ಬೆಂಗಳೂರು, ಜೂ.3- ಪಂಚಖಾತ್ರಿಗಳ ಒತ್ತಡಗದಿಂದ ಹೊರಬಂದಿರುವ ರಾಜ್ಯಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿಯತ್ತ ಗಮನ ಹರಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಸಂಭವನೀಯ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಹರಿದಾಡುತ್ತಿದ್ದು ಅದರ ನೈಜತೆಯನ್ನು ಮುಖ್ಯಮಂತ್ರಿ ಕಚೇರಿ ಅಲ್ಲಗಳೆದಿದೆ. ಆದರೆ ಮೂಲಗಳ ಪ್ರಕಾರ ಬೆಂಗಳೂರು ನಗರಕ್ಕೆ ಕೆ.ಜೆ.ಜಾರ್ಜ್ ಅವರನ್ನು ಬೆಂಗಳೂರು ಗ್ರಾಮಾಂತರಕ್ಕೆ ರಾಮಲಿಂಗಾರೆಡ್ಡಿ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸುವ ಚರ್ಚೆಗಳಿವೆ ಇವೆ ಎಂದು ಹೇಳಲಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಟ್ಟು ಹಿಡಿದು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಪಡೆದುಕೊಂಡಿದ್ದಾರೆ. ಬಿಬಿಎಂಪಿ, ಬಿಡಬ್ಲ್ಯೂ ಎಸ್‍ಎಸ್‍ಬಿ, ಬಿಡಿಎ, ಬಿಎಂಆರ್‍ಡಿ ಸೇರಿದಂತೆ ಬೆಂಗಳೂರು ಅಭಿವೃದ್ಧಿಗೆ ಸಂಬಂಧಪಟ್ಟ ಎಲ್ಲಾ ಘಟಕಗಳನ್ನು ಡಿ.ಕೆ.ಶಿವಕುಮಾರ್ ತಮ್ಮ ವ್ಯಾಪ್ತಿಯಲ್ಲಿಟ್ಟುಕೊಂಡಿದ್ದಾರೆ. ಈಗ ಬೆಂಗಳೂರು ಜಿಲ್ಲಾ ಉಸ್ತುವಾರಿಯನ್ನು ಕೆ.ಜೆ.ಜಾರ್ಜ್ ಅವರಿಗೆ ವಹಿಸುವುದರಿಂದ ಅನಗತ್ಯವಾದ ಸಂಘರ್ಷಗಳು ಎದುರಾಗುವುದಿಲ್ಲವೇ ಎಂಬ ಚರ್ಚೆಗಳು ನಡೆಯುತ್ತವೆ.
ರೈಲು ದುರಂತ : 300 ದಾಟಿದ ಸಾವಿನ ಸಂಖ್ಯೆ, 1000ಕ್ಕೂ ಹೆಚ್ಚು ಜನರಿಗೆ ಗಾಯ
ಅಲ್ಲದೆ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಜಮೀರ್ ಅಹಮ್ಮದ್ ಖಾನ್ ಅವರುಗಳು ಕೂಡ ಬೆಂಗಳೂರಿನವರೇ ಆಗಿರುವುದರಿಂದ ಜಿಲ್ಲಾ ಉಸ್ತುವಾರಿಗಾಗಿ ಪ್ರಸ್ತಾಪ ಮಂಡಿಸಿದ್ದಾರೆ. ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲೇಬೇಕು ಎಂಬ ಪಣ ತೊಟ್ಟಿರುವ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿಗಾಗಿ ಪಟ್ಟು ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಮೈಸೂರು ಜಿಲ್ಲಾ ಉಸ್ತುವಾರಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಆಪ್ತರಾದ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ವಹಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ತುಮಕೂರು ಜಿಲ್ಲೆಯ ಉಸ್ತುವಾರಿಯ ಬಗ್ಗೆ ಕೆ.ಎನ್.ರಾಜಣ್ಣ ಮತ್ತು ಡಾ.ಜಿ.ಪರಮೇಶ್ವರ್ ಅವರ ನಡುವೆ ಪೈಪೋಟಿ ಇದೆ.
