ಮಧುಮೇಹಕ್ಕೆ ‘ಬಾದಾಮಿ’ ಔಷದಿ..!

Spread the love

ಒಂದೊಂದು ಬೀಜಗಳಲ್ಲಿ ಬೇರೆ ಬೇರೆ ರೀತಿಯ ಪೋಷಕಾಂಶಗಳು ಇವೆ. ಇವುಗಳ ಸೇವನೆಯಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬಾದಾಮಿಯಲ್ಲೂ ಹಲವಾರು ರೀತಿಯ ಪೋಷಕಾಂಶಗಳು ನಮಗೆ ಸಿಗುವುದು.

ಬಾದಾಮಿ ಸೇವಿಸಿದಲ್ಲಿ ಅವು ನಿಮ್ಮ ರಕ್ತದಲ್ಲಿನ ಸಕ್ಕರೆಯ ಅ0ಶ, ಇನ್ಸುಲಿನ್‌ನ ಅ0ಶ, ಹಾಗೂ ಸೋಡಿಯ0ನ ಮಟ್ಟಗಳನ್ನು ತಗ್ಗಿಸುತ್ತವೆ ಹಾಗೂ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದ ಸ0ಭಾವ್ಯವನ್ನು ನಿಯ0ತ್ರಿಸಬಲ್ಲ ಮೆಗ್ನೀಷಿಯ0ನ ಮಟ್ಟವನ್ನು ಶರೀರದಲ್ಲಿ ಹೆಚ್ಚಿಸುತ್ತವೆ.

ಡಯಾಬಿಟಿಸ್‌ರೋಗಕ್ಕೆ ಸಂಬಂಧಿಸಿದ ಅಪಾಯಕರ ಅಂಶಗಳನ್ನು ಕಡಿಮೆ ಮಾಡುವಲ್ಲಿ ಬಾದಾಮಿ ಸಹಕಾರಿ ಎಂದಿದೆ ಅಧ್ಯಯನ. ನಿತ್ಯ ಬಾದಾಮಿ ತಿನ್ನುವುದು ಗ್ಲೈಸೆಮಿಕ್‌ಮತ್ತು ಕಾರ್ಡಿಯೊವಾಸ್ಕ್ಯುಲರ್‌ಪ್ರಮಾಣಗಳನ್ನು ಸುಧಾರಿಸುತ್ತದೆ ಹಾಗೂ ಉತ್ತಮ ಆರೋಗ್ಯವನ್ನು ನೀಡುತ್ತದೆ.

ಸಂಶೋಧಕರ ಪ್ರಕಾರ, ಅಧಿಕ ಪ್ರಮಾಣ ಹಾಗೂ ಕಡಿಮೆ ವಯಸ್ಸಿನಲ್ಲಿ ಕಂಡು ಬರುವ ಟೈಪ್‌2 ಡಯಾಬಿಟಿಸ್‌ಸೌಥ್‌ಏಶಿಯನ್‌ಫೆನೊಟೈಪ್‌ಎಂದು ಕರೆಯಲಾಗುವ ಆನುವಂಶಿಕ ಕಾರಣದಿಂದ ಉಂಟಾಗುತ್ತದೆ. ಈ ಕಾರಣದಿಂದಾಗಿ ಭಾರತೀಯರು ಹೆಚ್ಚಿನ ಪ್ರಮಾಣದ ಇನ್ಸೂಲಿನ್‌ಪ್ರತಿರೋಧ ಹಾಗೂ ಟೈಪ್‌2 ಡಯಾಬಿಟಿಸ್‌ಗೆ ತುತ್ತಾಗುವ ಅಪಾಯವನ್ನು ಹೊಂದಿರುತ್ತಾರೆ.

