ಒಡಿಶಾ ಕರಾವಳಿಯಲ್ಲಿ ಡಾಲ್‍ಫಿನ್ ಗಣತಿ ಆರಂಭ

Social Share

ಭುವನೇಶ್ವರ, ಡಿ .22 – ಒಡಿಶಾದ ಭಿತರ್ಕಾನಿಕಾ ರಾಷ್ಟ್ರೀಯ ಉದ್ಯಾನವನ ಮತ್ತು ಗಹಿರ್‍ಮಠ ಸಮುದ್ರದಲ್ಲಿ ಡಾಲ್‍ಫಿನ್‍ಗಳ ಗಣತಿ ಆರಂಭವಾಗಿದೆ ಮೂರು ದಿನಗಳ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ವನ್ಯಜೀವಿ ತಜ್ಞರು ಎಣಿಕೆ ನಡೆಸುತ್ತಿದ್ದಾರೆ.

ಪ್ರತಿ ತಂಡವು ಬೈನಾಕ್ಯುಲರ್‍ಗಳು, ಜಿಪಿಎಸ್ ಸೆಟ್‍ಗಳು, ರೇಂಜ್‍ಫೈಂಡರ್‍ಗಳು ಮತ್ತು ಡೇಟಾ ರೆಕಾರ್ಡಿಂಗ್ ಶೀಟ್‍ಗಳನ್ನು ಹೊಂದಿದೆ ಎಂದು ಚಿಲಿಕಾ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವಾದ್ಯಂತ ಅನುಸರಿಸುತ್ತಿರುವ ಸಮೀಕ್ಷೆ ವಿಧಾನವನ್ನು ಬಳಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಒಡಿಶಾ ಕರಾವಳಿಯು ವಿಶೇಷವಾಗಿ ಡಾಲ್‍ಫಿನ್‍ಗಳಿಗೆ ಸೂಕ್ತವಾದ ಆವಾಸಸ್ಥಾನವಾಗಿ ಹೊರಹೊಮ್ಮಿದೆ, ಅವುಗಳ ಜನಸಂಖ್ಯೆಯಲ್ಲಿ 33 ಪ್ರತಿಶತದಷ್ಟು ಏರಿಕೆಯಾಗಿದೆ ಎಂದು ಕಳೆದ ಜನಗಣತಿಯನ್ನು ಉಲ್ಲೇಖಿಸಿ ಹೇಳಿದ್ದಾರೆ.

ಮತ್ತೆ ಕರೋನಾ ಹಾವಳಿ : ಚೀನಾ ಪರಿಸ್ಥಿತಿ ಭಾರತಕ್ಕೆ ಬರಲ್ಲ ಎಂದ ತಜ್ಞರು

ಚಿಲಿಕಾ ಲಗೂನ್‍ನಲ್ಲಿನ ಐದು ಕರಾವಳಿ ವಿಭಾಗಗಳಲ್ಲಿ ಕಳೆದ ಡಿಸೆಂಬರ್-ಜನವರಿ ಅವಧಿಯಲ್ಲಿ ನಡೆಸಿದ ಗಣತಿಯಲ್ಲಿ ಒಟ್ಟು 726 ಡಾಲ್‍ಫಿನ್‍ನ್‍ಗಳು ಕಂಡುಬಂದಿವೆ ಎಂದು ಅವರು ಹೇಳಿದರು.

Dolphin, census, begins, Odisha coast,

Articles You Might Like

Share This Article