Sunday, April 12, 2026
Homeಜಿಲ್ಲಾ ಸುದ್ದಿಗಳುಬಿಸಿಲಿನ ಝಳ ; ಮೈಸೂರಿನಲ್ಲಿ ಪೌರಕಾರ್ಮಿಕರ ಕೆಲಸದ ಸಮಯ ಬದಲಾವಣೆ

ಬಿಸಿಲಿನ ಝಳ ; ಮೈಸೂರಿನಲ್ಲಿ ಪೌರಕಾರ್ಮಿಕರ ಕೆಲಸದ ಸಮಯ ಬದಲಾವಣೆ

Change in working hours of civil servants in Mysore

ಮೈಸೂರು,ಏ.2- ಬೇಸಿಗೆ ಕಾಲ ಹಿನ್ನೆಲೆಯಲ್ಲಿ ಪೌರಕಾರ್ಮಿಕರ ಕೆಲಸದ ಸಮಯವನ್ನು ಮಹಾನಗರ ಪಾಲಿಕೆ ಬದಲಾವಣೆ ಮಾಡಿದೆ.ಬೇಸಿಗೆ ಕಾಲದಲ್ಲಿ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೌರಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಅವರ ಕೆಲಸದ ಸಮಯವನ್ನು ಪರಿಷ್ಕರಿಸಲಾಗಿದೆ.

ಇದರಿಂದಾಗಿ, ಇದುವರೆಗೆ ಜಾರಿಯಲ್ಲಿದ್ದ ಬೆಳಗ್ಗೆ 6.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಇದ್ದ ಕೆಲಸದ ಸಮಯವನ್ನು, ಇನ್ನು ಮುಂದೆ ಬೆಳಗ್ಗೆ 5.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬದಲಾಯಿಸಲಾಗಿದೆ.

ಬೇಸಿಗೆ ಕಾಲದಲ್ಲಿ ಉಷ್ಣತೆಯ ಹೆಚ್ಚಳದಿಂದ ಪೌರಕಾರ್ಮಿ ಕರು ಆರೋಗ್ಯ ಸಮಸ್ಯೆಗಳು, ದೇಹದ ನೀರಿನ ಕೊರತೆ ಮುಂತಾದ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇರುವುದರಿಂದ, ಅವರ ಸುರಕ್ಷತೆ ಮತ್ತು ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕ್ರಮದಿಂದ ಪೌರಕಾರ್ಮಿಕರ ಕಾರ್ಯಕ್ಷಮತೆ ಹೆಚ್ಚುವುದರ ಜೊತೆಗೆ ನಗರ ಸ್ವಚ್ಛತಾ ಕಾರ್ಯಗಳು ಪರಿಣಾಮಕಾರಿಯಾಗಿ ಮುಂದುವರಿಯಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

RELATED ARTICLES

Latest News