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

#ಮನೆ ಮದ್ದು:
ಸಾಂಬಾರ ಅಥವಾ ಮಸಾಲೆ ಪದಾರ್ಥಗಳು ಅಡುಗೆಗೆ ರುಚಿ ಅಥವಾ ಬಣ್ಣ ನೀಡುವುದಲ್ಲದೆ ಅನೇಕ ಆರೋಗ್ಯಕರ ಅನುಕೂಲಗಳನ್ನೂ ಸಹ ಒದಗಿಸುತ್ತದೆ. ಭಾರತದ ವಿವಿಧ ಭಾಗಗಳಲ್ಲಿ 50ಕ್ಕೂ ಹೆಚ್ಚು ಸಾಂಬಾರ ಬೆಳೆಗಳನ್ನು ಬೆಳೆಯಲಾಗುತ್ತದೆ. ಎಲೆಗಳು-ಕರಿಬೇವು, ಮೊಗ್ಗುಗಳು-ಲವಂಗ, ಬೀಜಗಳು-ಗಸಗಸೆ ಮತ್ತು ಬೆರ್ರಿಗಳು-ಕಪ್ಪು ಮೆಣಸು, ತೊಗಟೆ-ಚಕ್ಕೆ, ಬೇರು-ಶುಂಠಿ ಇತ್ಯಾದಿಯಂಥ ಗಿಡದ ವಿವಿಧ ಭಾಗಗಳಿಂದ ಸಂಬಾರಗಳನ್ನು ಪಡೆಯಲಾಗುತ್ತದೆ. ಇವುಗಳು ಒಂದಲ್ಲ ಒಂದು ರೀತಿಯಲ್ಲಿ ಆರೋಗ್ಯ ರಕ್ಷಣೆಗೆ ನೆರವಾಗುತ್ತವೆ.

ಉದಾಹರಣೆಗೆ ಕಪ್ಪು ಮೆಣಸನ್ನು ಶೀತ, ನೆಗಡಿ ಮತ್ತು ಜ್ವರಕ್ಕೆ, ಶುಂಠಿಯನ್ನು ಹುಣ್ಣು ನಿರೋಧಕವಾಗಿ ಹಾಗೂ ಅರಿಶಿಣವನ್ನು ನಂಜುನಾಶಕವಾಗಿ ಬಳಸಲಾಗುತ್ತದೆ. ಇವುಗಳು ಟೈಪ್-2 ಡಯಾಬಿಟಿಸ್ ನಿಯಂತ್ರಣದಲ್ಲೂ ಮಹತ್ವದ ಪಾತ್ರ ವಹಿಸುತ್ತವೆ. ಚಯಾಪಚಯ ಕ್ರಿಯೆಗೆ ಇವು ನೆರವಾಗುತ್ತವೆ.

ಈ ಸಾಂಬಾರ ಪದಾರ್ಥಗಳಲ್ಲಿ ಫೆನೊಲಿಕ್ಸ್, ಫ್ಲವೊನಾಯ್ಡ್ಸ್, ಆಲ್ಕಾಲಾಯ್ಡ್ಸ್, ಸಪೋನಿಸ್ ಇತ್ಯಾದಿಯಂಥ ಸಸ್ಯಜನ್ಯ ರಾಸಾಯನಿಕಗಳು ಸಮೃದ್ಧವಾಗಿರುತ್ತವೆ. ಸಾಂಬಾರ ಪದಾರ್ಥಗಳಲ್ಲಿರುವ ಜೀವಸತ್ವಗಳು ಮತ್ತು ಕಿಣ್ವಗಳು ಹಾಗೂ ಸಸ್ಯಜನ್ಯ ರಾಸಾಯನಿಕಗಳು ಮಧುಮೇಹ ರೋಗ ಪ್ರಕೋಪವನ್ನು ಹತೋಟಿಯಲ್ಲಿಡಲು ಸಹಕಾರಿ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ.

