ಸೋಲಾರ್ ಪಾರ್ಕ್ ಯೋಜನೆ ಮುಚ್ಚಿಡುವುದರಿಂದ ಸರ್ಕಾರಕ್ಕೆ ನಷ್ಟ : ಡಿಕೆಶಿ

Social Share

ಬೆಂಗಳೂರು,ನ.5- ಪಾವಗಡದಲ್ಲಿ ಸ್ಥಾಪಿಸಲಾಗಿರುವ ಬೃಹತ್ ಸೋಲಾರ್ ಪಾರ್ಕ್ ಯೋಜನೆಯನ್ನು ಮುಚ್ಚಿಡುವುದರಿಂದ ರಾಜ್ಯ ಸರ್ಕಾರಕ್ಕೆ ಮಾರುಕಟ್ಟೆ ನಷ್ಟವಾಗಲಿದೆ. ಹಾಗಾಗಿ ಅದರ ಬಗ್ಗೆ ಸಕಾರಾತ್ಮಕವಾಗಿ ಮಾತನಾಡುವುದು ಅನಿವಾರ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸೋಲಾರ್ಪಾರ್ಕ್ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಸಚಿವರು ಹೊಗಳಿಕೆಯ ಮಾತನ್ನಾಡಿದ್ದಾರೆ. ಮತ್ತೊಂದೆಡೆ ಇದೇಪಾರ್ಕ್ ಸ್ಥಾಪನೆಗೆ ಸಂಬಂಧಪಟ್ಟಂತೆ ತನಿಖೆ ನಡೆಸುವುದಾಗಿಯೂ ಹೇಳಲಾಗುತ್ತಿದೆ.

ತನಿಖೆಯನ್ನು ನಾನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ. ಸೋಲಾರ್ ಪಾರ್ಕ್ ಸ್ಥಾಪನೆ ವೇಳೆ ರೂಪಿಸಲಾದ ನೀತಿ ಮಾದರಿಯಾಗಿದ್ದು, ಇಡೀ ವಿಶ್ವದ ಮನಸೆಳೆದಿತ್ತು ಎಂದು ಹೇಳಿದರು.

ರೈತರ ಜಮೀನು ಸ್ವಾಧೀನ ಮಾಡಿಕೊಳ್ಳದೆ ಬಾಡಿಗೆ ಆಧಾರದ ಮೇಲೆ ಪಡೆದು ಪಾರ್ಕ್ ಸ್ಥಾಪಿಸಲಾಗಿದೆ. ಇದರಿಂದ ರೈತರಿಗೂ ಆದಾಯ ಬರುತ್ತಿದೆ. ಆ ವೇಳೆ 22 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅರ್ಜಿದಾರರಿಗೆ 6 ತಿಂಗಳ ಮೊದಲೇ ಜಾಹಿರಾತಿನ ಮೂಲಕ ಮಾಹಿತಿ ನೀಡಲಾಗಿತ್ತು.

ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ ತರಬೇತಿಯನ್ನೂ ಕೊಡಿಸಲಾಗಿತ್ತು. ಆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಅಧಿಕಾರಿಗಳ ಪೈಕಿ ಈಗ ಒಬ್ಬರು ಇಂಧನ ಇಲಾಖೆಯ ಕಾರ್ಯದರ್ಶಿಯಾಗಿದ್ದಾರೆ. ಮತ್ತೊಬ್ಬರು ಕೆಇಆರ್ಸಿ ಅಧ್ಯಕ್ಷರಾಗಿದ್ದಾರೆ.

ಸರ್ಕಾರ ಅವರ ಬಳಿ ಮಾಹಿತಿ ಪಡೆದುಕೊಳ್ಳಬಹುದು ಎಂದರು. ಯಾವುದೇ ತನಿಖೆಯನ್ನಾದರೂ ಮಾಡಲಿ ಒಂದೇ ಒಂದು ಸಣ್ಣ ತಪ್ಪು ಕಂಡುಬಂದರೂ ನಾನು ಕಾನೂನುಬದ್ದ ಶಿಕ್ಷೆಗೆ ಸಿದ್ದನಿದ್ದೇನೆ ಎಂದು ಅವರು ಹೇಳಿದರು. ನಾನು ಸಚಿವನಾಗಿದ್ದಾಗ ರಾಜ್ಯದಲ್ಲಿ ಎಷ್ಟು ನವೀಕೃತ ಇಂಧನ ಉತ್ಪಾದನೆಯಾಗುತ್ತಿತ್ತು.

