ನವದೆಹಲಿ,ನ.30- ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ ) 2019 ನಿರಂಕುಶತ್ವದಿಂದ ಕೂಡಿದ್ದು, ಶ್ರೀಲಂಕಾದಿಂದ ವಲಸೆ ಬಂದ ತಮಿಳಿಗರನ್ನು ನಿರ್ಲಕ್ಷಿಸಿದೆ ಎಂದು ಆಕ್ಷೇಪಿಸಿ ಡಿಎಂಕೆ ಸರ್ಕಾರ ಸುಪ್ರೀಂಕೋರ್ಟ್‍ಗೆ ದೂರು ಸಲ್ಲಿಸಿದೆ.
2019ರ ಡಿಸೆಂಬರ್ 11ರಂದು ಸಂಸತ್‍ನಿಂದ ಅಂಗೀಕಾರಗೊಂಡು 2020, ಜನವರಿ 10ರಿಂದ ಜಾರಿಗೆ ತರಲಾದ ಸಿಎಎ ವಿರೋಧಿಸಿ ಸುಮಾರು 220ಕ್ಕೂ ಹೆಚ್ಚು ಅರ್ಜಿಗಳ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಇವೆ.
ಜೊಂಬಿ ವೈರಾಣು: ವಿಶ್ವಕ್ಕೆ ಗಂಡಾಂತರದ ಸೂಚನೆ
ಈಗ ಹೊಸದಾಗಿ ಡಿಎಂಕೆ ಕೂಡ ಮೇಲ್ಮನವಿ ಸಲ್ಲಿಸಿದೆ. ಸಿಎಎ ಮೂಲ ಉದ್ದೇಶ 2014ರ ಡಿಸೆಂಬರ್ 31ಕ್ಕಿಂತ ಮೊದಲು ಬಾಂಗ್ಲಾದೇಶ, ಆಫ್ಘಾನಿಸ್ತಾನ, ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಹಿಂದೂಗಳು, ಸಿಖ್ಖರ್, ಬೌಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನರಿಗೆ ಭಾರತೀಯ ಪೌರತ್ವ ನೀಡುವುದಾಗಿದೆ.
ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಡಿಎಂಕೆ ಸಿಎಎನಲ್ಲಿ ವರ್ಗೀಕೃತ ಬೇಧಭಾವವಿದೆ. ಶ್ರೀಲಂಕಾದಲ್ಲಿನ ಹಿಂಸಾಚಾರದಿಂದ ಸಂತ್ರಸ್ತರಾಗಿ ಭಾರತಕ್ಕೆ ಮರಳಿದ ತಮಿಳರಿಗೆ ಪೌರತ್ವ ನೀಡುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದು ಆಕ್ಷೇಪಿಸಲಾಗಿದೆ.
ಒತ್ತುವರಿ ತೆರವು ಕಾರ್ಯ ಸ್ಥಗಿತ ಮಾತು ತಪ್ಪಿದ ಬಿಬಿಎಂಪಿ
ಡಿಎಂಕೆ ಪಕ್ಷದ ಸಂಘಟನಾ ಕಾರ್ಯದರ್ಶಿ ಆರ್.ಎಸ್.ಭಾರತಿ ಅವರು ಅರ್ಜಿ ಸಲ್ಲಿಸಿದ್ದು, ಭಾರತೀಯ ಮೂಲದ ವಲಸಿಗ ತಮಿಳರಿಗೆ ಪೌರತ್ವ ಸಿಗದೆ ಇರುವುದರಿಂದ ಇಲ್ಲಿ ಸರ್ಕಾರಿ ಉದ್ಯೋಗಗಳು ಸಿಗುತ್ತಿಲ್ಲ. ಸಂಘಟನಾತ್ಮಕ ಖಾಸಗಿ ಸಂಸ್ಥೆಗಳಲ್ಲೂ ಕೆಲಸವಿಲ್ಲ, ಆಸ್ತಿ ಹಕ್ಕು ಹೊಂದುವಂತಿಲ್ಲ. ನಾಗರಿಕ ಸೌಲಭ್ಯಗಳನ್ನು ಸಂಪೂರ್ಣವಾಗಿ ಒದಗಿಸಲಾಗಿದೆ.
ನಿರಾಶ್ರಿತರ ಶಿಬಿರಗಳಲ್ಲಿ ಅವರನ್ನು ಕೂಡಿಡಲಾಗಿದೆ. ಕನಿಷ್ಟ ಸೌಲಭ್ಯಗಳಿಲ್ಲದೆ ಅವರನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ ಎಂದು ಆಕ್ಷೇಪಿಸಲಾಗಿದೆ.
DMK, opposes, CAA, Supreme Court,