# ದಾಲ್ಚಿನ್ನಿ/ಲವಂಗ:
ದಾಲ್ಚಿನ್ನಿ ಪುಡಿಯು ರಕ್ತದೊತ್ತಡ ಮಟ್ಟಗಳನ್ನು ನಿಯಂತ್ರಿಸುವಲ್ಲಿ ನೆರವಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯ ಏಜೆಂಟ್ ಆಗಿ ಕಾರ್ಯನಿರ್ವಹಿಸುವ ಮೂಲಕ ಇದು ಮಲಬದ್ಧತೆಯನ್ನು ನಿವಾರಿಸುತ್ತದೆ. ಮಧುಮೇಹ ನಿಯಂತ್ರಣದಲ್ಲೂ ಇದು ಪ್ರಮುಖ ಪಾತ್ರ ವಹಿಸುತ್ತದೆ.

ಇದರಲ್ಲಿರುವ ಕೆಲವು ರಾಸಾಯನಿಕ ವಸ್ತುಗಳು ದೇಹದಲ್ಲಿನ ಸಕ್ಕರೆ ಮಟ್ಟಗಳನ್ನು ಹತೋಟಿಗೆ ತಂದು ಸಮತೋಲನ ಕಾಪಾಡುತ್ತವೆ. ದಾಲ್ಚಿನ್ನಿ ಪುಡಿ ಇನ್ಸುಲಿನ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಟಾನ್ನಿನ್ಸ್ ಎಂಬ ಇನ್ನೊಂದು ರಾಸಾಯನಿಕ ಇದರಲ್ಲಿದ್ದು, ಇದು ಲವಂಗದಿಂದ ತೆಗೆದ ಶೇ.72-90ರಷ್ಟು ಅಗತ್ಯ ತೈಲವನ್ನು ಒಳಗೊಂಡಿರುತ್ತದೆ ಹಾಗೂ ಇದು ಜಾಯಿಕಾಯಿ, ದಾಲ್ಚಿನ್ನಿ, ತುಳಸಿಯಲ್ಲಿ ಸಹ ಕಂಡುಬರುತ್ತದೆ.

ಇದರಲ್ಲಿ ಮೆಗ್ನೀಷಿಯಂ, ಓಮೆಗಾ-3 ಕೊಬ್ಬು ಆಮ್ಲ, ಮ್ಯಾಂಗನೀಸ್, ವಿಟಮಿನ್ ಸಿ, ವಿಟಮಿನ್ ಕೆ, ಕ್ಯಾಲ್ಷಿಯಂ ಮತ್ತು ಫೈಬರ್‍ಗಳು ಹೇರಳವಾಗಿರುತ್ತದೆ. ಎರಡು ಟೀ ಚಮಚ (4.20 ಗ್ರಾಂ.ಗಳು) ಲವಂಗದಲ್ಲಿ ಶೇ.13.57ರಷ್ಟು ಕ್ಯಾಲೋರಿಗಳು ಇರುತ್ತವೆ. ಲವಂಗ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ಆರೋಗ್ಯಕಾರಿ ಪ್ರಯೋಜನಗಳು ಹಲವಾರು.

# ಶುಂಠಿ:
ಶುಂಠಿಯಲ್ಲಿ ವಿಟಮಿನ್‍ಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಶುಂಠಿಯಲ್ಲಿ ಸಮೃದ್ಧ ಪ್ರಮಾಣದ ಕಾರ್ಬೋಹೈಡ್ರೇಟ್‍ಗಳು ಮತ್ತು ಮಾಧ್ಯಮ ಪ್ರಮಾಣದ ಡಯಟರಿ ಫೈಬರ್ ಮತ್ತು ಪ್ರೊಟೀನ್‍ಗಳಿವೆ.ಶುಂಠಿಯಲ್ಲಿ ಗಮನಿಸಬೇಕಾದ ಮುಖ್ಯಸಂಗತಿ ಎಂದರೆ ಕಡಿಮೆ ಪ್ರಮಾಣದ ಕೊಬ್ಬು ಮೌಲ್ಯ ಹಾಗೂ ಸಮ ಪ್ರಮಾಣದಲ್ಲಿರುವ ಕೊಲೆಸ್ಟರಾಲ್. ತಾಜಾ ಶುಂಠಿಯಲ್ಲಿ ವಿಟಮಿನ್ ಸಿ, ಬಿ ಕಾಂಪ್ಲೆಕ್ಸ್ ವಿಟಮಿನ್‍ಗಳು ಸಮೃದ್ಧವಾಗಿರುತ್ತವೆ ಹಾಗೂ ವಿಟಮಿನ್ ಇ ಸಾಧಾರಣ ಪ್ರಮಾಣದಲ್ಲಿರುತ್ತವೆ.

