ಸಮ್ಮಿಶ್ರ ಸರ್ಕಾರ ಸುಭದ್ರವಾಗಿರಲಿದೆ : ಡಿಕೆಶಿ

ಬೆಂಗಳೂರು,ಜು.8- ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಲು ಮತ್ತು ಕಾಂಗ್ರೆಸ್ ಪಕ್ಷದ ಒಳಿತಿಗಾಗಿ ಪಕ್ಷದ ಸಚಿವರು ಎಲ್ಲ ರೀತಿಯ ತ್ಯಾಗಕ್ಕೂ ಸಿದ್ದರಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳುವ ಮೂಲಕ ಸಾಮೂಹಿಕ ರಾಜೀನಾಮೆಯನ್ನು ಪರೋಕ್ಷವಾಗಿ ಸಮ್ಮತಿಸಿದ್ದಾರೆ.

ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಗೃಹಕಚೇರಿಯಲ್ಲಿ ಸಚಿವರ ಉಪಹಾರ ಕೂಟದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಮ್ಮಿಶ್ರ ಸರ್ಕಾರದ ಸಂಖ್ಯೆ ಬಲ ಕುಸಿದಿದೆ ಎಂಬುದು ಸರಿಯಲ್ಲ. ನಮ್ಮ ಸಂಖ್ಯಾಬಲ ಕುಸಿದಿಲ್ಲ. ನಾವು ಸದೃಢರಾಗಿದ್ದೇವೆ. ಶಾಸಕರು ರಾಜೀನಾಮೆ ನೀಡಿದಾಕ್ಷಣ ಎಲ್ಲವೂ ಬಗೆಹರಿದಿಲ್ಲ. ಇನ್ನೂ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು . ಸಾಕಷ್ಟು ಪ್ರಕ್ರಿಯೆಗಳು ಬಾಕಿ ಇವೆ ಎಂದರು.

ಸಮ್ಮಿಶ್ರ ಸರ್ಕಾರ ಸುಭದ್ರವಾಗಿರಲಿದೆ. ಸುಭದ್ರವಾಗಿ ಉಳಿಯುತ್ತೆ ಎಲ್ಲ ರೀತಿಯ ಬಿಕ್ಕಟ್ಟುಗಳು ಶೀಘ್ರದಲ್ಲೇ ಬಗೆಹರಿಯುತ್ತದೆ ಎಂದು ಡಿ.ಕೆ.ಶಿವಕುಮಾರ ಸ್ಪಷ್ಟಪಡಿಸಿದರು.