ಮತದಾರರ ಮನವೋಲಿಕೆಗೆ ಉಡುಗೊರೆ ನೀಡುವವರಿಗೆ ಕಾದಿದೆ ಸಂಕಷ್ಟ

Social Share

ಬೆಂಗಳೂರು,ಮಾ.16- ಚುನಾವಣೆಗೂ ಮುನ್ನಾ ಮತದಾರರ ಮನವೋಲಿಕೆಗೆ ನಾನಾ ರೀತಿಯ ಉಡುಗೊರೆ ನೀಡುವವರ ಮೇಲೆ ತೆರಿಗೆ ಸಂಬಂಸಿದ ಇಲಾಖೆಗಳು ಕಣ್ಣಿದ್ದು, ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ.

ವಿಧಾನಸಭೆ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇದೆ. ಮತದಾರರನ್ನು ಸೆಳೆಯಲು ಪಕ್ಷಾತೀತವಾಗಿ ಎಲ್ಲರೂ ಉಡುಗೊರೆಗಳ ಮೊರೆ ಹೋಗಿದ್ದಾರೆ. ಆರ್ಥಿಕವಾಗಿ ಪ್ರಬಲವಾಗಿರುವವರು ಟಿವಿ, ಚಿನ್ನಾಭರಣಗಳನ್ನು ನೀಡಿದರೆ, ಸಾಧಾರಣವಾಗಿರುವವರು ಸೀರೆ, ಕುಕ್ಕರ್ ಸೇರಿದಂತೆ ಇತರ ವಸ್ತುಗಳನ್ನು ನೀಡುತ್ತಿದ್ದಾರೆ. ಈ ಎಲ್ಲಾ ಉಡುಗೊರೆಗಳನ್ನು ನೀಡಲು ನಡೆದಿರುವ ಖರೀದಿ ವ್ಯವಹಾರದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಕಣ್ಣಿಟ್ಟಿದೆ.

ಬಹುತೇಕ ವರ್ತಕರು ಜಿಎಸ್‍ಟಿ ವಂಚಿಸಿ ಸಗಟು ವ್ಯಾಪಾರದ ಮೌಲ್ಯದಲ್ಲಿ ಚುನಾವಣಾ ಆಕಾಂಕ್ಷಿಗಳಿಗೆ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದಾರೆ. ಸರಿ ಸುಮಾರು ಒಂದೊಂದು ಕ್ಷೇತ್ರಕ್ಕೆ ಒಂದರಿಂದ ಎರಡು ಲಕ್ಷದವರೆಗೂ ವಸ್ತುಗಳ ಖರೀದಿಯಾಗುತ್ತಿದೆ. ಈ ಬೃಹತ್ ಪ್ರಮಾಣದ ವಸ್ತುಗಳ ವ್ಯವಹಾರ ಬಹುತೇಕ ತೆರಿಗೆ ವಂಚನೆಯಲ್ಲೆ ನಡೆದಿದೆ ಎಂದು ಹೇಳಲಾಗಿದೆ.

ಮುಂದಿನ ದಿನಗಳಲ್ಲಿ ಚುನಾವಣಾ ಆಯೋಗ ಲೆಕ್ಕಕ್ಕೆ ಪರಿಗಣಿಸಬಹುದು ಎಂಬ ಕಾರಣಕ್ಕೆ ಆಕಾಂಕ್ಷಿಗಳು, ಶಾಸಕರು ಬೇನಾಮಿ ಹೆಸರಿನಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ರಹಸ್ಯವಾಗಿಯೇ ಇವುಗಳ ಸರಬರಾಜು ನಡೆಯುತ್ತಿದೆ. ಇದೆಲ್ಲದರ ಮೇಲೂ ಆಡಳಿತ ಯಂತ್ರ ಕಣ್ಣಿಟ್ಟಿದೆ.

