ಮುನಿರತ್ನ ಕಾಂಗ್ರೆಸ್‍ನಿಂದ ಎಲ್ಲಾ ಪಡೆದು ಈಗ ಬಿಜೆಪಿ ಸೇರಿದ್ರು : ಡಿ.ಕೆ.ಸುರೇಶ್

ಬೆಂಗಳೂರು, ಅ.30- ಕಾಂಗ್ರೆಸ್‍ನಿಂದ ಕಾಪೆರ್ರೇಟರ್ ಆಗಿ ಎರಡು ಬಾರಿ ಎಂಎಲ್‍ಎ ಆಗಿದ್ದಕ್ಕೆ ಬಿಜೆಪಿಯವರು ಇವರನ್ನು ಗುರುತಿಸಿ ಪಕ್ಷಕ್ಕೆ ಸೇರಿಸಿಕೊಂಡರು. ಇಲ್ಲಾಂದ್ರೆ ಇವರ್ಯಾರು ಕ್ಯಾರೆ ಅಂತಿದ್ರು ಎಂದು ಮುನಿರತ್ನ ವಿರುದ್ಧ ಸಂಸದ ಡಿ.ಕೆ.ಸುರೇಶ್ ಹರಿಹಾಯ್ದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ತಾಯಿ ಕಾಂಗ್ರೆಸ್ , ನನ್ನ ರಕ್ತ ಕಾಂಗ್ರೆಸ್, ನನ್ನ ಉಸಿರು ಕಾಂಗ್ರೆಸ್ ಎಂದು ಹೇಳಿ ಕಾಪೆರ್ರೇಟರ್ ಆಗಿ , ಎಂಎಲ್‍ಎ ಆಗಿ ಎಲ್ಲಾ ಅವಕಾಶಗಳನ್ನು ಪಡೆದು ಬಿಜೆಪಿಯವರು ಅವರನ್ನು ಸೇರಿಸಿಕೊಂಡರು. ಇಲ್ಲಾಂದಿದ್ರೆ ಇವರನ್ನ ಯಾರು ಸೇರಿಸಿಕೊಳ್ಳುತ್ತಿದ್ರು. ಯಾವ ಪಕ್ಷದಿಂದ ಇವರು ಸಾಮಥ್ರ್ಯ ಪಡೆದರು. ಯೋಚನೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಹಾಗೂ ಮುನಿರತ್ನ ನಡುವೆ ಹಣಾಹಣಿಯಲ್ಲ. ನಮ್ಮ ಪಕ್ಷದ ಅಭ್ಯರ್ಥಿ ನೆಪ ಮಾತ್ರ ಅಲ್ಲ. ಅವರು ವಿದ್ಯಾವಂತ ಹೆಣ್ಣು ಮಗಳು. ಪ್ರಬುದ್ಧತೆ ಇದೆ. ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಸಿದ್ಧರಿದ್ದಾರೆ.

ನಾನು ಈ ಕ್ಷೇತ್ರದ ಸಂಸದನಾಗಿರುವುದರಿಂದ ಇದರ ನೇರ ಹೊಣೆಯನ್ನು ಹೊರುತ್ತಿದ್ದೇನೆ. ನನ್ನ ರಕ್ತ ಕಾಂಗ್ರೆಸ್, ನನ್ನ ಉಸಿರು ತಾಯಿ ಕಾಂಗ್ರೆಸ್ ಎಂದು ಹೇಳಿ ಏಕಾಏಕಿ ಪಕ್ಷವನ್ನು ತ್ಯಜಿಸಿ ಓಡಾಡುವವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಯಡಿಯೂರಪ್ಪನವರ ಸರ್ಕಾರ ಸುಭದ್ರವಾಗಿದೆ. ಆದರೂ ಈ ಚುನಾವಣೆಗಳು ಏಕೆ ಬಂದಿದೆ ಎಂದು ಜನರಿಗೆ ಗೊತ್ತಾಗಲಿ. ಇಲ್ಲಿ ನನ್ನ ಅಭಿವೃದ್ಧಿಗೆ ಮತ ಕೊಡಿ ಎಂದು ಕೇಳುತ್ತಿದ್ದಾರೆ. ಯಾವ ರೀತಿ ಅಭಿವೃದ್ಧಿ ಎಂದು ಜನರಿಗೆ ಗೊತ್ತಾಗಬೇಕಿದೆ ಎಂದು ಹೇಳಿದರು.