ಉಕ್ರೇನ್‍ನಲ್ಲಿ ರಷ್ಯಾ ಆಕ್ರಮಣ ಭೀತಿ, ದೇಶ ತೊರೆಯಲು ರಾಯಭಾರಿ, ಸಿಬ್ಬಂದಿಗೆ ಅಮೆರಿಕಾ ಸೂಚನೆ

Social Share

ವಾಷಿಂಗ್ಟನ್, ಜ. 24-ರಷ್ಯಾದ ಆಕ್ರಮಣದ ಭೀತಿಯ ನಡುವೆ ಉಕ್ರೇನ್‍ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿರುವ ಎಲ್ಲಾ ಸಿಬ್ಬಂದಿ ಕುಟುಂಬದವರು ದೇಶ ತೊರೆಯುವಂತೆ ವಿದೇಶಾಂಗ ಇಲಾಖೆ ಆದೇಶಿಸಿದೆ. ಕೈವ್‍ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ಸಿಬ್ಬಂದಿಗಳು ಮತ್ತವರ ಅವಲಂಬಿತರು ಉಕ್ರೇನ್ ದೇಶವನ್ನು ತೊರೆಯಬೇಕು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಉಕ್ರೇನ್ ಗಡಿಯಲ್ಲಿ ರಷ್ಯಾದ ಮಿಲಿಟರಿ ಜಮಾವಣೆಯಿಂದ ಉದ್ವಿಗ್ನತೆಯ ಹೆಚ್ಚುತ್ತಿದೆ ಇದರ ಮಧ್ಯೆ ಜಿನೀವಾದಲ್ಲಿ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ನಡುವೆ ಮಾತುಕತೆ ಸರಾಗವಾಗಿರಲಿಲ್ಲ.
ರಷ್ಯಾತನ್ನ ಆಕ್ರಮಣ ನೀತಿಯಿಂದ ಉಕ್ರೇನ್ ವಿರುದ್ಧ ಮಹತ್ವದ ಮಿಲಿಟರಿ ಕ್ರಮವನ್ನು ಯೋಜಿಸುತ್ತಿದೆ ಎಂದು ಅಮೆರಿಕ ಆರೂಪಿಸಿದೆ. ಆದಾಗ್ಯೂ, ರಷ್ಯಾದ ವಿದೇಶಾಂಗ ಸಚಿವಾಲಯ ಹಾಗು ನ್ಯಾಟೋ ದೇಶಗಳು ಉಕ್ರೇನ್ ಸುತ್ತಲಿನ ಉದ್ವಿಗ್ನತೆ ಬಗ್ಗೆ ತಪ್ಪು ಮಾಹಿತಿ ಹೆಚ್ಚಿಸಲಾಗುತ್ತಿದೆ ಎಂದು ಆರೋಪಿಸಿದೆ.

Articles You Might Like

Share This Article