ಆರ್‌ಬಿಐನಿಂದಲೇ ಡಿಜಿಟಲ್ ಕರೆನ್ಸಿ ಬಿಡುಗಡೆ, ವಹಿವಾಟಿನ ಮೇಲೆ ಶೇ.30ರಷ್ಟು ತೆರಿಗೆ

Social Share

ನವದೆಹಲಿ,ಫೆ.1- ಪ್ರಸಕ್ತ ವರ್ಷದಿಂದಲೇ ಆರ್‍ಬಿಐನಿಂದ ಡಿಜಿಟಲ್ ಕರೆನ್ಸಿಗಳನ್ನು ವಿತರಣೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ತಿಳಿಸಿದ್ದಾರೆ.
ಜಾಗತಿಕಮಟ್ಟದಲ್ಲಿ ಹೆಚ್ಚು ಚರ್ಚೆಗೊಳಗಾಗುತ್ತಿರುವ ವಚ್ರ್ಯುವಲ್ ಅಸೆಟ್‍ಗಳ ಸಂಬಂಧಪಟ್ಟಂತೆ ಮಹತ್ವದ ಘೋಷಣೆ ಮಾಡಿರುವ ವಿತ್ತ ಸಚಿವರು, ಚಾಲ್ತಿಯಲ್ಲಿರುವ ಡಿಜಿಟಲ್ ಕರೆನ್ಸಿಯನ್ನು ಅಕೃತಗೊಳಿಸುವ ಸಂಬಂಧ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಪ್ರತಿಯೊಂದು ಡಿಜಿಟಲ್ ಕರೆನ್ಸಿಯ ವಹಿವಾಟಿನ ಮೇಲೆ ಶೇ.30ರಷ್ಟು ತೆರಿಗೆ, ಶೇ.1ರಷ್ಟು ಟಿಡಿಎಸ್ ವಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಭಾರೀ ವಹಿವಾಟು ನಡೆಸುತ್ತಿದ್ದ ಡಿಜಿಟಲ್ ಕರೆನ್ಸಿ ಇನ್ನು ಮುಂದೆ ಅಕೃತ ವ್ಯವಹಾರವಾಗಲಿದೆ.
ಖುದ್ದು ಕೇಂದ್ರ ಸರ್ಕಾರಿ ಸ್ವಾಮ್ಯದ ಆರ್ಥಿಕ ಸಂಸ್ಥೆ ಆರ್‍ಬಿಐನಿಂದಲೇ ಡಿಜಿಟಲ್ ಕರೆನ್ಸಿಗಳು ಬಿಡುಗಡೆಯಾಗಲಿವೆ. ಇದಕ್ಕೆ ಬ್ಲಾಕ್‍ಸೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಕೆ ಮಾಡುವುದಾಗಿ ಕೇಂದ್ರಸಚಿವರು ತಿಳಿಸಿದ್ದಾರೆ.

Articles You Might Like

Share This Article