ಚಿಲಿ,ಜ.12- ಡೈನೋಸಾರ್ಗಳು ಕೇವಲ ಕಾಲ್ಪನಿಕವಲ್ಲ. ಅವುಗಳು ಜೀವಂತವಾಗಿದ್ದವು ಎನ್ನುವುದಕ್ಕೆ ಇದೀಗ ಪುರಾವೆಗಳು ಲಭ್ಯವಾಗಿವೆ. ಚಿಲಿ ವಿಜ್ಞಾನಿಗಳು ನಾಲ್ಕು ಜಾತಿಯ ಡೈನೋಸಾರ್ಗಳ ಪಳಿಯುಳಿಕೆಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಲಿಯ ಪ್ಯಾಟಗೋನಿಯಾದಲ್ಲಿರುವ ದಟ್ಟ ಕಾನನದಲ್ಲಿ ಹುದುಗಿ ಹೋಗಿದ್ದ ಡೈನೋಸಾರ್ಗಳ ಪಳಿಯುಳಿಕೆಗಳನ್ನು ಪತ್ತೆ ಹಚ್ಚುವ ಮೂಲಕ ಅದ್ಭುತ ಆವಿಷ್ಕಾರ ಮಾಡಿ ವಿಶ್ವದ ಗಮನ ಸೆಳೆದಿದ್ದಾರೆ.
ಚಿಲಿಯ ಅಂಟಾಕ್ರ್ಟಿಕ್ ಸಂಸ್ಥೆ (ಇನಾಚ್), ಚಿಲಿ ವಿಶ್ವವಿದ್ಯಾನಿಲಯ ಮತ್ತು ಟೆಕ್ಸಾಸ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಈ ಆವಿಷ್ಕಾರ ಮಾಡಲಾಗಿದೆ.
ಈ ಹಿಂದೆ ಕಂಡು ಹಿಡಿಯಲಾಗದ ಅಥವಾ ವಿವರಿಸಲು ಸಾಧ್ಯವಿಲ್ಲದ ಆವಿಷ್ಕಾರ ಮಾಡುವುದು ಅದ್ಭುತವಾಗಿದೆ. ಅಂತಹ ಸಾಧನೆಯನ್ನು ನಾವು ಮಾಡಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರವಾಗಿದೆ ಎಂದು ಇನಾಚ್ ನಿರ್ದೇಶಕ ಮಾರ್ಸೆಲೊ ಲೆಪ್ಪೆ ತಿಳಿಸಿದ್ದಾರೆ.
ಈ ಹಿಂದೆ 2021ರಲ್ಲಿ ಪತ್ತೆಯಾಗಿ ಪ್ರಯೋಗಾಲಯಕ್ಕೆ ಸಾಗಿಸಲಾಗಿದ್ದ ಪಳೆಯುಳಿಕೆಗಳಿಗೂ ಭಿನ್ನವಾದ ಡೈನೋಸಾರ್ ಪಳೆಯುಳಿಕೆಗಳನ್ನು ನಾವು ಪತ್ತೆ ಹಚ್ಚಿದ್ದು, ಇದರಿಂದ ಈ ಹಿಂದೆ ಜೀವಂತವಾಗಿದ್ದ ಡೈನೋಸಾರ್ಗಳ ಅಧ್ಯಯನಕ್ಕೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಕೇರಳದಲ್ಲಿ ಹಕ್ಕಿಜ್ವರ: 1800 ಕೋಳಿ ಸಾವು
ಇದೀಗ ಪತ್ತೆ ಹಚ್ಚಲಾಗಿರುವ ಡೈನೋಸಾರ್ ಪ್ರಭೇದಗಳನ್ನು ಎನಾಂಟಿಯೊರ್ನಿಥೆ ಹಾಗೂ ಮೆಸೋಜೊಯಿಕ್ ಯುಗದ ಸಮೃದ್ಧ ಪಕ್ಷಿಗಳಿರಬಹುದು ಎಂದು ಅಂದಾಜಿಸಲಾಗಿದೆ. ಸಂಶೋಧನೆಗಳ ಪ್ರಕಾರ, ಮೆಗಾರಾಪ್ಟರ್ ಅನ್ನು ಒಳಗೊಂಡಿರುವ ಡೈನೋಸಾರ್ ಪ್ರಭೇದಗಳು ಕ್ರಿಟೇಶಿಯಸ್ ಅವಧಿಯ ಕೊನೆಯಲ್ಲಿ 66 ರಿಂದ 75 ಮಿಲಿಯನ್ ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ವಾಸಿಸುತ್ತಿದ್ದವು ಎಂದು ಜರ್ನಲ್ ಆಫ್ ಸೌತ್ ಅಮೇರಿಕನ್ ಅರ್ಥ್ ಸೈನ್ಸಸ್ನಲ್ಲಿ ಪ್ರಕಟಿಸಲಾಗಿದೆ.
ಕುತೂಹಲಕಾರಿಯಾಗಿ, ಮೆಗಾರಾಪ್ಟರ್ ಥೆರೋಪಾಡ್ ಕುಟುಂಬಕ್ಕೆ ಸೇರಿದೆ, ಅದರಲ್ಲಿ ಪ್ರಸಿದ್ಧ ಟಿ-ರೆಕ್ಸ ಕೂಡ ಸದಸ್ಯರಾಗಿದ್ದಾರೆ. ಈ ಮಾಂಸಾಹಾರಿ ಡೈನೋಸಾರ್ಗಳು ಆಹಾರ ಸರಪಳಿಯ ಮೇಲ್ಭಾಗದಲ್ಲಿವೆ ಮತ್ತು ರಾಪ್ಟರ್ ಉಗುರುಗಳು, ತಮ್ಮ ಬೇಟೆಯನ್ನು ಹರಿದು ಹಾಕಲು ಸಣ್ಣ ಹಲ್ಲುಗಳು ಮತ್ತು ದೊಡ್ಡ ಮೇಲ್ಭಾಗದ ಅಂಗಗಳನ್ನು ಹೊಂದಿರುವುದು ಪಳೆಯುಳಿಕೆಗಳಲ್ಲಿ ಕಂಡು ಬಂದಿವೆ.
Dinosaur, Species, Found, Chile,