Saturday, September 23, 2023
Homeಇದೀಗ ಬಂದ ಸುದ್ದಿಸಿಎಂ-ಡಿಸಿಎಂ ಅವಧಿ ಕುರಿತು ಚರ್ಚೆ ಬೇಡ : ದಿನೇಶ್ ಗುಂಡೂರಾವ್

ಸಿಎಂ-ಡಿಸಿಎಂ ಅವಧಿ ಕುರಿತು ಚರ್ಚೆ ಬೇಡ : ದಿನೇಶ್ ಗುಂಡೂರಾವ್

- Advertisement -

ಬೆಂಗಳೂರು,ಸೆ.16- ಮುಖ್ಯಮಂತ್ರಿ ಅವಧಿ, ಉಪಮುಖ್ಯಮಂತ್ರಿಗಳ ಹುದ್ದೆಗಳ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ರಾಜಕೀಯ ವಿಚಾರಗಳ ಬಗ್ಗೆ ಬಹಿರಂಗವಾಗಿ ಚರ್ಚಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಇನ್ನು ಸಮುದಾಯವಾರು ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಮಾಡಬೇಕು ಎಂಬ ಹೇಳಿಕೆ ಕೂಡ ಅನಗತ್ಯವಾಗಿತ್ತು. ಕಾಂಗ್ರೆಸ್ ಪಕ್ಷ ಎಲ್ಲಾ ಜಾತಿ ಮತ್ತು ವರ್ಗಗಳನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದು, ಸಾಮಾಜಿಕ ನ್ಯಾಯಪಾಲನೆಯಲ್ಲಿ ಮೊದಲನೆ ಸಾಲಿನಲ್ಲಿದೆ.

- Advertisement -

ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಮತ್ತು ನಿಯಮ ಪಾಲನೆ ಕಡ್ಡಾಯ

ಯಾವುದೇ ಕಾರ್ಯಕ್ರಮ ರೂಪಿಸಬೇಕಾದರೂ ಎಲ್ಲಾ ಸಮುದಾಯಗಳನ್ನೂ ಗಮನದಲ್ಲಿಟ್ಟು ಕೊಂಡಿರುತ್ತವೆ. ಒಂದು ಹುದ್ದೆ ನೀಡಿ ಸಮುದಾಯಗಳನ್ನು ತೃಪ್ತಿಪಡಿಸುವ ಅಗತ್ಯ ಇಲ್ಲ ಎಂದರು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಡವರಿಗೆ, ಹಿಂದುಳಿದವರಿಗೆ, ಶೋಷಿತರಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ, ರೈತರಿಗೆ, ಕಾರ್ಮಿಕರಿಗೆ ಸಹಾಯ ಮಾಡುವ ಗುರಿ ಹೊಂದಿದ್ದೇವೆ. ಕಾರ್ಯಕ್ರಮಗಳು ಮುಖ್ಯವೇ ಹೊರತು, ಯಾರು, ಯಾವ ಹುದ್ದೆಗಳಲ್ಲಿ ಕುಳಿತಿದ್ದಾರೆ ಎಂಬುದು ಚರ್ಚೆಯ ವಿಷಯವಲ್ಲ ಎಂದು ಹೇಳಿದರು.

ಹುದ್ದೆಗಳನ್ನು ಹಂಚುವುದು ಅಥವಾ ಅಧಿಕಾರ ಹಂಚಿಕೆ ಮಾಡುವುದರ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಅದರ ಬಗ್ಗೆ ನಾವು ಬಹಿರಂಗವಾಗಿ ಚರ್ಚೆ ಮಾಡುವ ಅಗತ್ಯವಿಲ್ಲ ಎಂದರು.

#DineshGundurao, #CM, #DCM,

- Advertisement -
RELATED ARTICLES
- Advertisment -

Most Popular