ಬೆಂಗಳೂರು, ನ.2-ನಗರದ ಸಂಚಾರದಟ್ಟಣೆಯ ಸಮಸ್ಯೆ ನಿವಾರಣೆಗೆ ನಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಸುರಂಗ ರಸ್ತೆ, ಸ್ಟೀಲ್ ಬ್ರಿಡ್ಜ್ ನಂತಹ ಯೋಜನೆಗಳು ಬೇಡ ಎಂದು ವಿರೋಧಿಸುವ ಬಿಜೆಪಿ ಅಥವಾ ಯಾವುದೇ ಸಂಘಟನೆಗಳಾದರೂ ಸಮಸ್ಯೆಗೆ ಪರಿಹಾರ ಏನೆಂದು ಸೂಚಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ. ಸುರಂಗ ರಸ್ತೆ ವಿರೋಧಿಸಿ ಬಿಜೆಪಿ ವತಿಯಿಂದ ನಡೆಯುತ್ತಿರುವ ಸಹಿ ಸಂಗ್ರಹ ಅಭಿಯಾನಕ್ಕೆ ತಿರುಗೇಟು ನೀಡಿದ ಅವರು, ಯೋಜನೆ ಬಗ್ಗೆ ಜಾಗೃತಿ ಅವರು ಮೂಡಿಸುವುದು ಒಳ್ಳೆಯದು ಎಂದಿದ್ದಾರೆ.
ಯೋಜನೆಯ ಬಗ್ಗೆ ಅಧ್ಯಯನ ನಡೆಸಲು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅಧ್ಯಕ್ಷತೆಯಲ್ಲೇ ಸಮಿತಿ ರಚಿಸುತ್ತೇನೆ. ಅವರು ಸೂಚಿಸುವ ತಂತ್ರಜ್ಞರನ್ನೇ ಸದಸ್ಯರನ್ನಾಗಿ ನೇಮಿಸಲು ನಮ ಸರ್ಕಾರ ಸಿದ್ಧವಿದೆ. ರಾಜಕಾರಣ ಬೇಡ, ಅವರೇ ಅಧ್ಯಯನ ಮಾಡಿ ಪರಿಹಾರದ ಬಗ್ಗೆ ವರದಿ ನೀಡಲಿ ಎಂದು ಅವರು ಹೇಳಿದರು.
ಲಾಲ್‌ಬಾಗ್‌ಯಾರ ಆಸ್ತಿಯೂ ಅಲ್ಲ. ಲಾಲ್‌ಬಾಗ್ ಹಾಳು ಮಾಡುವಷ್ಟು ಮೂರ್ಖ ನಾನಲ್ಲ. ಅದರ ಇತಿಹಾಸ ಗೊತ್ತಿದೆ. ಎಷ್ಟು ಜಾಗ ಬಳಕೆಯಾಗುತ್ತಿದೆ ಎಂಬುದು ಗೊತ್ತಿದೆ. ಮೆಟ್ರೋ ಯೋಜನೆ ಬೆಂಗಳೂರಿನಲ್ಲಿ ಸುರಂಗ ಮಾರ್ಗದಲ್ಲಿ ಹೋಗಿಲ್ಲವೇ? ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ನಗರಾಭಿವೃದ್ಧಿ ಸಚಿವರಾಗಿದ್ದ ತಾವು 10 ದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ನೀಡಿದ್ದೆ. ಅದರ ಪ್ರಕಾರವೇ ಬೆಂಗಳೂರಿನಲ್ಲಿ ಸುರಂಗ ಮಾರ್ಗದಲ್ಲೇ ಮೆಟ್ರೋ ಸಂಚರಿಸುತ್ತಿದೆ. ಬೇಕಿದ್ದರೆ ಇವರು ದಾಖಲೆ ತೆಗೆದು ನೋಡಲಿ ಎಂದರು.
