ವಿಧಾನಸೌಧದಲ್ಲಿ ಹಣ ಪತ್ತೆ ಪ್ರಕರಣ ತನಿಖೆಗೆ ಡಿಕೆಶಿ ಆಗ್ರಹ

Social Share

ಬೆಂಗಳೂರು,ಜ.5-ವಿಧಾನಸೌಧದಲ್ಲಿ ಹಣ ಸಿಕ್ಕಿರುವ ಪ್ರಕರಣದಲ್ಲಿ ನ್ಯಾಯಾಂಗ ತನಿಖೆ ನಡೆಸಿ, ಸತ್ಯಾಂಶವನ್ನು ಹೊರ ತರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.

ವಿಧಾನಸೌಧದಲ್ಲಿ ಹಣದ ಜೊತೆ ವ್ಯಕ್ತಿಯೊಬ್ಬನ್ನನ್ನು ಪೊಲೀಸರು ಹಿಡಿದುಕೊಂಡಿದ್ದಾರೆ. ಸಚಿವರೊಬ್ಬರ ಮನೆಯಿಂದ ಪೊಲೀಸರಿಗೆ ದೂರವಾಣಿ ಕರೆ ಹೋಗಿದೆ. ಆ ವ್ಯಕ್ತಿಯನ್ನು ಬಿಟ್ಟು ಕಳುಹಿಸಲಾಗಿದೆ. ಆ ಹಣ ಯಾರಿಗೆ ಸೇರಿದ್ದು, ಹಿನ್ನೆಲೆಯ ಏನು ಎಂಬ ಬಗ್ಗೆ ಜನರಿಗೆ ಸತ್ಯ ತಿಳಿಯಬೇಕಿದೆ ಎಂದರು.

ಶೇ.40 ಮತ್ತು 50 ಕಮಿಷನ್ ಬಗ್ಗೆ ಮುಖ್ಯಮಂತ್ರಿ ಮತ್ತು ಸಚಿವರು ಸಾಕ್ಷ್ಯ ಕೇಳುತ್ತಿದ್ದಾರೆ. ಹಲವು ಗುತ್ತಿಗೆದಾರರು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ದಯಾ ಮರಣಕ್ಕೆ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಇದಕ್ಕಿಂತ ಸಾಕ್ಷ್ಯ ಬೇಕಾ. ವಿಧಾನಸೌಧದ ಗೋಡೆ ಗೋಡೆಗಳು ಹಣ ಹಣ ಎಂದು ಬಾಯಿ ಬಿಡುತ್ತಿವೆ.

ವಿಧಾನಸೌಧದಲ್ಲಷ್ಟೆ ಅಲ್ಲ ಗ್ರಾಮ ಪಂಚಾಯತ್, ಪಾಲಿಕೆ ಸೇರಿದಂತೆ ಎಲ್ಲೆಡೆ, ಎಲ್ಲಾ ಇಲಾಖೆಗಳಲ್ಲಿ ಹಣ ಇಲ್ಲದೆ ಏನು ನಡೆಯುತ್ತಿಲ್ಲ. ಅಧಿಕಾರಿಗಳಿಗೆ, ಸಚಿವರಿಗೆ ಹಣ ಕೊಡದೆ ಯಾವ ಕಡತವೂ ಮುಂದೆ ಹೋಗುತ್ತಿಲ್ಲ ಎಂದು ಆರೋಪಿಸಿದರು.

ವಿಧಾನಸಭೆ ಚುನಾವಣೆಗೆ ಮತದಾರರ ಅಂತಿಮ ಪಟ್ಟಿ ಪ್ರಕಟ

ವಿಧಾನಸೌಧದಲ್ಲಿ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸಿ.ಸಿ.ಪಾಟೀಲ್ ರಾಜೀನಾಮೆ ನೀಡಬೇಕಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ರಾಜೀನಾಮೆ ಬೇಕು. ಅವರು ಕೊಡುವುದಿಲ್ಲ. ಬಿ ವರದಿ ಬರೆಸಿ ಪ್ರಕರಣ ಮುಚ್ಚಿ ಹಾಕುತ್ತಾರೆ. ಈ ಸರ್ಕಾರ ಇರುವುದೇ 60 ದಿನ. ಸರ್ಕಾರ ಭ್ರಷ್ಟಾಚಾರದ ಬಗ್ಗೆ ರಾಜ್ಯದ ಪ್ರತಿಯೊಬ್ಬರಿಗೂ ಅನುಭವವಾಗಿದೆ. ದೇಶದಲ್ಲೇ ಕರ್ನಾಟಕ ಅತ್ಯಂತ ಭ್ರಷ್ಟ ಸರ್ಕಾರ ಎಂಬ ಅಪಕೀರ್ತಿಗೆ ಪಾತ್ರವಾಗಿದೆ ಎಂದು ಕಿಡಿಕಾರಿದರು.

ಭ್ರಷ್ಟಚಾರ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದ್ದಾರೆ. ಲಂಚಕ್ಕೆ ದಾಖಲೆ ಕೇಳುತ್ತಾರೆ. ಎಲ್ಲರೂ ಸಾಕ್ಷ್ಯ ಉಳಿಸಿಯೇ ಭ್ರಷ್ಟಚಾರ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ವಿಧಾನಸೌಧದಲ್ಲಿ ಚರ್ಚೆ ಮಾಡಬೇಕಿತ್ತು. ಆದರೆ ಅವಕಾಶ ಸಿಗಲ್ಲಿಲ್ಲ. ಅವನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಈ ಸರ್ಕಾರ ಇರುವ ಅಲ್ಪಾವಧಿಯಲ್ಲಿ ಚುನಾವಣಾ ಬಜೆಟ್ ಅನ್ನು ಮಂಡಿಸಿ. ಭ್ರಷ್ಟಚಾರದ ಆರೋಪಗಳನ್ನು ಮುಚ್ಚಿ ಹಾಕಿ ಹೋಗಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ಹಣ ಸಿಕ್ಕ ಪ್ರಕರಣವನ್ನು ಇಡಿಗೂ ಒಪ್ಪಿಸುವುದಿಲ್ಲ, ಆದಾಯ ತೆರಿಗೆ ಇಲಾಖೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಹಿಂದೆ ನಡೆದ ಹಲವು ಹಗರಣಗಳನ್ನು ಇದೇ ರೀತಿ ಮುಚ್ಚಿ ಹಾಕಲಾಗಿದೆ. ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಬಂತರಾಗಿರುವ ಎಡಿಜಿಪಿ ಅಮೃತ್‍ಪಾಲ್ ಹೊರಗೆ ಬರದಂತೆ ಎಚ್ಚರಿಕೆ ವಹಿಸಿದ್ದಾರೆ. ಒಂದು ವೇಳೆ ಅವರು ಹೊರಗೆ ಬಂದು ಬಾಯಿ ಬಿಟ್ಟಿದ್ದರೆ ಬಹಳಷ್ಟು ಜನರ ಬಂಡವಾಳ ಬಯಲಾಗುತ್ತಿತ್ತು.

ಒತ್ತಡ ನಿಭಾಯಿಸಲಾಗದೆ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

ಆದರೆ ಅದು ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಿದೆ ಎಂದು ಆರೋಪಿಸಿದ ಅವರು, ನೇಮಕಾತಿ ಹಗರಣಗಳ ¨ಗ್ಗೆ ಯುವಕರು ಗಂಭೀರವಾಗಿ ಆಲೋಚಿಸಬೇಕು ಎಂದರು.

DK Shivakumar, vidhana soudha, finding, money, investigation,

Articles You Might Like

Share This Article