Saturday, September 23, 2023
Homeಇದೀಗ ಬಂದ ಸುದ್ದಿಸಿಎಂ ಹುದ್ದೆ ಕುರಿತು ಸೂಕ್ತ ಕಾಲದಲ್ಲಿ ಹೈಕಮಾಂಡ್‍ ನಿರ್ಧಾರ ಕೈಗೊಳ್ಳುತ್ತೆ : ಡಿಕೆಶಿ

ಸಿಎಂ ಹುದ್ದೆ ಕುರಿತು ಸೂಕ್ತ ಕಾಲದಲ್ಲಿ ಹೈಕಮಾಂಡ್‍ ನಿರ್ಧಾರ ಕೈಗೊಳ್ಳುತ್ತೆ : ಡಿಕೆಶಿ

- Advertisement -

ಬೆಂಗಳೂರು, ಜೂ.3- ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಹೈಕಮಾಂಡ್ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಆವರೆಗೂ ಒಗ್ಗಟ್ಟಿನಿಂದ ಜನರ ಆಶಯಗಳನ್ನು ಈಡೇರಿಸಲು ಕಂಕಣಬದ್ಧವಾಗಿ ಕೆಲಸ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುವ ಮೂಲಕ ಅಧಿಕಾರ ಹಂಚಿಕೆಯ ಸೂತ್ರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ. ತವರು ಜಿಲ್ಲೆ ರಾಮನಗರ ಹಾಗೂ ಕನಕಪುರ ಕ್ಷೇತ್ರಕ್ಕೆ ಭೇಟಿ ನೀಡಿರುವ ಅವರು ಹಾರೋಹಳ್ಳಿಯಲ್ಲಿ ಅಭಿನಂದನೆ ಸ್ವೀಕರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ನಾನು ಮುಖ್ಯಮಂತ್ರಿಯಾಗಬೇಕು ಎಂಬ ಆಸೆಯಲ್ಲಿ ನೀವೆಲ್ಲಾ ಮತ ಹಾಕಿದ್ದೀರ. ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ವೇಳೆ ನಾನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಹಿರಿಯನಾಯಕರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರೊಂದಿಗೆ ಚರ್ಚೆ ಮಾಡಿ ಹೈಕಮಾಂಡ್ ತೆಗೆದುಕೊಳ್ಳುವ ನಿಲುವಿಗೆ ಬದ್ಧ ಎಂದು ಭರವಸೆ ನೀಡಿದ್ದೆ. ಹಾಗೆಂದು ಯಾರೂ ಆತಂಕ ಪಡುವ ಅಗತ್ಯವಿಲ್ಲ. ಹೈಕಮಾಂಡ್ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಸದ್ಯಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಸಚಿವರ ಸಂಪುಟದ ಸದಸ್ಯರ ಒಟ್ಟುಗೂಡಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವತ್ತ ಗಮನ ಹರಿಸುತ್ತೇನೆ ಎಂದು ಹೇಳಿದರು.

- Advertisement -

ರೈಲು ದುರಂತ : 300 ದಾಟಿದ ಸಾವಿನ ಸಂಖ್ಯೆ, 1000ಕ್ಕೂ ಹೆಚ್ಚು ಜನರಿಗೆ ಗಾಯ

ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಸಂಬಂಧಪಟ್ಟಂತೆ ದೆಹಲಿಯಲ್ಲಿ ನಡೆದ ಮಾತುಕತೆ ವೇಳೆ ಅಧಿಕಾರ ಹಂಚಿಕೆ ಸ್ರೂತ್ರ ಚರ್ಚೆಯಾಗಿದೆ. ಸಿದ್ಧರಾಮಯ್ಯ 30 ತಿಂಗಳು ಬಾಕಿ ಉಳಿದ ಅವಧಿಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಎಂದು ಒಪ್ಪಿತ ಸಂಧಾನ ಸೂತ್ರ ಸಿದ್ಧವಾಗಿದೆ ಎಂಬ ವದಂತಿಗಳಿವೆ. ಆದರೆ ಈ ವಿಷಯವನ್ನು ಹೈಕಮಾಂಡ್ ನಾಯಕರಾಗಲಿ, ರಾಜ್ಯನಾಯಕರಾಗಲಿ ಈವರೆಗೂ ಸ್ಪಷ್ಟಪಡಿಸಿಲ್ಲ.

ಎಲ್ಲವೂ ರಹಸ್ಯವಾಗಿಯೇ ಉಳಿದಿವೆ. ಸರ್ಕಾರ ರಚನೆಯಾದ ದಿನದಿಂದ ಪಂಚಖಾತ್ರಿ ಯೋಜನೆಗಳ ಜಾರಿಯ ಬಗ್ಗೆಯೇ ವ್ಯಾಪಕ ಚರ್ಚೆಗಳು ನಡೆದಿದ್ದವು. ಬೇರೆಲ್ಲಾ ವಿಷಯಗಳೂ ನಗಣ್ಯವಾಗಿದ್ದವು. ಹೀಗಾಗಿ ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಎಲ್ಲಿಯೂ ಪ್ರಸ್ತಾಪವಾಗಿರಲಿಲ್ಲ.

ಸರ್ಕಾರ ರಚನೆಯ ಮೂಲಕ ಇದೇ ಮೊದಲ ಬಾರಿಗೆ ತವರು ಜಿಲ್ಲೆಯಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಹುದ್ದೆ ಕುರಿತು ಹೈಕಮಾಂಡ್ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿರುವುದು ರಾಜಕೀಯ ಕುತೂಹಲಗಳನ್ನು ಕೆರಳಿಸಿವೆ. ಚುನಾವಣೆ ಮೊದಲು ಡಿ.ಕೆ.ಶಿವಕುಮಾರ್ ಸಮುದಾಯ ಹಾಗೂ ಕ್ಷೇತ್ರದ ಬಹಿರಂಗ ಸಭೆಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಈ ಬಾರಿ ಉತ್ತಮ ಅವಕಾಶವಿದೆ. ಸಮುದಾಯದವರು ಬಳಸಿಕೊಳ್ಳಬೇಕು. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಹೇಳಿದರು.

ಬಾಡಿಗೆ ಮನೆಯಲ್ಲಿರುವವರಿಗೂ ಗೃಹಜ್ಯೋತಿ ಭಾಗ್ಯ : ಡಿಸಿಎಂ ಡಿಕೆಶಿ

ಕ್ಷೇತ್ರದ ಜನರ ಬಳಿ ಚರ್ಚೆ ಮಾಡುವಾಗಲೂ ಕಾಂಗ್ರೆಸ್‍ನಲ್ಲಿ ತಾವು ಮುಖ್ಯಮಂತ್ರಿಯಾಗಲಿದ್ದು ಪಕ್ಷವನ್ನು ಬೆಂಬಲಿಸಿ ಎಂದು ಹೇಳುತ್ತಿದ್ದರು. ಅದಕ್ಕನುಗುಣವಾಗಿ ಕನಕಪುರ ಕ್ಷೇತ್ರದ ಜನ 1 ಲಕ್ಷ 23 ಸಾವಿರ ಮತಗಳ ಅಂತರದಿಂದ ಡಿ.ಕೆ.ಶಿವಕುಮಾರ್ ಅವರನ್ನು ಗೆಲ್ಲಿಸಿದ್ದಾರೆ. ಇಂದು ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸಲು ಅವರು ತವರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

#dkshivakumar, #ChiefMinister, #HighCommand, #decision,

- Advertisement -
RELATED ARTICLES
- Advertisment -

Most Popular