ಎಂತ ಕಾಲ ಬಂತಪ್ಪಾ… ನಾಯಿಗಳಿಗೂ ವಿವಾಹ ಯೋಗ

Social Share

ಲಕ್ನೋ,ಜ.16- ಹಿಂದೆ ಮಳೆ ಬರಲಿಲ್ಲ ಎಂದರೆ ಕಪ್ಪೆಗಳಿಗೆ ಮದುವೆ ಮಾಡುತ್ತಿದ್ದರು. ಇದೀಗ ನಾಯಿಗಳಿಗೂ ಮದುವೆ ಮಾಡುವ ಕಾಲ ಬಂದಿದೆ. ಉತ್ತರಪ್ರದೇಶದಲ್ಲೋಬ್ಬ ಮಹಾಶಯ ತಮ್ಮ ಮುದ್ದಿನ ಸಾಕು ನಾಯಿಗೆ ಅದ್ಧೂರಿಯಾಗಿ ಮದುವೆ ಮಾಡಿ ದಿಬ್ಬಣದಲ್ಲಿ ಕುಣಿದು ಕುಪ್ಪಳಿಸುವ ಮೂಲಕ ನಾಡಿನ ಗಮನ ಸೆಳೆದಿದ್ದಾರೆ.

ಆಲಿಘರ್‍ನಲ್ಲಿ ನೆಲೆಸಿರುವ ದಿನೇಶ್ ಚೌಧರಿ ಎಂಬಾತ ಸಾಕಿದ್ದ ಮುದ್ದಿನ ನಾಯಿಗೆ ರಾಯ್ಪುರದ ನಿವಾಸಿ ರಾಮ್‍ಪ್ರಕಾಶ್ ಸಿಂಗ್ ಅವರ ಹೆಣ್ಣು ನಾಯಿಯೊಂದಿಗೆ ವಿವಾಹ ಮಾಡಿಸಿದ್ದಾರೆ.ಇದೀಗ ಟಾಮಿ ಮತ್ತು ಜೆಲ್ಲಿ ಎಂಬ ನಾಯಿಗಳು ಸತಿ-ಪತಿಗಳಾಗಿ ಸಪ್ತಪದಿ ತುಳಿದಿರುವ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿದೆ.

ಸುಪ್ರೀಂ ಕೋರ್ಟ್ ಕೊಲಿಜಿಯಂನಲ್ಲೂ ಸರ್ಕಾರದ ಪ್ರತಿನಿಧಿಗಳಿರಬೇಕಂತೆ

ಮಕರ ಸಂಕ್ರಾಂತಿಯ ದಿನದಂದೆ ನಾಯಿಗಳಿಗೆ ವಿವಾಹ ಮಾಡಿಸಲಾಗಿದೆ. ವಿವಾಹದ ನಂತರ ಅದ್ಧೂರಿ ಮೆರವಣಿಗೆ ಏರ್ಪಡಿಸಲಾಗಿತ್ತು. ವಧು ಜೆಲ್ಲಿ ಮನೆಯವರು ವರ ಟಾಮಿಗೆ ತಿಲಕ ಹಚ್ಚಿದ ನಂತರ ಆರಂಭವಾದ ‘ಬಾರಾತï’ ಮೆರವಣಿಗೆ ಸಂದರ್ಭದಲ್ಲಿ ಹೆಣ್ಣು-ಗಂಡಿನ ಕಡೆಯವರು ಕುಣಿದು ಕುಪ್ಪಳಿಸುವ ಮೂಲಕ ವಧು-ವರರಿಗೆ ಶುಭಾಷಯ ಕೋರಿದರು.

ಮಕರ ಸಂಕ್ರಾಂತಿ ಸಂದರ್ಭದಲ್ಲಿ ನಡೆದ ನಾಯಿಗಳ ವಿವಾಹದ ನಂತರ ನೆರೆಹೊರೆಯ ನಾಯಿಗಳಿಗೆ ದೇಸಿ ತುಪ್ಪದ ಆಹಾರವನ್ನು ಸಹ ವಿತರಿಸಲಾಗಿದೆ.

Dog, Wedding, Performed, Music, Dance, Uttar Pradesh, Aligarh,

Articles You Might Like

Share This Article