ನಾಳೆಯಿಂದ ಬೆಂಗಳೂರಿನಲ್ಲಿ ಡಿಜಿಟಲ್ ರುಪಿ ಚಲಾವಣೆ

Social Share

ನವದೆಹಲಿ,ನ.30- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈಗಾಗಲೇ ಪ್ರಕಟಿಸಿರುವಂತೆ ಡಿಜಿಟಲ್ ರುಪಿ ನಾಳೆಯಿಂದ ದೇಶದ ಆಯ್ದ ನಗರಗಳಲ್ಲಿ ಪ್ರಾಯೋಗಿಕವಾಗಿ ಚಲಾವಣೆಗೆ ಬರಲಿದೆ. ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಹೇಳಲಾದ ಡಿಜಿಟಲ್ ರುಪಿಯನ್ನು ಪ್ರಥಮ ಹಂತದಲ್ಲಿ 4 ಬ್ಯಾಂಕ್‍ಗಳು ಅನುಷ್ಠಾನಕ್ಕೆ ತರುತ್ತಿದೆ.

ಕ್ರಿಪ್ಟೊ ಕರೆನ್ಸಿ ಮಾದರಿಯಲ್ಲಿರುವ ಡಿಜಿಟಲ್ ರುಪಿ ಸಾಂಪ್ರದಾಯಿಕ ನೋಟು ಮತ್ತು ನಾಣ್ಯಗಳ ಮುಖಬೆಲೆಯನ್ನೇ ಹೊಂದಿರಲಿದೆ. ನಾಳೆ ಚಿಲ್ಲರೆ ಕ್ಷೇತ್ರದಲ್ಲಿ ಚಲಾವಣೆ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಸ್ ಬ್ಯಾಂಕ್, ಐಡಿಎಫ್‍ಸಿ ಫಸ್ಟ್ ಬ್ಯಾಂಕ್‍ಗಳು ಮುಂಬೈ, ನವದೆಹಲಿ, ಬೆಂಗಳೂರು, ಭುವನೇಶ್ವರಗಳಲ್ಲಿ ಪ್ರಾಯೋಗಿಕ ಅನುಷ್ಟಾನ ಮಾಡಲಿದೆ.

ಆರಂಭಿಕ ಹಂತದಲ್ಲಿ ಆಪ್ತ ಬಳಕೆದಾರರ ಗುಂಪಿನ ನಡುವೆ ಗ್ರಾಹಕರು ಮತ್ತು ವರ್ತಕರ ನಡುವೆ ಸಂಯುಕ್ತವಾಗಿ ಈ ರುಪಿ ಬಳಕೆಯಾಗಲಿದೆ. ಈವರೆಗೂ ಖಾಸಗಿ ವಲಯದಲ್ಲಿ ಅನೌಪಚಾರಿಕವಾಗಿ ಡಿಜಿಟಲ್ ರುಪಿ ಚಾಲನೆಯಲ್ಲಿತ್ತು. ಕಳೆದ ಬಜೆಟ್‍ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಆರ್‍ಬಿಐನಿಂದ ಅಧಿಕೃತವಾಗಿ ಡಿಜಿಟಲ್ ರುಪಿ ಜಾರಿಗೊಳಿಸುವ ಘೋಷಣೆ ಮಾಡಿದ್ದರು.

ನಾಳೆ ಗುಜರಾತ್ ವಿಧಾನಸಭಾ ಮೊದಲ ಹಂತದ ಚುನಾವಣೆ

ಅದರಂತೆ ಈಗ ಅಧಿಕೃತ ಮಾನ್ಯತೆಯೊಂದಿಗೆ ಡಿಜಿಟಲ್ ಹಣಕಾಸು ವ್ಯವಸ್ಥೆ ಜಾರಿಯಾಗಿದೆ. ಗ್ರಾಹಕರು ಮತ್ತು ವರ್ತಕರ ನಡುವೆ ಬ್ಯಾಂಕ್‍ಗಳು ಮಧ್ಯವರ್ತಿಯಾಗಿ ಇ-ರುಪಿಯನ್ನು ಚಲಾವಣೆ ಮಾಡಲಾಗಿದೆ. ಗ್ರಾಹಕರು ತಮ್ಮ ಮೊಬೈಲ್, ಕಂಪ್ಯೂಟರ್‍ಗಳಲ್ಲಿ ಡಿಜಿಟಲ್ ವ್ಯಾಲೆಟ್‍ನಲ್ಲಿ ಸಂಗ್ರಹಿಸಿದ ಹಣವನ್ನು ವಹಿವಾಟು ಮಾಡಬಹುದು.

ಲಂಚ ಪಡೆಯುತ್ತಿದ್ದ ಇಬ್ಬರು ಪೊಲೀಸರ ಬಂಧನ

ವ್ಯಕ್ತಿಯಿಂದ ವ್ಯಕ್ತಿಗೆ, ವ್ಯಕ್ತಿಯಿಂದ ವರ್ತಕರ ನಡುವೆ ವಹಿವಾಟಿಗೆ ಅವಕಾಶವಿದೆ. ಇ-ರುಪಿ ಅಥವಾ ಡಿಜಿಟಲ್ ಸ್ಕ್ಯಾನಿಂಗ್ ಮೂಲಕ ಪಾವತಿ ಮಾಡಬಹುದು. ಅತ್ಯಂತ ಸುರಕ್ಷಾ ಮತ್ತು ಸುಲಭ ವಹಿವಾಟಿನ ನಂಬಿಕಾರ್ಹ ವಿನಿಮಯವಾಗಿ ಇ-ರುಪಿ ಬಳಕೆಯಾಗಲಿದೆ ಎಂಬ ವಿಶ್ವಾಸವನ್ನು ಆರ್‌ಬಿಐ ಹೊಂದಿದೆ.

ಭಯೋತ್ಪಾದನೆ ಮಾನವೀಯತೆಗೆ ದೊಡ್ಡ ಕಂಟಕ: ಅಜಿತ್ ದೆವೋಲ್

ಡಿಜಿಟಲ್ ವ್ಯಾಲೆಟ್‍ನಲ್ಲಿರುವ ಇ-ರುಪಿಗೆ ಯಾವುದೇ ಬಡ್ಡಿ ಬೆಳೆಯುವುದಿಲ್ಲ. ಆದರೆ ಅದನ್ನು ಠೇವಣಿಯಾಗಿ ಪರಿವರ್ತಿಸಬಹುದಾಗಿದೆ. ಮೊದಲ ಹಂತದ ಪ್ರಾಯೋಗಿಕ ಅನುಷ್ಠಾನದ ಬಳಿಕ ಹೊಸ ಅಂಶಗಳನ್ನು ಸೇರ್ಪಡೆ ಮಾಡಿ ಇ-ರುಪಿಯ ವ್ಯಾಪಕ ಬಳಕೆಗೆ ಬೆಂಬಲ ನೀಡುವುದಾಗಿ ಆರ್‌ಬಿಐ ತಿಳಿಸಿದೆ.

Digital, rupee, pilot, project, launching, December1,

Articles You Might Like

Share This Article