ರಾಜ್ಯ ಸರ್ಕಾರದ ವಿರುದ್ಧ ಡಿ.ಕೆ.ಸುರೇಶ್ ಆಕ್ರೋಶ

Spread the love

ಬೆಂಗಳೂರು,ಜು.1- ಕೊರೊನಾದಿಂದ ಲಕ್ಷಾಂತರ ಜನರು ಸಂಕಷ್ಟಕ್ಕೀಡಾಗಿದ್ದು,ಅವರ ನೆರವಿಗೆ ಬಿಜೆಪಿ ಸರ್ಕಾರ ಧಾವಿಸದೆ ಪ್ರತಿನಿತ್ಯ ಪೆಟ್ರೋಲï,ಡಿಸೇಲï, ಅಡುಗೆ ಅನಿಲ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡುವುದರ ಮೂಲಕ ಜನಸಾಮಾನ್ಯರ ಜೀವನವನ್ನು ಸರ್ವನಾಶ ಮಾಡುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಗ್ಗೆರೆಯಲ್ಲಿ ಕಾಂಗ್ರೆಸ್ ಯುವಮುಖಂಡ ಕೆ.ಆರ್.ಪಾರ್ಥಗೌಡ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ, ಕೊರೊನಾ ವಾರಿಯರ್ಸ್ ಸೇರಿದಂತೆ 2500 ಕುಟುಂಬಗಳಿಗೆ ಕಾಂಗ್ರೆಸ್ ಮುಖಂಡರಾದ ಎಚ್.ಕುಸುಮಾ ಅವರು ನೀಡಿದ ದಿನಸಿ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು. ಕೊರೊನಾ ಹೆಸರಿನಲ್ಲಿ ಬಡವರಿಗೆ, ದಿನಗೂಲಿ ನೌಕರರಿಗೆ, ಕಾರ್ಮಿಕರಿಗೆ ಸರ್ಕಾರ ನೀಡುತ್ತಿರುವ ಅಹಾರ ಕಿಟ್ ಕಳಪೆ ಗುಣಮಟ್ಟದಿಂದ ಕೂಡಿದ್ದು, ಮಾಧ್ಯಮಗಳೆ ಪ್ರತ್ಯಕ್ಷ ವರದಿಯನ್ನು ಬಹಿರಂಗಪಡಿಸುತ್ತಿವೆ.

ಹಾಸಿಗೆ ಖರೀದಿ, ಔಷದಿ ಖರೀದಿ, ಬೆಡ್ ಬ್ಲಾಕಿಂಗ್, ಯಂತ್ರೋಪಕರಣಗಳ ಖರೀದಿಯಲ್ಲಿ ಸಾವಿರಾರು ಕೋಟಿ ಆಕ್ರಮ ಮಾಡುವ ಮೂಲಕ ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆಯಾಗಿಸಿದೆ. ಪ್ರತಿದಿನ ಮಾಧ್ಯಮದವರು, ಜನಸಾಮಾನ್ಯರು ರೊಚ್ಚಿಗೆದ್ದು ಆಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಬಿಜೆಪಿಯ ಯಾರೊಬ್ಬರು ತಲೆಕೆಡಿಸಿಕೊಳ್ಳದೆ ಲೂಟಿ ಮಾಡುವುದರಲ್ಲೇ ಕಾಲಕಳೆಯುತ್ತಿರುವ ದಪ್ಪ ಚರ್ಮದ ಸರ್ಕಾರವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಕೊರೊನಾ ಸಮಯದಲ್ಲಿ ಯಾರು ಸಹಾ ರಕ್ತದಾನ ಮಾಡಲು ಮುಂದೆ ಬರುತ್ತಿಲ್ಲ, ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಜನರ ಜೀವ ಉಳಿಸುವ ಮಾದರಿ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು. ರಾಜರಾಜೇಶ್ವರಿ ನಗರ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ ಮಾತನಾಡಿ, ಯುಪಿಎ ಸರ್ಕಾರವಿದ್ದಾಗ ಒಂದು ರೂಪಾಯಿ ಪೆಟ್ರೋಲ್ ಬೆಲೆ ಏರಿಕೆ ಮಾಡಿದರೆ ಬೀದಿಗಿಳಿದು ಜನಸಾಮಾನ್ಯರಿಗೆ ಅನ್ಯಾಯವಾಗುತ್ತಿದೆ, ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿ ನಾಯಕರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಿಗೆ ಸೇರಿ 70 ರೂ. ತೆರಿಗೆ ಏರಿಕೆ ಮಾಡಿದ್ದರೂ ದೇಶ ಪ್ರೇಮಿಗಳು, ಸಂರಕ್ಷಕರು ಎಂದು ಹೇಳಿಕೊಳ್ಳುವ ಬಿಜೆಪಿ ನಾಯಕರು ಏಕೆ ಪ್ರಶ್ನೆ ಮಾಡಿ ಬೆಲೆ ಇಳಿಕೆ ಮಾಡುತ್ತಿಲ್ಲ ? ಕೊರೊನಾ ಸಂಕಷ್ಟಕ್ಕೆ ಧಾವಿಸುತ್ತಿಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್ ನಾಯಕಿ ಕುಸುಮಾ.ಎಚ್ ಮಾತನಾಡಿ, ಕೊರೊನಾ ಸಂಕಷ್ಟಕ್ಕೆ ಸಿಲುಕಿ ಬಡವರು, ಜನಸಾಮಾನ್ಯರು ವಿಲವಿಲನೇ ಒದ್ದಡುತ್ತಿದ್ದಾರೆ. ಕುಟುಂಬ ನಿರ್ವಹಣೆ ಮಾಡಲಾಗದೆ, ಬಾಡಿಗೆ ಕಟ್ಟಲಾಗದೆ, ಶಾಲಾ ಶುಲ್ಕ ಭರಿಸಲಾಗದೆ ಕಣ್ಣೀರು ಸುರಿಸುತ್ತಿದ್ದಾರೆ. ಅಂತಹವರ ನೆರವಿಗೆ ಬಿಜೆಪಿ ಸರ್ಕಾರ ಧಾವಿಸದೆ ಸುಳ್ಳು ಪ್ಯಾಕೆಜ್ ಘೋಷಣೆ ಮಾಡಿ ಜನರನ್ನು ವಂಚಿಸುತ್ತಿದೆ ಎಂದರು. ಯುವ ಕಾಂಗ್ರೆಸ್ ಮುಖಂಡ ಕೆ.ಆರ್.ಪಾರ್ಥಗೌಡ, ವಾರ್ಡ್ ಅಧ್ಯಕ್ಷ ಎ.ಅಮರ್ನಾಥ್ ಮುಖಂಡರಾದ ಶಿವಮಂಜೇಗೌಡ, ರವಿ, ಮಂಜು, ಸರಸ್ವತಮ್ಮ, ಅರುಣ ಹಾಜರಿದ್ದರು.

Facebook Comments