ಸಚಿವ ಸ್ಥಾನ ಬಿಟ್ಟಾಗ ಉತ್ಪಾದನೆ ಎಷ್ಟು ಹೆಚ್ಚಾಗಿದೆ ಎಂಬ ಮಾಹಿತಿಗಳು ನನ್ನ ಬಳಿಯೂ ಇವೆ. ನಾನೇನು ಕೆಲಸ ಮಾಡಿದ್ದೇನೆ ಎಂಬುದು ನನ್ನ ಆತ್ಮಸಾಕ್ಷಿಗಷ್ಟೇ ಅಲ್ಲ ಕೇಂದ್ರ ಸರ್ಕಾರಕ್ಕೂ ಗೊತ್ತಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರಮೋದಿ ಅವರೇ ಇಬ್ಬರು ಇಂಧನ ಸಚಿವರ ಸಮ್ಮುಖದಲ್ಲಿ ನನಗೆ ಪ್ರಶಸ್ತಿ ನೀಡಿದ್ದಾರೆ. ಬೇಕಿದ್ದರೆ ಆ ಫೆÇೀಟೊವನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

ಸೋಲಾರ್ ಪಾರ್ಕ್ ಸ್ಥಾಪನೆಯಲ್ಲಿ ಕರ್ನಾಟಕ ರಾಜ್ಯ ಉತ್ತಮ ಮಾದರಿ ಎಂದು ಅಭಿನಂದಿಸಿ ಪತ್ರ ಬರೆದಿದ್ದ ಕೇಂದ್ರ ಸರ್ಕಾರ, ಇತರ ರಾಜ್ಯಗಳಿಗೂ ಕರ್ನಾಟಕದ ಮಾದರಿಯನ್ನು ಅನುಸರಿಸುವಂತೆ ಸಲಹೆ ನೀಡಿತ್ತು. ಈ ಚರಿತ್ರೆಯನ್ನು ಮುಚ್ಚಿಡಲು ಅಥವಾ ಅಳಿಸಿಹಾಕಲು ಸಾಧ್ಯವಿಲ್ಲ ಎಂದರು.

ಬೆಂಗಳೂರಲ್ಲಿ ಗುಂಡಿ ಗಂಡಾಂತರ : ಬಿಬಿಎಂಪಿಗೆ ಸಿಎಂ ತರಾಟೆ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನನಗೆ ಮತ್ತೊಮ್ಮೆ ನೋಟಿಸ್ ನೀಡಿದೆ. ನ.7ರಂದು ವಿಚಾರಣೆಗೆ ಆಗಮಿಸುವಂತೆ ನನಗೂ ಮತ್ತು ನನ್ನ ಸಹೋದರ ಸಂಸದ ಡಿ.ಕೆ.ಶಿವಕುಮಾರ್ಗೂ ಸಮನ್ಸ್ ಬಂದಿದೆ. ಕೆಲವು ದಾಖಲೆಗಳನ್ನು ಕೇಳಿದ್ದಾರೆ. ಅದನ್ನು ಒದಗಿಸಲಾಗುವುದು ಎಂದರು.

ಜಾರಿನಿರ್ದೇಶನಾಲಯ ಪದೇ ಪದೇ ನನಗೆ ಸಮನ್ಸ್ ನೀಡಿ ವಿಚಾರಣೆಗೆ ಕರೆಯುವ ಕಿರುಕುಳ ಏಕೆ ನೀಡುತ್ತಿದೆ ಎಂದು ಗೊತ್ತಿಲ್ಲ. ಮತ್ತೊಂದೆಡೆ ಜಾರಿನಿರ್ದೇಶನಾಲಯ ಮತ್ತು ಸಿಬಿಐ ಎರಡೂ ಸಂಸ್ಥೆಗಳು ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರುಪರಿಶೀಲನೆಗೆ ಮುಂದಾಗಿವೆ. ಇದು ಕಾನೂನು ಬಾಹಿರ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದೇನೆ. ನ್ಯಾಯಾಲಯ ನೀಡುವ ತೀರ್ಪಿಗೆ ತಲೆ ಬಾಗುತ್ತೇನೆ ಎಂದರು.

ತುಮಕೂರಿನಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ತಾಯಿ ಮತ್ತು ನವಜಾತ ಶಿಶುಗಳು ಮೃತಪಟ್ಟ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಏನೂ ಇಲ್ಲ. ಅಮಾನವೀಯವಾಗಿ ವರ್ತಿಸುತ್ತಿದೆ. ಸರ್ಕಾರ ಬಂದಾಗಿನಿಂದಲೂ ಇದೇ ಧೋರಣೆ ಅನುಸರಿಸಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

Articles You Might Like

Share This Article