ರಾಮನಗರ ಜಿಲ್ಲೆಗೆ ಅವಮಾನವಾದಾಗ ಪ್ರತಿಕ್ರಿಯಿಸುವುದು ಅನಿವಾರ್ಯ: ಡಿ.ಕೆ.ಸುರೇಶ್

Social Share

ಬೆಂಗಳೂರು,ಜ.4- ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರು ಮುಖ್ಯಮಂತ್ರಿಗಳಿದ್ದ ವೇದಿಕೆಯಲ್ಲಿ ಗಂಡುಸ್ತನದ ಸವಾಲು ಹಾಕಿ ರಾಮನಗರ ಜಿಲ್ಲೆಗೆ ಅವಮಾನ ಮಾಡಿದಾಗ ಜನಪ್ರತಿನಿಧಿಯಾಗಿ ಪ್ರತಿಕ್ರಿಯಿಸುವುದು ಅನಿವಾರ್ಯವಾಯಿತು ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ನಿನ್ನೆ ರಾಮನಗರದಲ್ಲಿ ನಡೆದ ಘಟನೆ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯ ಕಾರ್ಯಕರ್ತರು ಮತ್ತು ನಾಯಕರು ಪ್ರತಿಭಟನೆ ಮಾಡುವ ಮೂಲಕ ಅಶ್ವಥ್ ನಾರಾಯಣ ಅವರ ನಡವಳಿಕೆ ಮತ್ತು ಸಂಸ್ಕøತಿಯನ್ನು ರಾಜ್ಯದ ಜನತೆಗೆ ಪರಿಚಯ ಮಾಡಿಕೊಟ್ಟಿದ್ದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ.
ಮಾಜಿ ಉಪಮುಖ್ಯಮಂತ್ರಿಯಾಗಿ, ಉನ್ನತ ಶಿಕ್ಷ ಸಚಿವರಾಗಿ ಅಶ್ವಥ್ ನಾರಾಯಣ ಅವರು, ವೇದಿಕೆಯ ಮೇಲೆ ಗಂಡುಸ್ತನದ ಸವಾಲು ಹಾಕಿ ರಾಮನಗರ ಜಿಲ್ಲೆಯ ಜನರಿಗೆ, ಯುವಕರ ಸ್ವಾಭಿಮಾನ ಕೆಣಕಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್, ನಾಡಪ್ರಭು ಕೆಂಪೇಗೌಡರಿಗೆ ಅವಮಾನ ಮಾಡಿದ್ದಾರೆ.
ಅವರ ಅವಹೇಳನಕಾರಿ ಭಾಷಣವನ್ನು ನಿಲ್ಲಿಸುವಂತೆ ಖುದ್ದು ಮುಖ್ಯಮಂತ್ರಿಯವರೇ ಸನ್ನೆ ಮೂಲಕ ಸೂಚನೆ ನೀಡಿದರು. ಅದಕ್ಕೂ ಅವರು ಸೊಪ್ಪು ಹಾಕಲಿಲ್ಲ. ವೇದಿಕೆ ಮೇಲಿದ್ದ ಶಾಸಕಿ ಅನಿತಾಕುಮಾರಸ್ವಾಮಿ ಅವರು ಪ್ರತಿರೋಧ ವ್ಯಕ್ತಪಡಿಸಿದರು. ಅದಕ್ಕೆ ಅಶ್ವಥ್ ನಾರಾಯಣ ಮಾಕಿನ ದಾಟಿಯಲ್ಲಿ ಉತ್ತರ ನೀಡಿದರು.
ಮುಖ್ಯಮಂತ್ರಿ ಹೇಳಿದ ಮೇಲೂ ನಾವು ಬಿಜೆಪಿಯವರು ನಾವು ನಡೆದುಕೊಳ್ಳುವುದೇ ಹೀಗೇ ಎಂಬಂತೆ ಮಾತು ಮುಂದುವರೆಸಿದಾಗ ಅದನ್ನು ತಡೆಯಲು ನಾನು ಪ್ರಯತ್ನ ಮಾಡಬೇಕಾಯಿತು ಎಂದು ಸಮರ್ಥಿಸಿಕೊಂಡರು. ರಾಮನಗರದ ಗೌರವ ಕಾಪಾಡುವುದು, ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಪ್ರತಿಕ್ರಿಯಿಸುವುದು ನನ್ನ ಕರ್ತವುಯ.
ನಮ್ಮ ಸಂಸ್ಕøತಿಯ ಬಗ್ಗೆ ಮಾತನಾಡುವ ಬಿಜೆಪಿಯವರು ಅಶ್ವಥ್ ನಾರಾಯಣ ಅವರ ವರ್ತನೆ, ಉದ್ದಟತನ, ಮಾಕಿನ ನಡವಳಿಕೆಯನ್ನು ನೋಡಲಿ. ಮಾಧ್ಯಮದವರು ಈ ಬಗ್ಗೆ ವಿಶ್ಲೇಷಣೆ ಮಾಡಲಿ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ನಾನು ಆದ್ಯತೆ ನೀಡುವುದಿಲ್ಲ. ಅದಕ್ಕೆ ಜನರೇ ಸೂಕ್ತ ಸಮಯದಲ್ಲಿ ಉತ್ತರ ಕೊಡುತ್ತಾರೆ. ರಾಜ್ಯದಲ್ಲಿ ಕೊರೊನಾ ಹೆಚ್ಚಾದರೆ ಕಾಂಗ್ರೆಸಿಗರೆ ಹೊಣೆ ಎಂದು ಆರೋಗ್ಯ ಸಚಿವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ದೇಶದಲ್ಲಿ ಸೋಂಕು ಹೆಚ್ಚಳವಾಗಲು ಪ್ರಧಾನಿಯವರ ಕಾರ್ಯಕ್ರಮಗಳು ಕಾರಣ. ಬಿಜೆಪಿಯವರ ಮೆರವಣಿಗೆ, ಕಾರ್ಯಕ್ರಮಗಳು, ರ್ಯಾಲಿಗಳಿಂದ ಕೊರೊನಾ ಹೆಚ್ಚಾಗುತ್ತಿದೆ. ಆರೋಗ್ಯ ಸಚಿವರು ಮೊದಲು ತಮ್ಮ ಪಕ್ಷದ ಮತ್ತು ಪ್ರಧಾನಿಗಳ ಕಾರ್ಯಕ್ರಮಗಳನ್ನು ನಿಲ್ಲಿಸಲಿ ಹೇಳಲಿ. ನಂತರ ನಮ್ಮ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.

Articles You Might Like

Share This Article