2024ರ ಅಮೆರಿಕ ಅಧ್ಯಕ್ಷೀಯ ಚುನಾವನೆಯಲ್ಲಿ ಟ್ರಂಪ್ ಸ್ಪರ್ಧೆ

Social Share

ವಾಷಿಂಗ್ಟನ್,ನ.16-ಮುಂದಿನ 2024ರ ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ರ್ಪಧಿಸುವುದಾಗಿ ಡೊನಾಲ್ಡ ಟ್ರಂಪ್ ಘೋಷಿಸಿದ್ದಾರೆ. ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠ ಮತ್ತು ವೈಭವಯುತ ಮಾಡಲು,ಯಾರೂ ಎದುರಾಳಿಗಳಿಲ್ಲದಂತೆ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಡೆಮಾಕ್ರಟಿಕ್ ಪಕ್ಷವನ್ನು ಸೋಲಿಸುವ ಗುರಿ ಹೊಂದಿರುವುದಾಗಿ ಫ್ಲೋರಿಡಾದಲ್ಲಿ ಸುಮಾರು 400 ಆಹ್ವಾನಿತ ಅತಿಥಿಗಳ ಮುಂದೆ ಘೋಷಿಸಿದರು. ಘೋಷಣೆ ಮಾಡುವ ಮೊದಲು ಟ್ರಂಪ್ ಅವರು, ಫೆಡರಲ್ ಚುನಾವಣಾ ಆಯೋಗಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು ಎಂದು ಬೆಂಬಲಿಗರು ತಿಳಿಸಿದ್ದಾರೆ.

ಅಮೆರಿಕ ಜನತೆ ನಿಜವಾದ ವೈಭವವನ್ನು ಜಗತ್ತು ಇನ್ನೂ ನೋಡಿಲ್ಲ . ನಾವು ಆಪರಾಕಾಷ್ಠೆಯನ್ನು ತಲುಪಿಲ್ಲ, ನಂಬುತ್ತೀರೋ ಇಲ್ಲವೋ ಎಂದು ಸಭಿಕರನ್ನು ಟ್ರಂಪ್ ಪ್ರಶ್ನಿಸಿದ್ದಾರೆ. ನಾವು ಅತ್ಯುನ್ನತ ಗುರಿಗಳನ್ನು ಸಾಧಿಸುವವರೆಗೆ ಮತ್ತು ನಮ್ಮ ದೇಶವನ್ನು ಹಿಂದೆಂದಿಗಿಂತಲೂ ದೊಡ್ಡದಾಗಿಸುವವರೆಗೆ ನಾವು ಬಿಡುವುದಿಲ್ಲ. ನಾವು ಇದನ್ನು ಮಾಡಬಹುದು. ನಾನು ಅದಕ್ಕಾಗಿ ಒಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ರಾಮದಾಸ್ -ಪ್ರತಾಪ್‍ಸಿಂಹ ನಡುವೆ ಗುಂಬಜ್ ಫೈಟ್

ಇದೇ ನ.20 ರಂದು 80 ನೇ ವರ್ಷಕ್ಕೆ ಕಾಲಿಡುತ್ತಿರುವ ಹಾಲಿ ಅಧ್ಯಕ್ಷ ಜೋ ಬಿಡೆನ್ ಅವರು ಸ್ರ್ಪಧಿಸಲು ಉದ್ದೇಶಿಸಿದ್ದಾರೆ. ಆದರೆ ಕ್ರಿಸ್ಮಸ್-ಹೊಸ ವರ್ಷದ ರಜೆಯ ಸಮಯದಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಕೆಲ ಮುಖಂಡರು ಹೇಳಿದ್ದಾರೆ.

ಇದು ಶ್ವೇತಭವನ ಪ್ರವೇಶಕ್ಕೆ ಟ್ರಂಪ್ ಅವರ ಮೂರನೇ ಬಿಡ್ ಆಗಿದೆ. ಅವರು 2016 ರಲ್ಲಿ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮಧ್ಯಂತರ ಚುನಾವಣೆಯಲ್ಲಿ ನಿರೀಕ್ಷಿಸಿದ ಸಾಧನೆಯಾಗಿಲ್ಲ. ಆದರೆ, ರಿಪಬ್ಲಿಕನ್ ಅಭ್ಯರ್ಥಿಗಳು ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ ಎಂದು ಒತ್ತಿ ಹೇಳಿದ್ದಾರೆ.

ಕ್ಯಾನ್ಸರ್‌ಗೆ ನಕಲಿ ಔಷಧಿ ತಯಾರಿಸುತ್ತಿದ್ದ ವೈದ್ಯರು ಸೇರಿ 7 ಮಂದಿ ಬಂಧನ

ಅಮೆರಿಕ ಈಗ ಕಠಿಣ ಸಮಯವನ್ನು ಎದುರಿಸುತ್ತಿದೆ. ಸರಿ ದಾರಿಗೆ ತರುವುದು ಸುಲಭದ ಕೆಲಸವಲ್ಲ ಎಂದು ಒಪ್ಪಿಕೊಂಡರು. ನಾವು ಒಟ್ಟಾಗಿ ಅತ್ಯಂತ ಭ್ರಷ್ಟ ಶಕ್ತಿಗಳನ್ನು ಮಣಿಸಬೇಕು. ನಿಮ್ಮ ಕಣ್ಣೆದುರೇ ನಮ್ಮ ದೇಶ ನಾಶವಾಗುತ್ತಿದೆ ಎಂದಿದ್ದಾರೆ.

Articles You Might Like

Share This Article