ಅಹಮದಾಬಾದ್,ಡಿ.5- ದೆಹಲಿ, ಪಂಜಾಬ್ ನಂತರ ಗುಜರಾತ್‍ನಲ್ಲಿ ಅಡಳಿತದ ಚುಕ್ಕಾಣಿ ಹಿಡಿಯುವ ಪ್ರಯತ್ನದಲ್ಲಿರುವ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಬಾರಿಯ ಚುನಾವಣೆಯಲ್ಲಿ ಗುಜರಾತ್ ಜನತೆ ಈ ಬಾರಿ ವಿಬಿನ್ನ ಪ್ರಯತ್ನಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಚುನಾವಣೆ ಗುಜರಾತ್‍ನ ಹೊಸ ಭರವಸೆ ಮತ್ತು ಆಕಾಂಕ್ಷೆಗಳಿಗಾಗಿ. ಇದು ದಶಕಗಳ ನಂತರ ಬಂದಿರುವ ಉತ್ತಮ ಅವಕಾಶ. ಭವಿಷ್ಯವನ್ನು ನೋಡುವಾಗ, ಗುಜರಾತ್‍ನ ಪ್ರಗತಿಗಾಗಿ ಮತ ಚಲಾಯಿಸಿ. ಈ ಬಾರಿ ವಿಭಿನ್ನವಾದ ಮತ್ತು ಅದ್ಭುತವಾದದ್ದನ್ನು ಮಾಡಿ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ G-20 ಶೃಂಗದ ಪ್ರತಿನಿಧಿಗಳ ಸಭೆ
ಎರಡನೆ ಹಂತದ ಚುನಾವಣೆಯಲ್ಲಿ ಎಎಪಿ ಈ ಬಾರಿ ಎಲ್ಲಾ 93 ಸ್ಥಾನಗಳಲ್ಲಿ ಸ್ರ್ಪಧಿಸುತ್ತಿದೆ. ಕಳೆದ ಬಾರಿ ಉತ್ತಮ ಪ್ರದರ್ಶನ ನೀಡಿದ ಕಾಂಗ್ರೆಸ್ , ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಳ್ಳಲು ವಿಫಲವಾಗಿತ್ತು. ಈ ಬಾರಿ ಕಾಂಗ್ರೆಸ್ 90 ಸ್ಥಾನಗಳಲ್ಲಿ ಸ್ರ್ಪಧಿಸುತ್ತಿದ್ದರೆ, ಅದರ ಮಿತ್ರ ಪಕ್ಷವಾದ ನ್ಯಾಷನಲಿಸ್ಟ ಕಾಂಗ್ರೆಸ್ ಪಕ್ಷ ಎರಡು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಕುಖ್ಯಾತ ವಾಹನ ಕಳ್ಳರ ಬಂಧನ, 24 ದ್ವಿಚಕ್ರ ವಾಹನಗಳ ವಶ
ಎರಡನೇ ಹಂತದ ಚುನಾವಣೆಯಲ್ಲಿ ಅಹಮದಾಬಾದ್‍ನ ಘಟ್ಲೋಡಿಯಾದಿಂದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸ್ರ್ಪಧಿಸುತ್ತಿದ್ದಾರೆ, ಅದೆ ರೀತಿ ವಿರಾಮಗಮ ಕ್ಷೇತ್ರದಿಂದ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಹಾಗೂ ಗಾಂಧಿನಗರ ದಕ್ಷಿಣದಿಂದ ಅಲ್ಪೇಶ್ ಠಾಕೂರ್ ಬಿಜೆಪಿ ಅಭ್ಯರ್ಥಿಯಾಗಿ ಸ್ರ್ಪಧಿಸುತ್ತಿದ್ದಾರೆ.
Something, Different, ArvindKejriwal, Appeal, Gujarat, Voters,