ರಾಮನಗರದಿಂದ ಡಿ.ಕೆ.ಸುರೇಶ್ ಸ್ಪರ್ಧೆಗೆ ಪ್ರಸ್ತಾವನೆ : ಡಿಕೆಶಿ

Social Share

ಬೆಂಗಳೂರು,ಮಾ.14- ಬಿಜೆಪಿ ಸರ್ಕಾರದಲ್ಲಿ ವಸತಿ ಸಚಿವರಾಗಿರುವ ವಿ.ಸೋಮಣ್ಣ ಕಾಂಗ್ರೆಸ್ ಸೇರುವ ಬಗ್ಗೆ ಎಲ್ಲಿಯೂ ಹೇಳಿಲ್ಲ, ನಮ್ಮನ್ನು ಕೇಳಿಲ್ಲ. ನಾವು ಕೂಡ ಅವರನ್ನು ಪಕ್ಷಕ್ಕೆ ಬರುವಂತೆ ಕರೆದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸೋಮಣ್ಣ ನಮ್ಮ ತಾಲ್ಲೂಕಿನವರು, ನಾನು ಸ್ರ್ಪಧಿಸುವ ವಿಧಾನಸಭಾ ಕ್ಷೇತ್ರದಲ್ಲಿ ಕಾಡಿನ ನಡುವೆ ಅವರ ಸ್ವಂತ ಮನೆಯಿದೆ. ಮೊನ್ನೆ ಕೂಡ ಅವರು ಊರಿಗೆ ಹೋಗಿದ್ದರು. ನಾವು ಅವರು ರಾಜಕಾರಣ ಹೊರತಾಗಿ ಉತ್ತಮ ಬಾಂಧವ್ಯ ಹೊಂದಿದ್ದೇವೆ.

ಧರ್ಮ, ಮಠ ಮಾನ್ಯಗಳ ಸೇವೆಂ ಜೊತೆಗೂಡಿ ಕೆಲಸ ಮಾಡಿದ್ದೇವೆ. ಹಿಂದೆ ವಿಧಾನಸಭೆ ಅಧಿವೇಶನ ಮುಗಿಸಿ ವಾಪಾಸ್ ಬರುವಾಗ ಫ್ಲೈಟ್‍ನಲ್ಲಿ ಒಟ್ಟಿಗೆ ಕುಳಿತಿದ್ದೇವೆ. ಅದನ್ನು ಈಗ ವೈರಲ್ ಮಾಡಲಾಗುತ್ತಿದೆ. ಜೊತೆಯಲ್ಲಿ ಕುಳಿತುಕೊಳ್ಳುವುದು ಅಪರಾಧವೇ ? ಅನಗತ್ಯವಾಗಿ ಈ ವಿಷಯದಲ್ಲಿ ಸೋಮಣ್ಣ ಅವರನ್ನು ಎಳೆದು ತರುತ್ತಿರುವುದು ಸರಿಯಲ್ಲ ಎಂದರು.

1.21 ಕೋಟಿ ಮೌಲ್ಯದ ಚಿನ್ನದಗಟ್ಟಿ ದರೋಡೆ : ರೈಲ್ವೆ ಪೊಲೀಸರ ಮೇಲೆ ಶಂಕೆ

ಸಂಸದರೂ ಆಗಿರುವ ತಮ್ಮ ಸಹೋದರ ಡಿ.ಕೆ.ಸುರೇಶ್ ಅವರನ್ನು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಿಸಬೇಕು ಎಂಬ ಪ್ರಸ್ತಾವನೆ ಇದೆ. ಈ ಬಗ್ಗೆ ತಾವಿನ್ನು ಖುದ್ದು ಡಿ.ಕೆ.ಸುರೇಶ್ ಸೇರಿದಂತೆ ಯಾರೊಂದಿಗೂ ಚರ್ಚೆ ಮಾಡಿಲ್ಲ. ಕಾರ್ಯಕರ್ತರು , ಸ್ಥಳೀಯ ನಾಯಕರು ಒತ್ತಡ ಹೇರುತ್ತಿದ್ದಾರೆ.

