ನನ್ನ ಸಾಧನೆಗೆ ತಾಯಿ ಕಾರಣ : ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

Social Share

ವಾಷಿಂಗ್ಟನ್ , ಅ. 25 – ನನ್ನ ಯಶಸ್ಸಿಗೆ ನನ್ನ ತಾಯಿಯ ಸಮರ್ಪಣೆ, ದೃಢತೆ ಮತ್ತು ಧೈರ್ಯ ಕಾರಣ ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಶ್ವೇತಭವನಲ್ಲಿ ಆಯೋಜಿಸಿದ್ದ ದೀಪಾವಳಿ ಸಮಾರಂಭದ ಸಭೆಯನ್ನುದ್ದೇಶಿಸಿ ಕಮಲಾ ಹ್ಯಾರಿಸ್ ಮಾತನಾಡಿ ನನ್ನಮ್ಮನ ಸಮರ್ಪಣೆ, ಅವಳ ದೃಢತೆ ಮತ್ತು ಅವಳ ಧೈರ್ಯದಿಂದಾಗಿ ನಾನು ಅಮೆರಿಕದ ಉಪಾಧ್ಯಕ್ಷರಾಗಿ ನಿಮ್ಮ ಮುಂದೆ ನಿಂತಿದ್ದೇನೆ ಎಂದು ಹೇಳಿದರು.

ಬಾಲ್ಯದಲ್ಲಿ ಚೆನ್ನೈಗೆ ಆಗಾಗ್ಗೆ ಭೇಟಿ ನೀಡಿದ್ದನ್ನು ಮತ್ತು ಅಜ್ಜಿಯರೊಂದಿಗೆ ದೀಪಾವಳಿಯನ್ನು ಆಚರಿಸುತ್ತಿದ್ದ ಅಚ್ಚುಮೆಚ್ಚಿನ ನೆನಪುಗಳಿವೆ ಎಂದ ಅವರು ನಾನು ಮತ್ತು ನನ್ನ ತಂಗಿ ಮಾಯಾ ಮಧ್ಯರಾತ್ರಿಯಲ್ಲಿ ಎಚ್ಚರಗೊಂಡು ಹಬ್ಬವನ್ನು ಸಂಭ್ರಮಿಸುತ್ತಿದ್ದೆವು ನಮ್ಮ ಕುಟುಂಬದ ಹಿರಿಯನ ಬಳಿಗೆ ಹೋಗುವುದು ನನಗೆ ಅಚ್ಚುಮೆಚ್ಚಿನ ಕ್ಷಣಗಳನ್ನು ಕಳೆದಿದ್ದೇನೆ ಎಂದು ತಿಳಿಸಿದರು.

ನನ್ನ ತಾಯಿ 19 ನೇ ವಯಸ್ಸಿನಲ್ಲಿ ಅಧ್ಯಯನಕ್ಕಾಗಿಅಮೆರಿಕಕ್ಕೆ ಬಂದರು. ಆದರೆ ಸ್ತನ ಕ್ಯಾನ್ಸರ್ ಸಂಶೋಧಕ ವೈದ್ಯಯಾಗುವುದು ಅವಳ ಗುರಿಯಾಗಿತ್ತು. ಪಿಎಚ್‍ಡಿಗಳಿಸಿ ತನ್ನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದರು ಭಾರತ ಹಾಗು ಅಮೆರಿಕದಲ್ಲಿ ಜೀವನ ಕಳೆದು ನನ್ನ ಸಹೋದರಿ ಮತ್ತು ನನ್ನನ್ನು ಬೆಳೆಸಿದಳು ಎಂದು ಹ್ಯಾರಿಸ್ ಹೇಳಿದರು.

ಬಿಜೆಪಿ ಶಿಸ್ತು ಖಾಕಿ ಚಡ್ಡಿ ಹಾಕಿಕೊಳ್ಳೋದಕ್ಕೆ ಮಾತ್ರ ಸೀಮಿತವೇ..?

ದೀಪಾವಳಿಯನ್ನು ಭರವಸೆಯದಿನ ಎಂದು ವಿವರಿಸಿದ ಅವರು, ಈ ಹಬ್ಬವು ಜಗತ್ತಿನಲ್ಲಿ, ಪರಸ್ಪರ ಮತ್ತು ತನ್ನಲ್ಲಿ ಬೆಳಕನ್ನು ನೋಡಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಶಾಂತಿಗಾಗಿ, ನ್ಯಾಯಕ್ಕಾಗಿ, ತಿಳುವಳಿಕೆಗಾಗಿ ಹೋರಾಡಲು ಕತ್ತಲೆಯಲ್ಲಿ ನಮ್ಮ ಬೆಳಕನ್ನು ಬೆಳಗಿಸಲು ನಾವು ಸಹ ನೆನಪಿಸಿಕೊಳ್ಳುತ್ತೇವೆ. ಎಂದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಮಾನತೆಯ ಆದರ್ಶಗಳನ್ನು ಅರಿತುಕೊಳ್ಳುವಂತೆ ಜನರಿಗೆ ಕರೆ ನೀಡಿದರು.

Articles You Might Like

Share This Article