ಉಗ್ರರ ಮೇಲಿನ ತಮ್ಮ ಪ್ರೇಮವನ್ನು ಡಿಕೆಶಿ ಜಗಜ್ಜಾಹೀರು ಮಾಡಿದ್ದಾರೆ : ಕಟೀಲ್

Social Share

ಬೆಂಗಳೂರು,ಡಿ.16- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಭಯೋತ್ಪಾದಕರ ಮೇಲಿನ ತಮ್ಮ ಪ್ರೇಮವನ್ನು ಜಗಜಾ್ಜಹೀರು ಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ತಿಳಿಸಿದ್ದಾರೆ.

ದೇಶದ ಭದ್ರತೆ, ಏಕತೆ ವಿಚಾರದಲ್ಲಿ ಕಾಂಗ್ರೆಸ್ ಕಣ್ಣಾಮುಚ್ಚಾಲೆ ಆಡುತ್ತಿರು ವುದು ಇದೇ ಮೊದಲಲ್ಲ. ಮಂಗಳೂರಿನ ಕುಕ್ಕರ್ ಬಾಂಬ್ ವಿಚಾರ ಭಯೋತ್ಪಾದನೆಗೆ ಸಮಾನವಲ್ಲ ಎಂದು ಮಾತನಾಡುವ ಅವರು ಅಧಿಕಾರಕ್ಕೆ ಬರದಂತೆ ಜನತೆ ತಕ್ಕ ಪಾಠ ಕಲಿಸುತ್ತಾರೆ. ಅಲ್ಲದೆ ಪೂರ್ಣಪ್ರಮಾಣದಲ್ಲಿ ಮೂಲೆಗುಂಪು ಮಾಡುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಾಟ್ಲಾ ಹೌಸ್ ಪ್ರಕರಣದಲ್ಲಿ ಕಾಂಗ್ರೆಸ್ನ ಅಂದಿನ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂ ಅವರು ಉಗ್ರರನ್ನು ಎನ್ಕೌಂಟರ್ ಮಾಡಿದ್ದಕ್ಕಾಗಿ ಅತ್ತಿದ್ದುದು ನೆನಪಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಹಿಂದೊಮ್ಮೆ ನೆಹರೂ ಮತದ ಲಾಭಕ್ಕಾಗಿ ಉರ್ದುವಿನಲ್ಲಿ ತನ್ನ ಮದುವೆ ಆಮಂತ್ರಣ ಪತ್ರವನ್ನು ಮುದ್ರಿಸಿ ದ್ದರು. ರಾಜೀವ್ ಗಾಂ ಕೂಡ ಭ್ರಿಂದನ್ವಾಲೆಯನ್ನು ಒಬ್ಬ ಸಂತ ಎಂದು ಕರೆದಿದ್ದರು ಎಂದು ನೆನಪಿಸಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದನೆ ಉತ್ತುಂಗ ಸ್ಥಿತಿಯಲ್ಲಿತ್ತು. ಕಾಂಗ್ರೆಸ್ ಪಕ್ಷ ಭಯೋತ್ಪಾದಕರಿಗೆ ಬೆಂಬಲ ಕೊಡುವ ಮೂಲಕ ಮತಬ್ಯಾಂಕ್ ರಾಜಕೀಯ ಮಾಡುತ್ತಿದೆ. ಇದನ್ನು ಜನರು ಅರ್ಥ ಮಾಡಿಕೊಂಡಿದ್ದು, ಎ¯್ಲÉಡೆ ಅವರ ವಿರುದ್ಧ ಜನಾಭಿಪ್ರಾಯ ಮೂಡಿದೆ ಎಂದು ತಿಳಿಸಿದ್ದಾರೆ.

ದೇಶದ ಭದ್ರತೆ ಮತ್ತು ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯ ಚುನಾವಣೆ, ಗುಜರಾತ್ ಚುನಾವಣೆಯಲ್ಲಿ ಜನರು ಬಿಜೆಪಿ ಪರ ನಿಂತಿದ್ದಾರೆ.

AIOSEO Settings

ಕರ್ನಾಟಕದಲ್ಲಿ ಅಧಿಕಾರಕ್ಕೇರುವ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ಅಧ್ಯಕ್ಷರಿಗೆ ಅದು ತಿರುಕನ ಕನಸು ಎಂಬುದರ ಅರಿವಾಗಿದೆ. ಆದ್ದರಿಂದಲೇ ಅವರು ಭಯೋತ್ಪಾದಕರ ಪರ ನಿಂತು ತಮ್ಮ ತುಷ್ಟೀಕರಣ ನೀತಿಯನ್ನು ಮುಂದುವರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ದೇಶದ ಸೈನಿಕರ ಪರ ನಿಲ್ಲದೆ, ರಕ್ಷಣಾ ವಿಚಾರದಲ್ಲೂ ಸಾಕ್ಷಿ ಕೇಳುವ ಮಟ್ಟಕ್ಕೆ ಕಾಂಗ್ರೆಸ್ ತಲುಪಿದೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಭಯೋತ್ಪಾದನೆಯಂಥ ವಿಚಾರ ದಲ್ಲೂ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಕಾಂಗ್ರೆಸಿಗರ ಮನಸ್ಥಿತಿಯನ್ನು ಖಂಡಿಸುವುದಾಗಿ ಅವರು ತಿಳಿಸಿದ್ದಾರೆ.

#DKShivakumar, #NalinKumarKateel, #BJPvsCongress,

Articles You Might Like

Share This Article