ಆನ್ಲೈನ್ ಗೇಮ್ ನಿಷೇಧ ಸ್ವಾಗತಾರ್ಹ: ದಿನೇಶ್ ಗುಂಡೂರಾವ್
ಬೆಂಗಳೂರು, ನ.22- ಆನ್ಲೈನ್ ಗೇಮ್ಗಳ ನಿಷೇಧಕ್ಕೆ ಕಾನೂನು ಮಾಡುವ ಗೃಹ ಸಚಿವರ ಪ್ರಸ್ತಾಪವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ, ತಮಿಳು ನಾಡು ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಸ್ವಾಗತಿಸಿದ್ದಾರೆ. ಆನ್ಲೈನ್ ಗೇಮ್ಗಳ ದುಶ್ಚಟಕ್ಕೆ ಬಿದ್ದು ಯುವಕರು ತಮ್ಮ ಬದುಕನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಾನು ಹಿಂದೆಯೇ ಗಮನ ಸೆಳೆದಿದ್ದೆ.
ಆನ್ಲೈನ್ ಜೂಜಾಟದ ಅಡ್ಡೆಗಳಾಗಿವೆ. ಅವುಗಳನ್ನು ನಿಷೇಧ ಮಾಡಬೇಕೆಂದು ಈ ಹಿಂದೆಯೇ ಸರ್ಕಾರ ಗಮನ ಸೆಳೆದಿದ್ದೆ. ಪ್ರಸ್ತುತ ಆನ್ಲೈನ್ ಗೇಮ್ಗಳನ್ನು ನಿಷೇಧ ಮಾಡಲು ಗೃಹ ಸಚಿವರು ಮುಂದಾಗಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಆನ್ಲೈನ್ ಗೇಮ್ಗಳ ಮೂಲಕ ಯುವಕ-ಯುವತಿಯರು, ಕಾಲೇಜು ಮಕ್ಕಳು ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಕಾನೂನಿನ ಮೂಲಕ ಅವುಗಳನ್ನು ನಿಷೇಧ ಮಾಡುವ ಬಗ್ಗೆ ಗೃಹ ಸಚಿವರು ನಿನ್ನೆಯಷ್ಟೆ ಹೇಳಿಕೆ ನೀಡಿದ್ದರು.