ಆಗು ಹೋಗುಗಳ ಬಗ್ಗೆ ನಾನೀನ್ನೂ ಚರ್ಚೆ ಮಾಡಿಲ್ಲ. ಪ್ರಸ್ತಾವ ಇರುವುದನ್ನು ತಳ್ಳಿ ಹಾಕುವುದಿಲ್ಲ. ಇದು ರಾಜ್ಯ ಮಟ್ಟದಲ್ಲೇ ಕೇಳಿ ಬಂದಿಲ್ಲ. ಇಲ್ಲಿ ಏನೇ ಆದರೂ ಪಕ್ಷದ ಅಧ್ಯಕ್ಷನಾಗಿ ನಾನೇ ಹೇಳಬೇಕು. ಮೇಲ್ಮಟ್ಟದಿಂದ ಪ್ರಸ್ತಾವ ಇದೆ. ಆದರೆ ಸುರೇಶ್ ವಿಧಾನಸಭೆಗೆ ಸ್ರ್ಪಸುವುದರಿಂದ ಲೋಕಸಭೆಗೆ ಮತ್ತೊಂದು ಉಪಚುನಾವಣೆ ನಡೆಯಬೇಕಾಗುತ್ತದೆ. ಇದು ನನಗೆ ಇಷ್ಟವಿಲ್ಲ. ಎಲ್ಲವನ್ನೂ ಪರಿಶೀಲಿಸುತ್ತಿದ್ದೇವೆ. ದೊಡ್ಡ ನಿರ್ಣಯವಾಗಿರುವುದರಿಂದ ಎಲ್ಲರ ಜೊತೆ ಚರ್ಚಿಸಿದ ಬಳಿಕ ತೀರ್ಮಾನ ತೆಗೆದುಕೊಳ್ಳುವುದಾಗಿ ಸ್ಪಷ್ಟ ಪಡಿಸಿದರು.

ಬೆಂಗಳೂರು-ಮೈಸೂರು ನಡುವಿನ ದಶಪಥ ರಾಷ್ಟ್ರೀಯ ಹೆದ್ಧಾರಿ ಕಾಮಗಾರಿ ಮುಗಿಯುವ ಮೊದಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜಕೀಯ ಹಾಗೂ ಚುನಾವಣೆ ಕಾರಣಕ್ಕೆ ಉದ್ಘಾಟನೆ ಮಾಡಿದ್ದು ಸರಿಯಲ್ಲ. ಪ್ರಧಾನಿ ಹುದ್ದೆಗೆ ಒಂದು ಘನತೆ ಇದೆ.

ಕಾರ್ಯಕ್ರಮಗಳು ಅದಕ್ಕೆ ತಕ್ಕ ಹಾಗೆ ನಡೆಯಬೇಕು, ಚುನಾವಣೆ ಎಂಬ ಕಾರಣಕ್ಕೆ ಸರ್ವಿಸ್ ರಸ್ತೆಗಳ ಕಾಮಗಾರಿ ಮುಗಿಯುವ ಮುನ್ನವೇ ಉದ್ಘಾಟಿಸಲಾಗಿದೆ. ಟೋಲ್ ಸಂಗ್ರಹ ನಡೆಯುತ್ತಿದೆ. ಇದು ಸಂಪೂರ್ಣ ತಪ್ಪು,. ರಸ್ತೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆ ಭಾಗದ ಸಂಸದರಾದ ಡಿ.ಕೆ.ಸುರೇಶ್ ಅವರನ್ನು ಆಹ್ವಾನಿಸಿಲ್ಲ. ಕಾಟಾಚಾರಕ್ಕೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಲಾಗಿದೆ. ಶಿಷ್ಟಾಚಾರ ಪಾಲನೆ ಮಾಡಿಲ್ಲ ಎಂದು ದೂರಿದರು.

