ಕೊಟ್ಟಾಯಂ (ಕೇರಳ), ಆ. 23-ಶಸ್ತ್ರಚಿಕಿತ್ಸೆಗಾಗಿ ರೋಗಿಯೊಬ್ಬರಿಂದ ಲಂಚ ಸ್ವೀಕರಿಸಿದ ಸರ್ಕಾರಿ ವೈದ್ಯ ಜಗೃತ ದಳ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಜಗೃತ ದಳದ ತಂಡ ಸಮೀಪದ ಕಂಜಿರಪಲ್ಲಿ ತಾಲೂಕು ಆಸ್ಪತ್ರೆಗೆ ದಿಢೀರ್ ಬೇಟಿ ನೀಡಿ ವೈದ್ಯ ಸುಜಿತ್ ಕುಮಾರ್ ರೋಗಿಯೊಬ್ಬರಿಂದ 3 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ಬಂಧಿಸಿದೆ.
ಹರ್ನಿಯಾ ಆಪರೇಷನ್‍ಗಾಗಿ ವೈದ್ಯರು ರೋಗಿಯಿಂದ 5,000 ರೂಪಾಯಿ ಲಂಚ ಕೇಳಿದ್ದರು ಕಳೆದ ಆ. 18 ರಂದು ಆಪರೇಷನ್ ನಡೆಸಲಾಯಿತು. ಮೊದಲು ಅವರು ರೋಗಿಯನ್ನು ಮನೆಗೆ ಕರೆದು 2000 ರೂ ಪಡೆದಿದ್ದರು ಆಸ್ಪತ್ರೆಯಿಂದ ಬಡುಗಡೆ ಯಾಗುವಾಗ ಉಳಿದ 3,000 ರೂ.ನೀಡುವಂತೆ ಒತ್ತಾಯಿಸಿದ್ದರು, ರೋಗಿಯ ಮಗ ಇದರ ಬಗ್ಗೆ ದೂರು ನೀಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.