ನವದೆಹಲಿ,ಮಾ.1- ಆರ್ಥಿಕ ವರ್ಷದ ಕೊನೆ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರ ಅಡುಗೆ ಅನಿಲ ಬೆಲೆ ಹೆಚ್ಚಳ ಮಾಡಿ ಸಾಮಾನ್ಯ ಗ್ರಾಹಕರಿಗೆ ಶಾಕ್ ನೀಡಿದೆ. ಪರಿಷ್ಕøತ ದರ ಇಂದಿನಿಂದಲೇ ಜಾರಿಯಾಗಿದ್ದು, ಅಡುಗೆ ಅನಿಲ ಮತ್ತು ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳವಾಗಿದೆ.
ಗೃಹ ಬಳಕೆಯ 14.2 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್‍ಗಳ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಯೂನಿಟ್ಗೆ 1,103 ರೂ.ಗೆ ಏರಿಕೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಇದೇ ಸಿಲಿಂಡರ್‍ಗಳ ದರ ಈಗ 1,105.50 ರೂ.ಗೆ ತಲುಪಲಿದೆ. ಈ ಮೂಲಕ ಎಲ್‍ಪಿಜಿ ಸಿಲಿಂಡರ್ ದರ 1,100 ರೂ.ಗಳ ಗಡಿ ದಾಟಿದೆ.
14.2 ಕೆಜಿ ಗೃಹಬಳಕೆಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಎಲ್‍ಪಿಜಿ) ಸಿಲಿಂಡರ್ ಬೆಲೆ 50 ಏರಿಕೆಯಾಗಿದೆ. ಇತ್ತೀಚಿನ ಪರಿಷ್ಕರಣೆಯೊಂದಿಗೆ, ದೆಹಲಿಯಲ್ಲಿ ಗೃಹಬಳಕೆಯ ಸಿಲಿಂಡರ್ ಪ್ರತಿ ಸಿಲಿಂಡರ್‍ಗೆ 1103 ವೆಚ್ಚವಾಗಲಿದೆ.
ಅಲ್ಲದೆ, 19 ಕೆಜಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‍ನ ಬೆಲೆ ಸಹ 350.50 ಏರಿಕೆಯಾಗಿದೆ. ಈ ಹೆಚ್ಚಳದೊಂದಿಗೆ 19 ಕೆಜಿ ವಾಣಿಜ್ಯ ಸಿಲಿಂಡರ್ನ ಬೆಲೆ ದೆಹಲಿಯಲ್ಲಿ 2119.50 ಆಗಲಿದೆ. ಹೊಸ ದರಗಳು ಇಂದಿನಿಂದ ಜÁರಿಗೆ ಬರಲಿವೆ. ಕಳೆದ 6 ತಿಂಗಳಿಂದ ಹೃಹ ಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಆದರೀಗ, ವಾಣಿಜ್ಯ ಬಳಕೆಯ ಸಿಲಿಂಡರ್ ಮಾತ್ರವಲ್ಲ, ಗೃಹ ಬಳಕೆಯ ಸಿಲಿಂಡರ್ ದರವೂ ಹೆಚ್ಚಾಗಿದೆ.
ಸರ್ಕಾರಿ ನೌಕರರ ಮುಷ್ಕರಕ್ಕೆ ಮಣಿದ ಸರ್ಕಾರ, ಶೇ.17 ರಷ್ಟು ವೇತನ ಹೆಚ್ಚಳ
ಇದಕ್ಕೂ ಮೊದಲು ಜನವರಿ 1ರಂದು ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಯೂನಿಟ್ಗೆ 25 ರೂ. ಹೆಚ್ಚಿಸಲಾಗಿತ್ತು. ಇದೀಗ ಒಂದೇ ಬಾರಿಗೆ ಬರೋಬ್ಬರಿ 350.50 ರೂ. ಹೆಚ್ಚಿಸಲಾಗಿದೆ.ಈ ದರ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಆಹಾರದ ಬೆಲೆ ಏರಿಕೆಯಾಗುವ ಎಲ್ಲಾ ಸಾಧ್ಯತೆ ಇದೆ. ಇನ್ನೊಂದೆಡೆ ಹಣದುಬ್ಬರ ಏರಿಕೆಯಾಗುವುದು ನಿಚ್ಚಳವಾಗಿದೆ.