ಚುನಾವಣೆ ಸಮೀಪಿಸುತ್ತಿರುವಂತೆ ರಾಜ್ಯ ಸರ್ಕಾರಾತುರಾತುರವಾಗಿ 25 ರಿಂದ 30 ಸಾವಿರ ಕೋಟಿ ರೂಪಾಯಿಗಳ ಮೊತ್ತ ಕಾಮಗಾರಿಗಳನ್ನು ಟೆಂಡರ್ ನೀಡಲು ಮುಂದಾಗಿದೆ. ಈ ವಿಷಯದಲ್ಲಿ ಅಕಾರಿಗಳು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ನಮ್ಮ ಸರ್ಕಾರ ಅಕಾರಕ್ಕೆ ಬಂದ ಬಳಿಕ ಹೊಸದಾಗಿ ತಾರಾತುರಿಯಲ್ಲಿ ನಡೆದ ಟೆಂಡರ್‍ಗಳನ್ನು ಪರಿಶೀಲನೆಗೆ ಒಳಪಡಿಸುತ್ತೇವೆ. ತಪ್ಪು ಮಾಡಿದವರು ತೊಂದರೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ತರಾತರಿ ಟೆಂಡರ್ ಕುರಿತು ಮುಖ್ಯಕಾರ್ಯದರ್ಶಿಯವರಿಗೆ ಪತ್ರ ಬರೆಯುತ್ತೇನೆ. ಲೋಕಾಯುಕ್ತರ ಗಮನಕ್ಕೂ ತರಲಾಗುವುದು ಎಂದ ಅವರು, ಹಿಂದೆ ಕೆಲಸ ಮಾಡಿದ ಗುತ್ತಿಗೆದಾರರಿಗೆ 25 ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಹೊಸದಾಗಿ 25 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಗುತ್ತಿಗೆ ನೀಡಲು ಟೆಂಡರ್ ನಡೆಸಲಾಗುತ್ತಿದೆ. ಇದು ಸರಿಯಲ್ಲ ಎಂದರು. ಸರ್ಕಾರ ಆದಾಯ ಸಂಗ್ರಹಕ್ಕೆ ಗಮನ ಹರಿಸುತ್ತಿಲ್ಲ. ಅಬಕಾರಿ, ಗಣಿ ಕ್ಷೇತ್ರದಲ್ಲಿ ಆದಾಯ ಕುಂಠಿತಗೊಂಡಿದೆ. ಸಾವಿರಾರು ಎಕರೆಯಲ್ಲಿ ಗಣಿಗಾರಿಕೆ ನೀಡಲು ಭೂಮಿಯನ್ನು ಬೋಗ್ಯಕ್ಕೆ ನೀಡಲಾಗಿದೆ.

ಆದರೆ ಈವರೆಗೂ ಗುತ್ತಿಗೆದಾರರು ಗಣಿಗಾರಿಕೆ ನಡೆಸಿಲ್ಲ. ಸರ್ಕಾರವೂ ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕೋರ್ಟ್ ನಿಂದ ನೋಟಿಸ್ ಕಳುಹಿಸಿ ಸುಮ್ಮನಾಗಿದೆ. ಗಣಿಗಾರಿಕೆ ನಡೆದರೆ ಅಲ್ಲವೇ ಸರ್ಕಾರಕ್ಕೆ ಆದಾಯ ಬರಲು ಸಾಧ್ಯ. ಬಳ್ಳಾರಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ನಿರುದ್ಯೋಗ ಇದೆ.

