ಅಂಗನವಾಡಿ ಶಿಕ್ಷಕರಾಗಲು ಡಿಫ್ಲೋಮಾ ಕಡ್ಡಾಯ

Social Share

ಬೆಂಗಳೂರು,ಜ.4- ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. ಇನ್ನು ಮುಂದೆ ಅಂಗನವಾಡಿ ಟೀಚರ್ ಆಗಲು ಡಿಫ್ಲೋಮಾ ಮಾಡಿರಲೇಬೇಕು ಎಂಬ ಹೊಸ ನಿಯಮ ಜಾರಿಗೆ ತರುವ ಮೂಲಕ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಕ್ ನೀಡಲಾಗಿದೆ.

ಎನ್‍ಇಪಿ ನಿಯಮದಲ್ಲಿ ಮಾರ್ಪಾಡು ಮಾಡಿರುವ ಸರ್ಕಾರ ಡಿಫ್ಲೋಮಾ ಮಾಡಿರುವ ಮಹಿಳೆಯರನ್ನು ಮಾತ್ರ ಅಂಗನವಾಡಿ ಟೀಚರ್‍ಗಳನ್ನಾಗಿ ನೇಮಿಸಿಕೊಳ್ಳುವಂತೆ ಆದೇಶ ಹೊರಡಿಸಿದೆ. ಇದರ ಜತೆಗೆ ಅಂಗನವಾಡಿ ಕಾರ್ಯಕರ್ತೆಯರ ನೇಮಕದಲ್ಲೂ 10ನೇ ತರಗತಿ ಇಲ್ಲವೆ ಪಿಯುಸಿ ಉತ್ತೀರ್ಣರಾಗಿರುವವರನ್ನು
ಪರಿಗಣಿಸುವಂತೆಯೂ ಸೂಚನೆ ನೀಡ ಲಾಗಿದೆ.

ಶಬರಿಮಲೆ ಅಯ್ಯಪ್ಪ ಚಿತ್ರಕ್ಕೆ ಬೆಂಬಲ ನೀಡಿದ್ದ ವ್ಯಕ್ತಿಯ ಅಂಗಡಿ ಧ್ವಂಸ

ಅಂಗನವಾಡಿ ಕೇಂದ್ರಗಳೂ ಮಕ್ಕಳ ಆರೈಕೆ ಮತ್ತು ಅಭಿವೃದ್ಧಿ ಕೇಂದ್ರವಾಗಿರುವುದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ದೃಷ್ಟಿಕೋನದಿಂದ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಹಿಳೆ ಅಭಿವೃದ್ಧಿ ಮತ್ತು
ಮಕ್ಕಳ ಕಲ್ಯಾಣ ಸಚಿವಾಲಯ ತಿಳಿಸಿದೆ.

Diploma, mandatory, Anganwadi, teacher,

Articles You Might Like

Share This Article