ವಿಚ್ಛೇತ ಮಹಿಳೆಯೊಂದಿಗೆ ಪ್ರೀತಿ ನಾಟಕವಾಡಿ ವಂಚನೆ

Social Share

ಬೆಂಗಳೂರು,ಫೆ.7-ವಿಚ್ಛೇತ ಮಹಿಳೆಯನ್ನು ಪುಸಲಾಯಿಸಿ ಪ್ರೀತಿಸುವ ನಾಟಕವಾಡಿ ಆಕೆಯೊಂದಿಗೆ ಸಂಪರ್ಕ ಬೆಳೆಸಿ ಕೊಂಡು ಮೋಸ ಮಾಡಿರುವ ವ್ಯಕ್ತಿ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂದಿರಾನಗರದ 30 ವರ್ಷದ ನೊಂದ ಮಹಿಳೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೌಟುಂಬಿಕ ಕಲಹದಿಂದಾಗಿ ಪತಿಗೆ ವಿಚ್ಛೇಧನ ನೀಡಿದ್ದ ಮಹಿಳೆ ಇಬ್ಬರು, ಮಕ್ಕಳೊಂದಿಗೆ ಇಂದಿರಾನಗರದಲ್ಲಿ ಪ್ರತ್ಯೇಕ ವಾಸವಾಗಿದ್ದಾರೆ.
ಜೀವನ ನಿರ್ವಹಣೆಗಾಗಿ ಆ ಮಹಿಳೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅದೇ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಯ ಪರಿಚಯವಾಗಿದೆ.
ಈ ವ್ಯಕ್ತಿ ಆ ಮಹಿಳೆಯೊಂದಿಗೆ ಸಲುಗೆ ಬೆಳೆಸಿಕೊಂಡು ಪ್ರೀತಿಸುವ ನಾಟಕವಾಡಿ ವಿವಾಹವಾಗುವುದಾಗಿ ನಂಬಿಸಿ ಸಂಪರ್ಕ ಬೆಳೆಸಿದ್ದಾನೆ. ತದನಂತರ ಮದುವೆ ವಿಚಾರ ಬಂದಾಗಲೆಲ್ಲ ಒಂದೊಂದು ಸಬೂಬು ಹೇಳುತ್ತಾ ನುಣುಚಿಕೊಳ್ಳುತ್ತಿದ್ದ.
2020, ಡಿಸೆಂಬರ್ 10ರಂದು ಸಬ್‍ರಿಜಿಸ್ಟಾರ್ ಕಚೇರಿಯಲ್ಲಿ ವಿವಾಹಕ್ಕೆ ಸಿದ್ದತೆ ಮಾಡಿಕೊಂಡಾಗಲೂ ನೆಪ ಹೇಳಿ ದಿನಾಂಕ ಮುಂದೂಡಿದ್ದ.
ತದನಂತರವೂ ಸಂಪರ್ಕ ಬೆಳೆಸಿಕೊಂಡಿದ್ದ ವ್ಯಕ್ತಿ ತನಗೆ ವಂಚಿಸಿದ್ದಾನೆ ಎಂದು ನೊಂದ ಮಹಿಳೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿ ರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Articles You Might Like

Share This Article