ಬಿಗ್‍ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಕ್ಯಾಮೆರಾಮನ್ ಜತೆ ರಂಪಾಟ..

ಬೆಂಗಳೂರು, ಡಿ.29- ಬಿಗ್‍ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಅವರು ರಾತ್ರಿ ಪಬ್‍ನಿಂದ ಹೊರಬರುವ ದೃಶ್ಯ ಸೆರೆಹಿಡಿದ ಮಾಧ್ಯಮವೊಂದರ ಕ್ಯಾಮೆರಾಮನ್ ಜತೆ ರಂಪಾಟವಾಡಿದ್ದಾರೆ. ರಾತ್ರಿ 9.40ರ ಸುಮಾರಿನಲ್ಲಿ ನಗರದ ಮ್ಯೂಸಿಯಂ ರಸ್ತೆಯಲ್ಲಿ ದಿವ್ಯಾ ಸುರೇಶ್ ಕಿರಿಕ್ ಮಾಡಿಕೊಂಡಿದ್ದಾರೆ.

ಪಬ್‍ನಿಂದ ಹೊರಬಂದ ದಿವ್ಯಾ ಸುರೇಶ್ ಕಾರಿಗಾಗಿ ಕಾಯುತ್ತಿದ್ದರು. ಆ ವೇಳೆ ಮಾಧ್ಯಮದ ಕ್ಯಾಮೆರಾಮನ್ ಸೆರೆ ಹಿಡಿಯಲು ಮುಂದಾಗುತ್ತಿದ್ದಂತೆ ದಿವ್ಯಾ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ನೈಟ್‍ಕಫ್ರ್ಯೂ ಜಾರಿಯಿರುವ ಕಾರಣ ಬೇಗ ಮನೆಗೆ ಹೋಗಿ ಎಂದು ಹೇಳಿ ಅವವರನ್ನು ಕಳುಹಿಸಿದ್ದಾರೆ. ಈ ಬಗ್ಗೆ ಕ್ಯಾಮೆರಾಮನ್‍ನಿಂದಾಗಲಿ ಅಥವಾ ದಿವ್ಯಾ ಸುರೇಶ್ ಅವರಾಗಲಿ ಈತನಕ ಯಾವುದೇ ದೂರು ನೀಡಿಲ್ಲ ಎಂದು ಹಿರಿಯ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.