ಸಿದ್ಧರಾಮಯ್ಯ ಅವರು ತಮ್ಮ ಆಪ್ತರಾದ ರಾಜಣ್ಣ ಅವರಿಗೆ ತವರು ಜಿಲ್ಲೆಯ ಉಸ್ತುವಾರಿ ನೀಡಿ ಪರಮೇಶ್ವರ್ ಅವರಿಗೆ ಉಡುಪಿ ಜಿಲ್ಲೆಯ ಉಸ್ತುವಾರಿ ವಹಿಸಲಾಗುತ್ತಿದೆ ಎನ್ನಲಾಗಿದೆ. ಉಡುಪಿ ಜಿಲ್ಲೆ ಕರಾವಳಿ ಪ್ರದೇಶದ ವ್ಯಾಪ್ತಿಯಲ್ಲಿದ್ದು ಕೋಮು ಸಂಘರ್ಷದ ಪ್ರಯೋಗ ಶಾಲೆಯೂ ಆಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 5 ಕ್ಷೇತ್ರಗಳಲ್ಲೂ ಬಿಜೆಪಿಯೇ ಗೆದ್ದಿದೆ. ಅಂತಹ ಕಡೆ ಗೃಹಸಚಿವರಾಗಿರುವ ಪರಮೇಶ್ವರ್ ಜವಾಬ್ದಾರಿ ವಹಿಸಿಕೊಳ್ಳುತ್ತಾರೆಯೆ ಎಂಬ ಪ್ರಶ್ನೆ ಕಾಡುತ್ತಿದೆ.
ಉಳಿದಂತೆ ಬೆಳಗಾವಿ ಜಿಲ್ಲೆಯ ಉಸ್ತುವಾರಿಯನ್ನು ಸತೀಶ್ ಜಾರಕಿಹೊಳೆಗೆ ನೀಡಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವಿಜಯನಗರದ ಜವಾಬ್ಧಾರಿಯನ್ನು ವಹಿಸಲಿದ್ದಾರೆ ಎಂಬ ಚರ್ಚೆಗಳಿವೆ. ಲಕ್ಷ್ಮಿ ಹೆಬ್ಬಾಳ್ಕರ್ ಧಾರವಾಡ ಜಿಲ್ಲೆಯ ಉಸ್ತುವಾರಿಗಾಗಿ ಬೇಡಿಕೆ ಸಲ್ಲಿಸಿದರು. ಇನ್ನು ಸಚಿವರಿಲ್ಲದ ಹಾವೇರಿ ಜಿಲ್ಲೆಗೆ ಜಮೀರ್ ಅಹಮ್ಮ ದ್ ಖಾನ್ ಉಸ್ತುವಾರಿಯಾಗುವ ಸಾಧ್ಯತೆ ಇದೆ. ಬಹುನಿರೀಕ್ಷಿತ ಕಲಬುರ್ಗಿ ಜಿಲ್ಲೆಯ ಉಸ್ತುವಾರಿಯನ್ನು ಡಾ.ಶರಣ್ ಪ್ರಕಾಶ್ ಅವರಿಗೆ ನೀಡಿ ಅದೇ ಜಿಲ್ಲೆಯ ಸಚಿವರಾದ ಪ್ರಿಯಾಂಕ್ ಖರ್ಗೆ ಅವರನ್ನು ಕೋಮುಗಲಭೆಯ ಮತ್ತೊಂದು ಸೂಕ್ಷ್ಮ ಪ್ರದೇಶ ಚಿಕ್ಕಮಗಳೂರು ಜಿಲ್ಲೆಗೆ ನಿಯೋಜಿಸುವ ಚರ್ಚೆಗಳು ನಡೆದಿವೆ.
