ಪಕ್ಷದ ವಿರುದ್ಧ ಮಾತಾಡೋರು ಪಕ್ಷಬಿಟ್ಟು ಹೋಗ್ತಾ ಇರಿ : ಡಿಕೆಶಿ ಕಿಡಿ

Social Share

ಬೆಂಗಳೂರು, ನ.4- ಪಕ್ಷದ ನಾಯಕತ್ವ ತೆಗೆದುಕೊಂಡ ನಿರ್ಧಾರದ ವಿರುದ್ಧ ಮಾತನಾಡುವವರು ನಮ್ಮಲ್ಲಿ ಇರುವುದೇ ಬೇಡ. ಹೊರ ಹೋಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.

ವಿಧಾನಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳು 5ಸಾವಿರ ರೂ. ಶುಲ್ಕ ಪಾವತಿಸಬೇಕು. ಅರ್ಜಿ ಸಲ್ಲಿಸುವಾಗ ಮೀಸಲು ಕ್ಷೇತ್ರಗಳಿಗೆ ಒಂದು ಲಕ್ಷ, ಸಾಮಾನ್ಯ ಕ್ಷೇತ್ರಗಳಿಗೆ 2 ಲಕ್ಷ ರೂ.ಬಾಂಡ್ ನೀಡುವಂತೆ ಅವರು ಸೂಚನೆ ನೀಡಿದ್ದಾರೆ.

ಇದಕ್ಕೆ ಬಿಜೆಪಿ ಟ್ವೀಟ್ ಮೂಲಕ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ನಾನು ನಮ್ಮ ಕಾರ್ಯಕರ್ತರು, ಮುಖಂಡರ ಬಳಿ ಹಣ ಕೇಳಿದ್ದೇನೆ. ಇದರಿಂದ ಬಿಜೆಪಿಯವರಿಗೆ ಆದ ನೋವು, ಸಂಕಟಗಳೇನು ಎಂದು ಪ್ರಶ್ನಿಸಿದ್ದಾರೆ.

ಅಧಿಕಾರದಲ್ಲಿರುವ ಬಿಜೆಪಿಯವರು ಎಷ್ಟೆಲ್ಲಾ ಬಾಂಡ್ಗಳನ್ನು ಸಂಗ್ರಹಿಸಿದ್ದಾರೆ ಎಂಬ ಪಟ್ಟಿ ನಮ್ಮ ಬಳಿ ಇವೆ ಎಂದು ತಿರುಗೇಟು ನೀಡಿದ್ದಾರೆ.ಅರ್ಜಿ ಶುಲ್ಕ ಮತ್ತು ಬಾಂಡ್ಗೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆಗೆ ಕಿಡಿ ಕಾರಿದ ಡಿ.ಕೆ.ಶಿವಕುಮಾರ್, ಆ ರೀತ ಆಕ್ಷೇಪ ವ್ಯಕ್ತಪಡಿಸುವವರು ಪಕ್ಷದಲ್ಲಿ ಇರುವ ಅಗತ್ಯವಿಲ್ಲ.

ಹೊರ ಹೋಗಬಹುದು. ಇದು ಯಾವುದೇ ವೈಯಕ್ತಿಕ ನಿರ್ಧಾರ ಅಲ್ಲ. ಎಲ್ಲರೂ ಸೇರಿ ಪಕ್ಷದ ಹಿತದೃಷ್ಟಿಯಿಂದ ತೀರ್ಮಾನಿಸಿದ್ದೇವೆ. ಪಕ್ಷವನ್ನು ಕಟ್ಟಬೇಕಿದೆ ಎಂದರು.ಬ್ಯಾನರ್ ಕಟ್ಟುವವರು,ಪಕ್ಷ ಸಂಘಟನೆ ಮಾಡುವವರು ಬೇರೆ ಜನ. ಮಾತನಾಡುವವರು ಯಾರೂ ಬ್ಯಾನರ್ ಕಟ್ಟುವುದಿಲ್ಲ ಎಂದು ಹೇಳಿದರು.

ಬಿಬಿಎಂಪಿ ಶಾಲಾ ಶಿಕ್ಷಕರಿಗೆ ‘ಫಾರಿನ್ ಟೂರ್’ ಭಾಗ್ಯ

ಕಾಂಗ್ರೆಸ್ ಕಚೇರಿಯ ಬಾಗಿಲು ಶೀಘ್ರವೇ ಮುಚ್ಚಲಿದೆ ಎಂದು ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಇಂತಹ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಈ ಮೊದಲು ಕಾಂಗ್ರೆಸ್ನಿಂದ ಗೆದ್ದ 13 ಮಂದಿ, ಜೆಡಿಎಸ್ನ ಮೂವರನ್ನು ಇದೇ ಬಿಜೆಪಿಯವರು ಕಾಡಿ-ಬೇಡಿ ಕೈ ಕಾಲು ಹಿಡಿದು ಹಣ ಕೊಟ್ಟು ಖರೀದಿಸಿ ಸರ್ಕಾರ ರಚನೆ ಮಾಡಿದ್ದಾರೆ. ಅವರಿಗೆ ತಾಕ್ಕತ್ತಿದ್ದರೆ ನೇರವಾಗಿ ಜನರಿಂದ ಗೆದ್ದು ಸರ್ಕಾರ ಮಾಡಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಮೆಗತಿ ವೈಟ್ ಟ್ಯಾಪಿಂಗ್ ಕಾಮಗಾರಿ, BBMPಗೆ ವಾಹನ ಸವಾರರ ಹಿಡಿಶಾಪ

ಭ್ರಷ್ಟಾಚಾರಕ್ಕೆ ಡಿ.ಕೆ.ಶಿವಕುಮಾರ್ ಬ್ರಾಂಡ್ ಎಂದು ಸಚಿವ ಅಶ್ವತ್ಥನಾರಾಯಣ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ನನ್ನ ವಿರುದ್ಧ ಮಾತನಾಡುವುದನ್ನು ಬಿಟ್ಟರೆ ಅವರಿಗೆ ಬೇರೆ ಕೆಲಸವಿಲ್ಲ. ಇಂತಹ ಟೀಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.ಕಾಂಗ್ರೆಸ್ನಿಂದ ವಲಸೆ ಹೋಗಿರುವವರು ಮತ್ತೆ ಪಕ್ಷಕ್ಕೆ ಮರಳಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇವೆಲ್ಲಕ್ಕೂ ಕಾಲವೇ ಉತ್ತರಿಸಲಿದೆ ಎಂದು ಹೇಳಿದರು.

Articles You Might Like

Share This Article