ದಸರಾ-ದೀಪಾವಳಿ ಪ್ರಯುಕ್ತ 699ರೂ.ಗೆ ಜಿಯೋಫೋನ್..! ಇದರ ವಿಶೇಷತೆಗಳೇನು ಗೊತ್ತೇ..?

ಬೆಂಗಳೂರು, ಅ.5- ದಸರಾ ಹಾಗೂ ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ಜಿಯೋ ಫೋನ್ ಕೇವಲ 699ಕ್ಕೆ ಸಿಗಲಿದೆ.ವಿಶೇಷ ಬೆಲೆಯಲ್ಲಿ ದೊರಕಲಿರುವ ಜಿಯೋಫೋನ್‍ನ ರಿಯಾಯಿತಿ ಮಾರಾಟ ಇಂದಿನಿಂದ ದೀಪಾವಳಿಯವರೆಗೆ ಲಭಿಸಲಿದೆ.

ಜಿಯೋಫೋನ್‍ನ ಸಾಮಾನ್ಯ ಬೆಲೆ 1500 ರೂ.ಗಳಿದ್ದು, ಇದನ್ನು ಹಬ್ಬದ ಪ್ರಯುಕ್ತ ಗ್ರಾಹಕರಿಗೆ 699ಕ್ಕೆ ನೀಡಲಾಗುತ್ತಿದೆ. ಈ ಕೊಡುಗೆಗಾಗಿ ನಿಮ್ಮ ಹಳೆಯ ಫೋನ್‍ಗಳನ್ನು ವಿನಿಯಮ ಮಾಡಬೇಕಾಗಿಲ್ಲ. ದೀಪಾವಳಿ 2019ರ ಕೊಡುಗೆಯ ಮೂಲಕ ಸೇರ್ಪಡೆಗೊಳ್ಳುವ ಗ್ರಾಹಕರಿಗೆ ಜಿಯೋ ವತಿಯಿಂದ ಮೊಬೈಲ್‍ನೊಂದಿಗೆ ಉಚಿತ ಡೇಟಾ ಲಾಭ ದೊರೆಯಲಿದೆ.

ಗ್ರಾಹಕರು ಮೊದಲು ಮಾಡುವ ರೀಚಾರ್ಜ್‍ಗಳಿಗೆ ತಲಾ 99 ಮೌಲ್ಯದ ಡೇಟಾ ಹೆಚ್ಚುವರಿಯಾಗಿ ನೀಡಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಅಧ್ಯಕ್ಷ ಹಾಗೂ ಕಾರ್ಯಕಾರಿ ನಿರ್ದೇಶಕ ಡಿ.ಮುಖೇಶ್ ಅಂಬಾನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ 2ಜಿ ಫೋನ್‍ಗಳ ಪೈಕಿ ಅತ್ಯಂತ ಕಡಿಮೆ ದರದಲ್ಲಿ ಈ ಫೋನ್ ಈಗ ಸಿಗುತ್ತಿದೆ. ಎಚ್‍ಡಿ ವಾಯ್ಸ್ ಕಾಲ್ ಜೊತೆ ಜಿಯೋ ಫೋನಿನಲ್ಲಿ ವಿಡಿಯೋ ಕಾಲ್ ಮಾಡಬಹುದಾಗಿದೆ. ಫೋನ್ ಬಾಕ್ಸ್ ನಲ್ಲಿ ಹ್ಯಾಂಡ್ ಸೆಟ್, ತೆಗೆಯಲು ಸಾಧ್ಯವಿರುವ ಬ್ಯಾಟರಿ, ಚಾರ್ಜರ್ ಅಡಾಪ್ಟರ್, ಜಿಯೋ ಸಿಮ್ ಕಾರ್ಡ್ ಇರಲಿದೆ.

ಕನ್ನಡ ಸೇರಿದಂತೆ ಒಟ್ಟು 22 ಭಾಷೆಗಳಿಗೆ ಜಿಯೋ ಫೋನ್ ಬೆಂಬಲ ನೀಡುತ್ತಿದ್ದು ಮೈ ಜಿಯೋ, ಜಿಯೋ ಸಾವನ್, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಎಕ್ಸ್ ಪ್ರೆಸ್ ನ್ಯೂಸ್, ಜಿಯೋ ವಿಡಿಯೋ ಕಆಲ್, ಜಿಯೋ ಶೇರ್, ಜಿಯೋ ಗೇಮ್ಸ್ ಅಪ್ಲಿಕೇಶನ್ ಬಳಸಬಹುದು. ಸೇವೆ ಆರಂಭಗೊಂಡ ಬಳಿಕ 7 ಕೋಟಿ 2ಜಿ ಬಳಕೆದಾರರು ಜಿಯೋ ಫೋನ್ ಖರೀದಿಸಿದ್ದಾರೆ.

# ಫೋನಿನ ವಿಶೇಷತೆಗಳು :
2.4 ಇಂಚಿನ ಕ್ಯುವಿಜಿಎ ಟಿಎಫ್‍ಟಿ ಸ್ಕ್ರೀನ್(320*240 ಪಿಕ್ಸೆಲ್), 1.2 ಗಿಗಾಹಟ್ರ್ಸ್ ಡ್ಯುಯಲ್ ಕೋರ್ ಪ್ರೊಸೆಸರ್, 512 ಎಂಬಿ ರ‍್ಯಾಮ್, 4ಜಿಬಿ ಆಂತರಿಕ ಮೆಮೊರಿ, 128 ಜಿಬಿವರೆಗೆ ಮೆಮೊರಿ ವಿಸ್ತರಣೆ, 4ಜಿ ವೋಲ್ಟ್, ಜಿಪಿಎಸ್/ಎನ್‍ಎಫ್‍ಸಿ, ಹಿಂದುಗಡೆ 2 ಎಂಪಿ, ಮುಂದುಗಡೆ 0.3 ಎಂಪಿ ಕ್ಯಾಮೆರಾ, ಯುಎಸ್‍ಬಿ 2.0, 2000 ಎಂಎಎಚ್ ಬ್ಯಾಟರಿ.