ಲಾರಿ ಮಾಲೀಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಯಾವುದನ್ನೂ ಪರಿಗಣಿಸುತ್ತಿಲ್ಲ ಎಂದು ಆಕ್ಷೇಪಿಸಿದರು. ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಮೂಲೆಗುಂಪು ಮಾಡಲಾಗಿದೆ. ಸಿ.ಟಿ.ರವಿ ಬಿಜೆಪಿ ಹೈಕಮಾಂಡ್ ಆಗಿದ್ದಾರೆ. ಯಡಿಯೂರಪ್ಪ ಅವರಿಗಿಂತ ದೊಡ್ಡವರಂತೆ ಫೋಸು ಕೊಡುತ್ತಿದ್ದಾರೆ.

ಬಿಜೆಪಿ ಬಿಡಲ್ಲ : ಸಚಿವ ಸೋಮಣ್ಣ ಸ್ಪಷ್ಟನೆ

ಜನ ಯಡಿಯೂರ ಪ್ಪರನ್ನು ನೋಡಿ ಬಿಜೆಪಿಗೆ ಮತ ಹಾಕಿದರು, ಈಗ ಅವರನ್ನು ಮೂಲೆಗುಂಪು ಮಾಡಿದ ಬಳಿಕ ರಾಜಕೀಯ ಚಿತ್ರಣ ಬದಲಾಗಿದೆ ಎಂದು ಹೇಳಿದರು. ಸಿಡಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿ ಸಚಿವರನ್ನು ಕಾಂಗ್ರೆಸ್ ಸೇರುವಂತೆ ಒತ್ತಾಯಿಸಲಾಗುತ್ತಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಬಿಜೆಪಿಯೇ ಇದಕ್ಕೆ ಸ್ಪಷ್ಟನೆ ನೀಡಬೇಕು. ಸಿಡಿ ಯಲ್ಲಿ ಸಂಕಷ್ಟಕ್ಕೆ ಸಿಲುಕುವಂತಹ ಕೃತ್ಯ ಮಾಡಿದ ನಾಯಕರನ್ನು ತನ್ನಲ್ಲಿ ಇಟ್ಟುಕೊಂಡಿರುವ ಬಗ್ಗೆ ಆ ಪಕ್ಷದ ನಾಯಕರು ಉತ್ತರಿಸಬೇಕಿದೆ ಎಂದು ಹೇಳಿದರು.

ಕಾಂಗ್ರೆಸ್‍ನ ಕೆಲ ಟಿಕೆಟ್ ಆಕಾಂಕ್ಷಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಮುದಾಯದ ನಾಯಕರು, ಅಭಿಮಾನಿಗಳು ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪೇನು ಇಲ್ಲ ಎಂದರು.

ಸಿದ್ದು ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್‍ಗಳಿಗೆ ಬೀಗ..!

ಬಿಜೆಪಿ ಎಲ್ಲಾ ಮುಸ್ಲಿಂರ ವಿರುದ್ಧವಾಗಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಬಿಜೆಪಿ ನಾಯಕರು ಮಲೆನಾಡು ಭಾಗದಲ್ಲಿ ಸೃಷ್ಟಿಸಿದ ಕೋಮುಗಲಭೆಗಳಿಂದ ಬಂಡವಾಳ ಹೂಡಿಕೆಗೆ ಭಾರಿ ಹಿನ್ನೆಡೆಯಾಗಿದೆ. ಈಗ ಮೋದಿ, ಈಶ್ವರಪ್ಪ ಏನೇ ಭಾಷಣ ಮಾಡಿದರೂ ಪರಿಸ್ಥಿತಿ ಸುಧಾರಿಸುವುದಿಲ್ಲ. ಕೋಮು ಸೌರ್ಹಾತೆಗೆ ಬಿಜೆಪಿ ಮಾಡಿರುವ ಗಾಯ ಮಾಸಲು ಇನ್ನೂ 20 ವರ್ಷ ಬೇಕು ಎಂದು ಹೇಳಿದರು.

DK Suresh, Ramanagara, contest, dk shivakumar,

Articles You Might Like

Share This Article