ಹಾಸನ,ಫೆ.6- ನವಜಾತ ಶಿಶುವನ್ನು ಶ್ವಾನಗಳು ತಿಂದುಹಾಕಿರುವ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ. ನಗರದ ಹೊಸ ಬಸ್ ನಿಲ್ದಾಣದ ಬಳಿ ಯಾರೋ ನವಜಾತ ಶಿಶುವನ್ನು ಎಸೆದು ಹೋಗಿದ್ದು, ನಾಯಿಗಳು ಶಿಶುವನ್ನು ಎಳೆದುಕೊಂಡು ಹೋಗುತ್ತಿದ್ದು, ಇದನ್ನು ನೋಡಿದ ಸ್ಥಳೀಯರು ನಾಯಿಗಳನ್ನು ಓಡಿಸಿದ್ದಾರೆ. ಅಷ್ಟರಲ್ಲಾಗಲೇ ಶಿಶುವನ್ನು ನಾಯಿಗಳು ಅರ್ಧಂಬರ್ಧ ತಿಂದು ಹಾಕಿವೆ.
ಕರುಣೆ ಇಲ್ಲದ ಕ್ರೂರಿ ತಾಯಿ ಅಕ್ರಮ ಸಂಬಂಧದಿಂದ ಮಗುವಿಗೆ ಜನ್ಮ ನೀಡಿ ಬಳಿಕ ಮಗುವನ್ನು ರಸ್ತೆ ಬದಿ ಎಸೆದು ಹೋಗಿದ್ದು, ಕಣ್ಣು ಬಿಡದ ಕಂದಮ್ಮ ನಾಯಿಗಳಿಗೆ ಆಹಾರವಾಗಿದೆ. ಈ ದೃಶ್ಯಕಂಡ ಸ್ಥಳೀಯರು ಮರುಕಪಟ್ಟಿದ್ದಾರೆ. ಮೃತಪಟ್ಟ ನವಜಾತ ಶಿಶುವಿನ ಶವವನ್ನು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
