ನವದೆಹಲಿ,ಫೆ.11- ಕೃಷಿಯಲ್ಲಿ ಡೀಸೆಲ್ ಬಳಕೆಯನ್ನು 2020ರ ವೇಳೆಗೆ ಸಂಪೂರ್ಣವಾಗಿ ನಿಲ್ಲಿಸುವುದು ಮತ್ತು ನವೀಕೃತ ಇಂಧವನ್ನು ಬಳಕೆ ಮಾಡಲು ಕ್ರಿಯಾ ಯೋಜನೆ ರೂಪಿಸುವಂತೆ ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಹೇಳಿದ್ದಾರೆ. ಎಲ್ಲ ರಾಜ್ಯ ಸರ್ಕಾರಗಳ ಹಾಗೂ ಕೇಂದ್ರಾಡಳಿತ ಪ್ರದಶಗಳ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದಶಿಗಳ ಜೊತೆ ವಚ್ರ್ಯುಲ್ ಸಭೆ ನಡೆಸಿದ ಸಚಿವರು, ಹವಾಮಾನ ಬದಲಾವಣೆಗೆ ಪ್ರಧಾನಿಯವರ ಬದ್ದತೆಯ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಒತ್ತು ನೀಡಬೇಕು ಎಂದು ಹೇಳಿದರು.
ಇಂಧನ ಕ್ಷೇತ್ರದ ಸುಸ್ಥಿರತೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ಕೆಲಸ ಮಾಡಬೇಕು. ಇಂಗಾಲದ ವ್ಯಾಪ್ತಿಯನ್ನು ತಗ್ಗಿಸಿ ಜಾಗತಿಕ ಹವಾಮಾನ ಬದಲಾವಣೆಗೆ ಕೊಡುಗೆ ನೀಡುವ ಅಗತ್ಯವಿದೆ. ಇಂಧನ ಸಂರಕ್ಷಣೆಗಾಗಿ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ರ್ನಿಷ್ಟವಾದ ಗುರಿಯೊಂದಿಗೆ ಯೋಜನೆ ರೂಪಿಸಬೇಕು.
ಇಂಧನ ಕ್ಷಮತೆ ಮಾನದಂಡಗಳನ್ನು ಜಾರಿಗೊಳಿಸುವ ಜೊತೆಗೆ ಸಾಮಥ್ಯ ಸದ್ಬಳಕೆಗೆ ಆದ್ಯತೆ ನೀಡಬೇಕು. ಸಂರಕ್ಷಿತ ಮತ್ತು ಸುಧಾರಿತ ಇಂಧನ ವ್ಯವಸ್ಥೆಯ ಮೂಲಕ ಆರ್ಥಿಕ ಹೊರೆಯನ್ನು ತಗ್ಗಿಸಬಹುದಾಗಿದೆ. ಆಧುನಿಕ ಭಾರತ ನಿರ್ಮಾಣ ಮತ್ತು ನಾವೀನ್ಯ ಇಂಧನ ವ್ಯವಸ್ಥೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭವಿಷ್ಯದ ಯೋಜನೆಗಳನ್ನು ರೂಪಿಸಬೇಕು ಮತ್ತು ಗುರಿ ಸಾಧನೆ ಮಾಡಬೇಕು.
ವಾಣಿಜ್ಯ ಸಂಕೀರ್ಣಗಳು ಹಸಿರು ಇಂಧನ ಬಳಕೆಗೆ ಒತ್ತು ಕೊಡಬೇಕು. ಇದಕ್ಕಾಗಿ ರಾಜ್ಯಗಳು ಕಾನೂನು ತರಬೇಕು. ಬೇಡಿಕೆಯಷ್ಟು ವಿದ್ಯುತ್ ಸಂಗ್ರಹಕ್ಕೆ ವ್ಯವಸ್ಥೆ ರೂಪಿಸಿಕೊಳ್ಳಬೇಕು. ದೇಶದ 5 ಯೋಜನೆಗಳಿಂದ ಸಾಂಪ್ರದಾಯಿಕವಲ್ಲದ ಇಂಧನ ಸಾಮಥ್ರ್ಯ 2030ರ ವೇಳೆಗೆ ಗೀ.ಗಾ ವ್ಯಾಟ್‍ಗೆ ತಲುಪಲಿದೆ.
ದೇಶದ ಇಂಧನ ಬೇಡಿಕೆಯ ಶೇ.50ರಷ್ಟನ್ನು ನವೀಕೃತ ಇಂಧನಗಳು ಭರ್ತಿ ಮಾಡಲಿವೆ. ಈ ಮೂಲಕ ಒಂದು ಬಿಲಿಯನ್ ಟನ್ ಇಂಗಾಲದ ಮಾಲಿನ್ಯವನ್ನು ತಗ್ಗಿಸಲಾಗುತ್ತದೆ. ಇದರಿಂದ 2070ರ ವೇಳೆಗೆ ಶೇ.45ರಷ್ಟು ಇಂಗಾಲದ ಆರ್ಥಿಕ ಹೊರೆಯನ್ನು ನಿಗ್ರಹಿಸಲಿದೆ ಎಂದು ತಿಳಿಸಿದ್ದಾರೆ.