ಪರಿಷ್ಕೃತ ದರಗಳ ಪ್ರಕಾರ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳು ದೆಹಲಿಯಲ್ಲಿ ಪ್ರತಿ ಯೂನಿಟ್ಗೆ 2,119.50 ರೂ. ಹಾಗೂ ಗೃಹ ಬಳಕೆಯ ಸಿಲಿಂಡರ್ ಬೆಲೆ ಪ್ರತಿ ಯೂನಿಟ್ಗೆ 1,103 ರೂ. ಆಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ 1,055.50 ರೂ. ಆಗಿದೆ.
ಈ ಎಲ್ಲಾ ಹೊಸ ದರಗಳು ಇಂದಿನಿಂದ ಜಾರಿಗೆ ಬರಲಿದೆ. ಈ ವರ್ಷದಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಇದು ಎರಡನೇ ಏರಿಕೆಯಾಗಿದೆ. ಇದಕ್ಕೂ ಮುನ್ನ ಜನವರಿ 1 ರಂದು ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಯೂನಿಟ್ಗೆ 25 ರೂ. ಹೆಚ್ಚಿಸಲಾಗಿತ್ತು.
ಸ್ಥಳೀಯ ತೆರಿಗೆಗಳಿಂದಾಗಿ ದೇಶೀಯ ಅಡುಗೆ ಅನಿಲದ ಬೆಲೆಗಳು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಬದಲಾಗುತ್ತವೆ. ಇಂಧನ ಚಿಲ್ಲರೆ ವ್ಯಾಪಾರಿಗಳು ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಿಸುತ್ತಾರೆ.
ಪ್ರತಿ ಕುಟುಂಬವು ಒಂದು ವರ್ಷದಲ್ಲಿ ಸಬ್ಸಿಡಿ ದರದಲ್ಲಿ ತಲಾ 14.2 ಕೆಜಿಯ 12 ಸಿಲಿಂಡರ್‍ಗಳಿಗೆ ಅರ್ಹವಾಗಿರುತ್ತಾರೆ. ಅದರಾಚೆಗೆ ಗ್ರಾಹಕರು ಸಿಲಿಂಡರ್‍ಗಳ ಯಾವುದೇ ಹೆಚ್ಚುವರಿ ಖರೀದಿಗಳನ್ನು ಮಾರುಕಟ್ಟೆ ಬೆಲೆಗೆ ಖರೀದಿಸಬೇಕಾಗುತ್ತದೆ.
ಪಹಲ್ (ಎಲ್‍ಪಿಜಿ ನೇರ ಲಾಭ ವರ್ಗಾವಣೆ) ಯೋಜನೆಯಡಿ, ಗ್ರಾಹಕರು ಸಬ್ಸಿಡಿ ದರದಲ್ಲಿ ಎಲ್‍ಪಿಜಿ ಸಿಲಿಂಡರ್‍ಗಳನ್ನು ಪಡೆಯುತ್ತಾರೆ. ಸಬ್ಸಿಡಿಯು ವಿದೇಶಿ ವಿನಿಮಯ ದರಗಳು, ಕಚ್ಚಾ ತೈಲ ಬೆಲೆಗಳಂತಹ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.
ಬೆಂಗಳೂರಿನಲ್ಲಿ ಎಷ್ಟು ದರ: ಬೆಂಗಳೂರಿನಲ್ಲಿ ಎಲ್‍ಪಿಜಿ ಬೆಲೆ ಕಚ್ಚಾ ತೈಲದ ಅಂತಾರಾಷ್ಟ್ರೀಯ ಬೆಲೆಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ಇವುಗಳು ಹೆಚ್ಚಾದಾಗ, ಬೆಂಗಳೂರಿನಲ್ಲಿ ಎಲ್‍ಪಿಜಿ ಸಿಲಿಂಡರ್ ದರಗಳು ಹೆಚ್ಚಾಗುತ್ತವೆ. ಬಡ ವರ್ಗಗಳಿಗೆ, ಸರ್ಕಾರವು ಈ ಬೆಲೆಗಳನ್ನು ಸಬ್ಸಿಡಿ ಮಾಡಿದೆ. ಬೆಂಗಳೂರಿನಲ್ಲಿ ಇಂದು ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್‍ಗಳ ಬೆಲೆ 1,105 ರೂಪಾಯಿ 50 ಪೈಸೆಯಾಗಿದೆ. ಕರ್ನಾಟಕ ಬಹುತೇಕ ಜಿಲ್ಲೆಗಳಲ್ಲಿ ಸರಿಸುಮಾರು ಇದೇ ದರ ಅನ್ವಯವಾಗುತ್ತದೆ.
#DomesticLPG, #cylinder, #LPGprice, #hiked,