ಇದರಲ್ಲಿ ಫಾಸ್ಪರಸ್, ಜಿಂಕ್ ಮತ್ತು ಕ್ಯಾಲ್ಷಿಯಂನ ಸಾಧಾರಣ ಮೂಲಗಳೊಂದಿಗೆ ತಾಮ್ರ, ಮ್ಯಾಗ್ನಿಸಿಯಂ, ಮ್ಯಾಂಗನಿಸ್, ಕಬ್ಬಿಣ ಸಾರದ ಖನಿಜಗಳಿರುತ್ತವೆ. ಸಾಂಬಾರ/ಮಸಾಲೆ ಪದಾರ್ಥಗಳಾಗಿ ಮತ್ತು ಅಡುಗೆಗೆ ಇವುಗಳನ್ನು ಬಳಸುವುದರಿಂದ ಪ್ರಯೋಜನಕಾರಿ ಆರೋಗ್ಯಕರ ಪೌಷ್ಠಿಕಾಂಶಗಳು ಲಭಿಸುತ್ತವೆ. ವಾಯುಬಾಧೆ ಮತ್ತು ಅತಿಸಾರದಿಂದ ಉಂಟಾಗುವ ಅನಾನುಕೂಲಕ್ಕೆ ಉಪಶಮನ ನೀಡುತ್ತದೆ. ಕ್ಯಾನ್ಸರ್ ರೋಗ ಚಿಕಿತ್ಸೆಯಲ್ಲಿಯೂ ಶುಂಠಿ ನೆರವಾಗುತ್ತದೆ.

# ಅರಿಶಿಣ:
ಕಚ್ಚಾ ಅರಿಶಿಣದ ಬೇರಿನಿಂದ ಪುಡಿ ಮಾಡಿ ಸೋಸುವಿಕೆಯ ಮೂಲಕ ಅದರ ಸಾರವನ್ನು ಹೊರತೆಗೆದು ರಸದ ರೂಪದಲ್ಲಿ ತಿಳಿಯಾದ ನಸುಗೆಂಪು ಮತ್ತು ಹಳದಿಯುಕ್ತ ದ್ರಾವಣ ಅಥವಾ ತಾಜಾರಸ ಇದಾಗಿದೆ. ಇದು ಸಂಪೂರ್ಣ 100ರಷ್ಟು ನೈಸರ್ಗಿಕ ಉತ್ಪನ್ನವಾಗಿದೆ. ಅರಿಶಿಣ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ವೈರಾಣು ನಿರೋಧಕವಾಗಿ ಕೆಲಸ ಮಾಡುವ ಭಾರತೀಯ ಮೂಲಕ ಗಿಡಮೂಲಿಕೆಯಾಗಿದೆ.

ಹರಿದ್ರಾರಸವನ್ನು (ಪರಿಶುದ್ಧ ದ್ರವ ರೂಪದ ಅರಿಶಿಣ) ನಿಯಮಿತವಾಗಿ ಅಥವಾ ಕ್ರಮಬದ್ಧವಾಗಿ ತೆಗೆದುಕೊಂಡರೆ ಬೊಜ್ಜು ಮತ್ತು ತೂಕ ಕಡಿಮೆಯಾಗುತ್ತದೆ. ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಲಿವರ್, ಪಿತ್ತಕೋಶ ಸಮಸ್ಯೆ ದೂರವಾಗುತ್ತದೆ. ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ರಕ್ತ ಶುದ್ಧಿಯಾಗುತ್ತದೆ.