ಬಾಡಿಗೆ ಮನೆಯಲ್ಲಿರುವವರಿಗೂ ಗೃಹಜ್ಯೋತಿ ಭಾಗ್ಯ : ಡಿಸಿಎಂ ಡಿಕೆಶಿ
ಕೋಲಾರಕ್ಕೆ ಕೆ.ಎಚ್.ಮುನಿಯಪ್ಪ, ಚಿಕ್ಕಬಳ್ಳಾಪುರಕ್ಕೆ ಡಾ. ಎಮ್. ಸಿ. ಸುಧಾಕರ, ರಾಮನಗರಕ್ಕೆ ಡಿ. ಕೆ. ಶಿವಕುಮಾರ, ಮಂಡ್ಯಕ್ಕೆ ಚೆಲುವರಾಯ ಸ್ವಾಮಿ, ಚಾಮರಾಜನಗರಕ್ಕೆ ದಿನೇಶ್ ಗುಂಡೂರಾವ್, ಕೊಡಗಿಗೆ ವೆಂಕಟೇಶ್, ದಕ್ಷಿಣಕನ್ನಡಕ್ಕೆ ಕೃಷ್ಣ ಬೈರೇಗೌಡ, ಉತ್ತರ ಕನ್ನಡಕ್ಕೆ ಮಂಕಾಲ್ ವೈದ್ಯ, ಧಾರವಾಡಕ್ಕೆ ಸಂತೋಷ್ ಲಾಡ್, ಬೆಳಗಾವಿಗೆ ಸತೀಶ್ ಜಾರಕಿಹೊಳಿ, ಬೀದರ್‍ಗೆ ರಹೀಮ್ ಖಾನ್, ವಿಜಯಪುರಕ್ಕೆ ಎಮ್. ಬಿ .ಪಾಟೀಲ್, ಬಳ್ಳಾರಿಗೆ ನಾಗೇಂದ್ರ, ಗದಗಕ್ಕೆ ಎಚ್. ಕೆ .ಪಾಟೀಲ್,
ಹಾವೇರಿಗೆ ಬಿ. ಝಡ್. ಝಮೀರ್ ಅಹ್ಮದ್ ಖಾನ್, ಕೊಪ್ಪಳಕ್ಕೆ ಶಿವರಾಜ್ ತಂಗಡಗಿ, ಯಾದಗಿರಿಗೆ ಶರಣಪ್ಪಬಸಪ್ಪ ದರ್ಶಣಾಪುರ, ಬಾಗಲಕೋಟೆಗೆ ಶೀವನಾಂದ ಪಾಟೀಲ್,ವಿಜಯನಗರಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್, ಚಿತ್ರದುಗಕ್ಕೆ ಡಿ. ಸುಧಾಕರ, ಶಿವಮೊಗ್ಗಕ್ಕೆ ಮಧು ಬಂಗಾರಪ್ಪ, ಹಾಸನಕ್ಕೆ ಈಶ್ವರ್ ಖಂಡ್ರೆ,ದಾವಣಗೆರೆಗೆ ಎಸ್.ಎಸ್.ಮಲ್ಲಿಕಾರ್ಜುನ, ರಾಯಚೂರಿಗೆ ಎನ್. ಎಸ್. ಬೋಸ್ ರಾಜು ಜಿಲ್ಲಾ ಉಸ್ತುವಾರಿ ಸಚಿವರೆಂಬ ಸಂಭವನೀಯ ಪಟ್ಟಿ ಹರಿದಾಡುತ್ತಿದೆ. ಆದರೆ, ಇದರ ಸತ್ಯಾಸತ್ಯತೆ ಬಗ್ಗೆ ಹಲವು ಅನುಮಾನಗಳು ಕೇಳಿ ಬಂದಿವೆ.
District, #incharge, #ministers, #cmsiddaramaiah,