ಸಂಶೋಧನಾ ಅಧ್ಯಯನದ ಪ್ರಕಾರ, ಬಾದಾಮಿ ಸೇವನೆಯು ಈ ಅಧ್ಯಯನದಲ್ಲಿ ಕಂಡುಬಂದ ಕಾರ್ಡಿಯೊಮೆಟಬಾಲಿಕ್‌ಪ್ರಯೋಜನಗಳನ್ನು ತೋರಿಸಿಕೊಟ್ಟಿದೆ. ಬಾದಾಮಿಯು ಪ್ರೊಟೀನ್‌, ನಾರಿನಂಶ, ದೇಹಕ್ಕೆ ಬೇಕಾದ ಉತ್ತಮ ಕೊಬ್ಬು, ವಿಟಮಿನ್‌ಇ, ಪೊಟ್ಯಾಶಿಯಂ ಹಾಗೂ ಮ್ಯಾಗ್ನೇಶಿಯಂಗಳನ್ನು ಆಹಾರದಲ್ಲಿ ಬೆರೆಸುತ್ತದೆ ಮತ್ತು ಗ್ಲೈಸೆಮಿಕ್‌ಪ್ರಮಾಣ ಕಡಿಮೆಯಾಗಿರುವಂತೆ ನೋಡಿಕೊಳ್ಳುತ್ತದೆ.

ಕ್ಯಾಲರಿಯುಕ್ತ ಆಹಾರವನ್ನು ಹೆಚ್ಚಿಸದೇ ಆಹಾರದ ಗುಣಮಟ್ಟವನ್ನು ಹೆಚ್ಚಿಸುವ ಬಾದಾಮಿ ಸೇವನೆಯ ಪ್ರಯೋಜನಗಳನ್ನು ಈ ಹಿಂದಿನ ಸಂಶೋಧನೆಗಳು ತೋರಿಸಿಕೊಟ್ಟಿವೆ.

ಬಾದಾಮಿ ಚಿಕಿತ್ಸೆಯ ನಂತರದಲ್ಲಿ, ಸೊಂಟದ ಸುತ್ತಳತೆ, ಸೊಂಟದಿಂದ ಎತ್ತರದ ಪ್ರಮಾಣ, ಸಮಗ್ರ ಕೊಲೆಸ್ಟ್ರಾಲ್‌, ಟ್ರಿಗ್ಲಿಸರೈಡ್ಸ್‌, ಎಲ್‌ಡಿಎಲ್‌ಕೊಲೆಸ್ಟ್ರಾಲ್‌, ಸಿ-ರಿಯಾಕ್ಟಿವ್‌ಪ್ರೊಟೀನ್‌ದೀರ್ಘಕಾಲೀನ ಬ್ಲಡ್‌ಶುಗರ್‌ನಿಯಂತ್ರಕ ಸೂಚಕಗಳು ಅಧ್ಯಯನವನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಲ್ಲಿ ಸುಧಾರಿಸಿದ್ದು ಕಂಡು ಬಂದಿತು.

‘ಟೈಪ್‌2 ಡಯಾಬಿಟಿಸ್‌ಹೊಂದಿರುವ ಜನರ ಆಹಾರಕ್ರಮದಲ್ಲಿ ಬಾದಾಮಿಯನ್ನು ಸೇರಿಸುವುದರಿಂದ ಸಾಕಷ್ಟು ಲಾಭಗಳಿವೆ’ ಎನ್ನುತ್ತಾರೆ ಅಧ್ಯಯನದ ಪ್ರಮುಖ ಸಂಶೋಧಕಿ ಡಾ.ಸೀಮಾ ಗುಲತಿ. ಡಾ.ಅನೂಪ್‌ಮಿಶ್ರಾ ಪ್ರಕಾರ, ‘ಭಾರತೀಯರಿಗೆ ಬಾದಾಮಿ ಪಾರಂಪರಿಕ ಆಹಾರ. ಈಗ ಅದನ್ನು ನಾವು ಆಹಾರ ಸೇವನಾ ಅವಧಿಗಳ ನಡುವೆ ಕುರುಕಲು ತಿಂಡಿಯ ರೂಪದಲ್ಲಿ ಸೇವಿಸುವಂತೆ ಸೂಚಿಸಬಹುದು.