ರಕ್ತದೊತ್ತಡ, ಕೊಲೆಸ್ಟರಾಲ್, ಶೀತ, ಕಫ, ಕ್ಯಾನ್ಸರ್, ಮಧುಮೇಹ, ಕೊಬ್ಬು, ವಿಷಯುಕ್ತ ಆಹಾರ ಸೇವನೆ, ಜ್ವರ, ಪಿತ್ತಕೋಶದಲ್ಲಿ ಕಲ್ಲು, ಅತಿಸಾರ, ಅಜೀರ್ಣ, ಮೂರ್ಛೆರೋಗ, ಮುಟ್ಟಿನ ಸಮಸ್ಯೆ, ಮೂಲವ್ಯಾಧಿ, ಹೊಟ್ಟೆ ಹುಣ್ಣು ಹಾಗೂ ಗಾಯ ಇನ್ನೂ ಹಲವಾರು ಆರೋಗ್ಯ ಸಂಬಂಧಿತ ಸಮಸ್ಯೆಗಳ ಉಪಶಮನಕ್ಕೆ ಬಳಸುತ್ತಾರೆ.

# ಮೆಂತ್ಯ:
ಮೆಂತ್ಯ ಸಕ್ಕರೆ ರೋಗ ನಿಯಂತ್ರಣಕ್ಕೆ ಒಂದು ಉತ್ತಮ ಔಷಧಿ. ಮೆಂತ್ಯದ ಕಾಳನ್ನು ಹಳದಿ ಬಣ್ಣಕ್ಕೆ ಬರುವಂತೆ ಹದವಾಗಿ ಹುರಿದು ಪುಡಿಮಾಡಿ ಇಟ್ಟುಕೊಳ್ಳಬೇಕು. ಮೆಂತ್ಯದಲ್ಲಿ ಫೆನೊಲಿಕ್ಸ್, ಫ್ಲವೊನಾಯ್ಡ್ಸ್, ಆಲ್ಕಾಲಾಯ್ಡ್ಸ್, ಸಪೋನಿಸ್ ಇತ್ಯಾದಿಯಂಥ ಸಸ್ಯಜನ್ಯ ರಾಸಾಯನಿಕಗಳು ಸಮೃದ್ಧವಾಗಿರುತ್ತವೆ.

ಸಾಂಬಾರ ಪದಾರ್ಥಗಳಲ್ಲಿರುವ ಜೀವಸತ್ವ ಗಳು ಮತ್ತು ಕಿಣ್ವಗಳು ಹಾಗೂ ಸಸ್ಯಜನ್ಯ ರಾಸಾಯನಿಕಗಳು ಮಧುಮೇಹ ರೋಗ ಪ್ರಕೋಪವನ್ನು ಹತೋಟಿಯಲ್ಲಿಡಲು ಸಹಕಾರಿ ಬೆಳಿಗ್ಗೆ ಮತ್ತು ಸಂಜೆ ಒಂದೊಂದು ಚಮಚೆ ಪುಡಿಯನ್ನು ನೀರಿನ ಜತೆ ಸೇವಿಸುತ್ತ ಪಥ್ಯ ಮಾಡಿದರೆ ಸಿಹಿಮೂತ್ರ ರೋಗ ನಿಯಂತ್ರಣದಲ್ಲಿ ಇರುತ್ತದೆ.ಕೆಲವರು ಮೆಂತ್ಯವನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಅದನ್ನು ಅಗಿದು ತಿನ್ನು ತ್ತಾರೆ. ಇದರಿಂದಲೂ ಉತ್ತಮ ಪರಿಣಾಮ ಉಂಟು.

Facebook Comments

Sri Raghav

Admin