ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಡಿಕ್ಕಿ, ಸಂಸದರ ಪುತ್ರ ದುರ್ಮರಣ

Social Share

ಚನ್ನೈ,ಮಾ.10- ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಡಿಎಂಕೆ ರಾಜ್ಯಸಭಾ ಸದಸ್ಯ ಎನ್.ಆರ್.ವಿಳಂಗೋವನ್ ಅವರ ಪುತ್ರ ರಾಕೇಶ್ ಮೃತಪಟ್ಟು ಅವರ ಸ್ನೇಹಿತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ರಾಕೇಶ್ ಮತ್ತು ಈತನ ಸ್ನೇಹಿತ ಪುದುಚೇರಿಗೆ ತೆರಳುವಾಗ ಕೊಟ್ಟಕೊಪ್ಪಂ ಬಳಿ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಹೊಡೆದು ಪಲ್ಟಿಯಾದ ಪರಿಣಾಮ ರಾಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಳಿಕ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಒಳಗಡೆ ಸಿಲುಕಿದ್ದ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಕೇಶ್ ಸ್ನೇಹಿತನನ್ನು ಪಾಂಡಿಚೇರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Articles You Might Like

Share This Article