ಕಚ್ಚಾ ಸರಕು ಖರೀದಿ, ಉತ್ಪಾದನೆ ಸೇರಿದಂತೆ ವಿವಿಧ ಹಂತಗಳಲ್ಲಿ ನಿಗಾ ವಹಿಸಲಾಗುತ್ತಿದೆ. ಮೊನ್ನೆಯಷ್ಟೆ ಹಾವೇರಿಯ ರಾಣೇಬೆನ್ನೂರಿನಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಮನೆಯ ಮೇಲೆ ದಾಳಿ ನಡೆಸಿ ಸಾಕಷ್ಟು ಉಡುಗೊರೆಯ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

ವಾಸ್ತವವಾಗಿ ಯಾವುದೇ ವಸ್ತುಗಳನ್ನು ಜಪ್ತಿ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ ಎನ್ನಲಾಗುತ್ತಿದೆ. ಆದರೆ ನಡೆದಿರುವ ಮಾರಾಟ ಮತ್ತು ಖರೀದಿ ವ್ಯವಹಾರಗಳಿಗೆ ಜಿಎಸ್‍ಟಿ ಪಾವತಿಯಾಗಿರಬೇಕು ಮತ್ತು ಸೂಕ್ತ ಪ್ರಮಾಣ ಪತ್ರಗಳನ್ನು ಪಡೆದಿರಬೇಕು ಎಂಬುದಷ್ಟೆ ಅಕಾರಿಗಳ ಉದ್ದೇಶವಾಗಿದೆ. ಒಂದು ವೇಳೆ ತೆರಿಗೆ ಪಾವತಿಸದೇ ವಹಿವಾಟು ನಡೆದಿದ್ದರೆ ಅದನ್ನು ಪತ್ತೆ ಹಚ್ಚಿ, ತೆರಿಗೆ ಮತ್ತು ದಂಡ ವಿಸಲು ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕಳೆ ಆರೇಳು ತಿಂಗಳಿನಿಂದಲೂ ಈ ರೀತಿಯ ಉಡುಗೊರೆಗಳ ಭರಾಟೆ ನಡೆಯುತ್ತಿದೆ. ಹಿಂದೆ ನಡೆದಿರುವುದನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದು ಬಹುತೇಕರು ನಿರುಮ್ಮಳವಾಗಿದ್ದಾರೆ. ಆದರೆ ವಾಸ್ತವವೇ ಬೇರೆ ಇದೆ.
ತೆರಿಗೆ ಇಲಾಖೆ ಅಕಾರಿಗಳು ಎಲ್ಲವನ್ನೂ ಸೂಕ್ಷ್ಮ ದೃಷ್ಟಿಯಿಂದ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಒಂದು ವರ್ಷದಿಂದಲೂ ನಡೆದಿರುವ ಅಸಮಾನ್ಯವಾದ ವಹಿವಾಟುಗಳನ್ನು ದುರ್ಬಿನು ಹಾಕಿ ಹುಡುತ್ತಿದ್ದಾರೆ.

ಬ್ಯಾಂಕ್ ವಹಿವಾಟು, ಉತ್ಪಾದನಾ ಸಂಸ್ಥೆಗಳಿಂದ ನಡೆದಿರುವ ಕಚ್ಚಾ ಸರಕು ಖರೀದಿ, ಸಿದ್ಧ ವಸ್ತುಗಳ ಮಾರಾಟ, ತೆರಿಗೆ ಪಾವತಿ, ಘೋಷಿತ ವಹಿವಾಟು ಮೌಲ್ಯ ಸೇರಿದಂತೆ ಅನೇಕ ವಿಷಯಗಳ ಪರಿಶೀಲನೆಗೆ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಪ್ರತ್ಯೇಕ ವಿಭಾಗವನ್ನೇ ಆರಂಭಿಸಲಾಗಿದೆ.

