ಗೋಧಿಯಿಂದ ಮಧುಮೇಹ : ಪ್ರಹ್ಲಾದ್ ಜೋಷಿ

Social Share

ಬೆಂಗಳೂರು,ಜ.21- ಗೋಧಿ ಹೆಚ್ಚು ಬಳಕೆಯಿಂದ ಮಧುಮೇಹ ಹೆಚ್ಚಾಗುತ್ತಿದ್ದು, ಇದರ ಬಗ್ಗೆ ಹೆಚ್ಚಿನ ಅಧ್ಯಯನವಾಗಬೇಕು ಎಂದು ಕೇಂದ್ರ ಸಂಸ ದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಸಲಹೆ ಮಾಡಿದರು.

ಅರಮನೆ ಮೈದಾನದಲ್ಲಿಂದು ಆರಂಭಗೊಂಡ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳದಲ್ಲಿ ಮಾತನಾಡಿದ ಅವರು, ಗೋಧಿ ಸಾಮಾನ್ಯ ಆಹಾರವಲ್ಲ. ಅದರ ಬಳಕೆಯಿಂದ ಮಧುಮೇಹ ಹೆಚ್ಚಾಗುತ್ತಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಸಿರಿಧಾನ್ಯಗಳ ಬಳಕೆ ಸಾವಿರಾರು ವರ್ಷದಿಂದ ಮಾಡಲಾಗುತ್ತಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಜಿ-20 ಶೃಂಗ ರಾಷ್ಟ್ರಗಳ ಪ್ರತಿನಿಗಳಿಗೂ ಸಿರಿಧಾನ್ಯದ ಆಹಾರವನ್ನು ನೀಡಿದ್ದೇವೆ. ಸಿರಿಧಾನ್ಯ ಉತ್ಪಾದಿಸುವ ದೊಡ್ಡ ರಾಷ್ಟ್ರ ಭಾರತ. ಸಿರಿಧಾನ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ಹಾಗೂ ಸಂಶೋಧನೆಗಳು ಆಗಬೇಕು ಎಂದು ಅವರು ಸಲಹೆ ಮಾಡಿದರು.

ಕೇಂದ್ರ ಕೃಷಿ ಉತ್ಪನ್ನಗಳ ರಫ್ತಿನಲ್ಲಿ ಭಾರತ 9ನೇ ಸ್ಥಾನದಲ್ಲಿದೆ. ಕೃಷಿಗೆ 1.3 ಲಕ್ಷ ಕೋಟಿ ಬಜೆಟ್ ಒದಗಿಸಲಾಗಿದೆ. 11 ಕೋಟಿ ರೈತರಿಗೆ 2.8 ಲಕ್ಷ ಕೋಟಿ ರೂ. ಕೃಷಿ ಸನ್ಮಾನ್ ಯೋಜನೆಯಡಿ ನೀಡಲಾಗಿದೆ. 8 ಕೋಟಿ ರೈತರಿಗೆ ಸಾಲಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಹಳೆಯ ಸಂಸತ್‍ನಲ್ಲೇ ಬಜೆಟ್ ಅಧಿವೇಶನ : ಓಂ ಬಿರ್ಲಾ

ಶತಮಾನಗಳಿಂದ ನಮ್ಮ ಹಿರಿಯರು ಸಿರಿಧಾನ್ಯ ಬಳಸಿ ಆರೋಗ್ಯ ಕಾಪಾಡಿಕೊಂಡಿದ್ದಾರೆ. 314 ಮಿಲಿಯನ್ ಮೆಟ್ರಿಕ್ ಟನ್ ಆಹಾರಧಾನ್ಯ, 345 ಮಿಲಿಯನ್ ಮೆಟ್ರಿಕ್ ಟನ್ ಹಣ್ಣುಗಳನ್ನು ಬೆಳೆಯಲಾಗುತ್ತಿದೆ ಎಂದರು.
ಸಿರಿಧಾನ್ಯಕ್ಕೆ ಹೆಚ್ಚಿನ ಉತ್ತೇಜನವನ್ನು ನೀಡಲಾಗುತ್ತಿದೆ. ಸಂಸದರಿಗೆ ಸಿರಿಧಾನ್ಯದಿಂದ ಸಿದ್ದಪಡಿಸಿದ ರಾಗಿರೊಟ್ಟಿ, ರಾಗಿಮುದ್ದೆ, ಜೋಳದ ರೊಟ್ಟಿ ಊಟವನ್ನು ನೀಡಲಾಯಿತು ಎಂದು ಅವರು ಹೇಳಿದರು.

Diabetes, wheat, Minister, Prahlad Joshi,

Articles You Might Like

Share This Article