ಕೆ.ಜೆ .ಜಾರ್ಜ್ ನಗರಾಭಿವೃದ್ಧಿ ಸಚಿವರಾಗಿದ್ದಾಗ ಸ್ಟೀಲ್ ಬ್ರಿಡ್‌್ಜ ನಿರ್ಮಿಸುವುದಕ್ಕೆ ಬಿಜೆಪಿಯವರು ವಿರೋಧ ಮಾಡಿದ್ದರು. ಬೆಂಗಳೂರಿನಲ್ಲಿ ಬಿಆರ್‌ಪಿಟಿಎಸ್ ನಿರ್ಮಿಸುವಷ್ಟು ಜಾಗ ಬೆಂಗಳೂರಿನಲ್ಲಿ ಇದೆಯೇ? ಆ ರೀತಿ ಮಾಡಿದರೆ ಬೆಂಗಳೂರಿನಲ್ಲಿ ದಿನಕ್ಕೆ 100 ಜನ ಸಾಯುತ್ತಾರೆ. ಇಂತಹ ಯೋಜನೆಗಳು ಸಾಧುವಲ್ಲ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಮೆಟ್ರೋ ರೈಲನ್ನು ಹೆಚ್ಚಿಸಲಿ ಎಂದು ಸವಾಲು ಹಾಕಿದ ಅವರು, ವಿರೋಧ ಪಕ್ಷಗಳದ್ದು ಟೀಕೆ ಮಾಡುವ ಸ್ವಭಾವ. ಅದಕ್ಕೆ ನಮ ಆಕ್ಷೇಪ ಇಲ್ಲ. ಆದರೆ ಪರಿಹಾರ ಏನು ಎಂಬುದನ್ನು ಹೇಳಿ, ಒಳ್ಳೆಯ ಸಲಹೆಗಳನ್ನು ಒಪ್ಪಿಕೊಳ್ಳುತ್ತೇವೆ ಎಂದರು.
ಬಿಜೆಪಿ ಸಹಿ ಸಂಗ್ರಹ ಮಾಡುತ್ತಿದೆ. ನಮ ಕಡೆಯೂ ಸಹಿ ಸಂಗ್ರಹಕ್ಕೆ ನಾನು ಕರೆ ನೀಡಬಹುದು, ಪರಿಣಾಮ ಏನು ಆಗುತ್ತದೆ ಎಂದು ಗೊತ್ತಿದೆ. ಆರ್‌ಎಸ್‌ಎಸ್ ಇಲ್ಲ ಎಂದರೆ ಬಿಜೆಪಿಗೆ ಅಸ್ತಿತ್ವವೇ ಇಲ್ಲ. ಶೇ. 20ರಷ್ಟು ಹೊರತುಪಡಿಸಿದರೆ, ಉಳಿದವರು ವಲಸಿಗರೇ. ಆರ್‌ಎಸ್‌ಎಸ್ ಇಲ್ಲದೇ ಹೋದರೆ ಬಿಜೆಪಿ ಶೂನ್ಯವಾಗುತ್ತಿದೆ. ಪರ್ಯಾಯ ಕ್ರಮಗಳ ಬಗ್ಗೆ ಯಾರೂ ಸಲಹೆ ನೀಡುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಸಂಸದ ತೇಜಸ್ವಿ ಸೂರ್ಯ ಅತಿ ಬುದ್ಧಿವಂತ, ಮೇಧಾವಿ. ವಿಮಾನ ಸಂಚರಿಸುವಾಗ ಬಾಗಿಲು ತೆಗೆದಂತ ಮೇಧಾವಿ, ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲು ಪೂರ್ವಾನುಮತಿ ಇಲ್ಲದೆ, ಅಲ್ಲಿನ ವೈಟ್ ಹೌಸ್‌ಗೆ ಹೋಗಿದ್ದವರು. ಮೊದಲು ಕಾರುಬೇಡ ಎನ್ನುತ್ತಿದ್ದ ತೇಜಸ್ವಿ ಸೂರ್ಯ ಮದುವೆಗೆ ಮುನ್ನಾ ಹೊಸ ಕಾರು ಕೊಡಿಸುವಂತೆ ಅರ್ಜಿ ಕೊಟ್ಟಿದ್ದಾರೆ. ಆದರೆ ದಾಖಲೆ ಈಗಲೂ ಇದೆ. ಬೇಕಾದರೆ ಬಿಡುಗಡೆ ಮಾಡುತ್ತೇ ಎಂದರು.