ಚುನಾವಣೆಯಲ್ಲಿ ಮತದಾರರ ಮನಗೆಲ್ಲುವ ಕಸರತ್ತಿನಲ್ಲಿ ತೊಡಗಿರುವವರು ಚಾಪೆ ಕೆಳಗೆ ನುಸಳಿ ಉಡುಗೊರೆಗಳ ಖರೀದಿ ವಹಿವಾಟು ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಅವು ಪತ್ತೆಯಾದರೆ ಅಸಲಿ ತೆರಿಗೆ ಮೊತ್ತಕ್ಕೆ ಹತ್ತಾರು ಪಟ್ಟು ಹೆಚ್ಚುವರಿ ದಂಡ ವಿಸುವ ಅಕಾರ ವಾಣಿಜ್ಯ ತೆರಿಗೆ ಇಲಾಖೆ ಅಕಾರಿಗಳಿಗೆ ಇದೆ.

KSRTC ಹಾಗೂ KPTCL ನೌಕರರ ವೇತನ ಪರಿಷ್ಕರಣೆಗೆ ಸಿಎಂ ಸಮ್ಮತಿ

ಹೀಗಾಗಿ ಮುಂದಿನ ದಿನಗಳಲ್ಲಿ ಮಾರಾಟ ಮಾಡಿದವರು, ಖರೀದಿಸಿದವರಿಗೆ ತೆರಿಗೆ ಹಾಗೂ ದಂಡದ ಸಂಕಷ್ಟ ಸುತ್ತಿಕೊಳ್ಳುವ ಸಾಧ್ಯತೆ ಇದೆ. ಆರ್ಥಿಕವಾಗಿ ಸಧೃಢವಾಗಿರುವವರು ತೆರಿಗೆ ಮತ್ತು ದಂಡವನ್ನು ಪಾವತಿಸಿ ಸುಲಭವಾಗಿ ಪಾರಾಗಬಹುದು, ಆರ್ಥಿಕವಾಗಿ ದುರ್ಬಲವಾಗಿರುವವರು ಅದರಿಂದ ಪಾರಾಗಲು ಪರದಾಡಬಹುದು.

ಮತ್ತೊಂದು ಆತಂಕ ಎಂದರೆ ಈ ಮೊದಲು ನೀಡಲಾಗಿರುವ ಉಡುಗೊರೆಗಳನ್ನು ಚುನಾವಣಾ ಆಯೋಗ ಯಾವ ರೀತಿ ಪರಿಗಣಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ. ಒಂದು ವೇಳೆ ಲೆಕ್ಕಕ್ಕೆ ಸಿಕ್ಕ ಉಡುಗೊರೆಗಳನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಪರಿಗಣಿಸಿದಾದರೆ ಗೆದ್ದ ಬಹಳಷ್ಟು ಶಾಸಕರು ಅನರ್ಹತೆಯ ತೂಗುಕತ್ತಿಯಡಿ ನಿಲ್ಲಬೇಕಾಗುತ್ತದೆ.

ತಾವು ಸಮಾಜಸೇವೆಯಲ್ಲಿ ಮೊದಲಿನಿಂದಲೂ ತೊಡಗಿಸಿಕೊಂಡಿದ್ದೇವೆ. ಉಡುಗೊರೆ ಕೊಡುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ ಎಂದು ಈಗಾಗಲೇ ಬಹಳಷ್ಟು ಸಂಭವನೀಯ ಅಭ್ಯರ್ಥಿಗಳು ವಾದ ಮಂಡಿಸುತ್ತಿದ್ದಾರೆ. ಇದನ್ನು ಆಯೋಗ ಒಪ್ಪಿಕೊಳ್ಳಲಿದೆಯೋ, ಕಾನೂನಾತ್ಮಕವಾಗಿ ಯಾವ ತಿರುವು ಪಡೆಯಲಿವೆ ಎಂಬೆಲ್ಲಾ ಅಂದಾಜುಗಳ ಮೇಲೆ ಉಡುಗೊರೆಗಳ ಸಂಗತಿ ನಿರ್ಧರಿತವಾಗಲಿದೆ.

#gifts, #convince, #voters, #GiftPolitics,

Articles You Might Like

Share This Article