ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡುರಾವ್ ಗನ್‍ಮ್ಯಾನ್‍ಗೆ ಕೊರೊನಾ..!

Spread the love

ಬೆಂಗಳೂರು, ಜು.4- ತಮ್ಮ ಅಂಗರಕ್ಷಕನಿಗೆ ಕೊರೊನ ಸೋಂಕು ತಗುಲಿದ್ದು, ನಮ್ಮ ಇಡೀ ಕುಟುಂಬ ಪರೀಕ್ಷೆಗೆ ಒಳಪಟ್ಟಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿದ್ದಾರೆ.

ಟ್ವಿಟರ್‍ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ನಮ್ಮ ಭದ್ರತಾ ಪಡೆಯ ಪೊಲೀಸ್ ಸಿಬ್ಬಂದಿಯೊಬ್ಬರು ನಿನ್ನೆ ಪರೀಕ್ಷೆಗೆ ಒಳಪಟ್ಟಾಗ ಕೊರೊನಾ ಸೋಂಕು ದೃಢಪಟ್ಟಿದೆ.

ನಾನು ಸೇರಿದಂತೆ ನಮ್ಮ ಕುಟುಂಬದ ಎಲ್ಲಾ ಸದಸ್ಯರು ಪರೀಕ್ಷೆಗೆ ಒಳಪಟ್ಟಿದ್ದೇವೆ. ಜೊತೆಗೆ ನಿಗದಿತ ಅವಧಿವರೆಗೂ ಹೋಂ ಕ್ವಾರಂಟೈನ್‍ನಲ್ಲಿರಲಿದ್ದೇವೆ ಎಂದು ತಿಳಿಸಿದ್ದಾರೆ.

ಕಳೆದ ಮೂರು ದಿನಗಳ ಹಿಂದಷ್ಟೆ ಅಂದರೆ ಜುಲೈ 2ರಂದು ನಡೆದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ದಿನೇಶ್ ಗುಂಡುರಾವ್ ಭಾಗವಹಿಸಿದ್ದರು.

ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆಗೆ ಸೇರಿದಂತೆ ಹಲವಾರು ಮುಖಂಡರ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ ಅವರಿಗೆ ಕಾಂಗ್ರೆಸ್ ಬಾವುಟ ಕೊಟ್ಟು ಅಧಿಕಾರ ಹಸ್ತಾಂತರಿಸಿದ್ದರು. ಆ ಕಾರ್ಯಕ್ರಮದಲ್ಲಿ ನೂರ ಎಂಬತ್ತಕ್ಕೂ ಹೆಚ್ಚಿನ ಹಿರಿಯ ನಾಯಕರು ಭಾಗವಹಿಸಿದ್ದರು.

ದಿನೇಶ್ ಗುಂಡುರಾವ್ ಅವರ ಟ್ವಿಟ್ ಪ್ರಕಾರ ನಿನ್ನೆ ಸೋಂಕು ಪರೀಕ್ಷೆಯಾಗಿದ್ದು ಸೋಂಕು ದೃಢಪಟ್ಟಿದೆ. ಅದಕ್ಕೂ ಮೊದಲು ಗನ್‍ಮ್ಯಾನ್‍ಗೆ ಸೋಂಕಿದ್ದರೆ ಎಂಬ ಆತಂಕ ಸೃಷ್ಟಿಯಾಗಿದೆ.

Facebook Comments