ಮೈಸೂರು, ಫೆ.16- ಬಿಜೆಪಿ ಪ್ರಣಾಳಿಕೆಯ ಶೇ.90 ರಷ್ಟನ್ನು ಈಡೇರಿಸಿಲ್ಲ. ಮೂರೂವರೆ ವರ್ಷದ ಅವಧಿಯಲ್ಲಿ ಅವರ ಸಾಧನೆ ಏನು ಎಂದು ಡಿ.ಕೆ.ಶಿವಕುಮಾರ್ ಮೈಸೂರಿನಲ್ಲಿ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಹಸಿರು ಟವಲ್ ಹಾಕಿಕೊಂಡು ಬಜೆಟ್ ಮಂಡಿಸಿದ್ದರು. ಆದರೆ ಪ್ರಯೋಜನ ಏನೂ? ಬಿಜೆಪಿಯದ್ದು ಬರೀ ಸುಳ್ಳಿನ ಸರಮಾಲೆ.ಮೂರೂವರೆ ವರ್ಷದಲ್ಲಿ ಬಿಜೆಪಿ ಸಾಧನೆ ಏನೂ ಇಲ್ಲ. ಬಿಜೆಪಿಗೆ 170 ಪ್ರಶ್ನೆ ಕೇಳಿದ್ದೇವೆ. ಒಂದೇ ಒಂದು ಪ್ರಶ್ನೆಗೂ ಇದುವರೆಗೆ ಉತ್ತರ ಬಂದಿಲ್ಲ. ಸುಳ್ಳಿಗೂ ಒಂದು ಲೆಕ್ಕ ಇರಬೇಕು. ಆದರೆ ನಿಮಗೆ ಆ ಲೆಕ್ಕವೂ ಇಲ್ಲ.
ಇನ್ಮುಂದೆ ಮತ ಚಲಾಯಿಸಲು ಸರದಿ ಸಾಲಲ್ಲಿ ನಿಲ್ಲಬೇಕಿಲ್ಲ
ಬಿಜೆಪಿದು ಬರೀ ವಂಚನೆ, ವಂಚನೆ, ವಂಚನೆ. ಬಿಜೆಪಿಗೆ ಅಧಿಕಾರದಲ್ಲಿ ಮುಂದು ವರೆಯಲು ಅರ್ಹತೆ ಇಲ್ಲ ಎಂದು ಡಿಕೆಶಿ ವಾಗ್ಧಾಳಿ ನಡೆಸಿದ್ದಾರೆ.ಮಾರ್ಚ್ 7 ಅಥವಾ 8 ಕ್ಕೆ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.ನಾಳೆ ಮಂಡಿಸುವ ಬಜೆಟ್ ಕೇವಲ ಚುನಾವಣಾ ಪ್ರಣಾಳಿಕೆ ಬಜೆಟ್ ಅನ್ನೋದು ನಮಗೆ ಗೊತ್ತಿದೆ ಎಂದು ಟೀಕಿಸಿದರು.
ಡಬಲ್ ಇಂಜಿನ್ ಸರಕಾರದಲ್ಲಿ ಹೊಗೆ ಬಂತೇ ಹೊರತು ಇಂಜಿನ್ ಮುಂದಕ್ಕೆ ಹೋಗಲಿಲ್ಲ. ಸರ್ಕಾರದ ಇಂಜಿನ್ ಸ್ಟಾರ್ಟ್ ಆಯ್ತೆ ಹೊರತು ಮುಂದಕ್ಕೆ ಹೋಗಲೇ ಇಲ್ಲ ಎಂದು ವ್ಯಂಗ್ಯವಾಡಿದರು.
ಕಳೆದ ವರ್ಷದ ಬಜೆಟ್ನಲ್ಲಿ ಘೋಷಣೆ ಆಗಿದ್ದರಲ್ಲಿ ಏನೇನಾಗಿದೆ ಅಂತಾ ಸಿಎಂ ಒಂದು ರೀಪೋರ್ಟ್ ಕೊಡ ಬೇಕಿತ್ತು.ಇನ್ನೂ ಕೊಟ್ಟಿಲ್ಲ. ಸಂಜೆ ಒಳಗೆ ಅವರು ರೀಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿ. ಬಸವಣ್ಣನ ಹೆಸರಿಟ್ಟು ಕೊಂಡು ನುಡಿದಂತೆ ನಡೆದಿದ್ದೇನೆ ಎಂಬುದನ್ನು ಜನರಿಗೆ ಸಿಎಂ ಹೇಳಲಿ ಎಂದು ಒತ್ತಾಯಿಸಿದರು.
ಮಾರ್ಚ್ 7 ಅಥವಾ 8 ನೇ ತಾರೀಖು ಚುನಾವಣಾ ನೀತಿ ಸಂಹಿತೆ ಘೋಷಣೆ ಆಗುತ್ತೆ. ನಾಳೆ ಆಗುವ ಬಜೆಟ್ ಕೇವಲ ಪೇಪರ್ನಲ್ಲಿ ಉಳಿಯುತ್ತದೆ ಎಂದು ಸುದ್ದಿಗೋಷ್ಟಿಯಲ್ಲಿ ಟೀಕಿಸಿದ್ದಾರೆ.
#DKShivakumar, #Question, #BJP,