ಈಶಾನ್ಯ ರಾಜ್ಯಗಳಲ್ಲಿ CAA ಜಾರಿ ಮಾಡಲು ಬೀಡಲ್ಲ: ಮಮತಾ

Social Share

ಶಿಲ್ಲಾಂಗ್,ಫೆ.23- ಹೊರಗಿನಿಂದ ಬಂದವರು ಈಶಾನ್ಯ ರಾಜ್ಯಗಳಲ್ಲಿ ಸಿಎಎ ಮತ್ತು ಎನ್‍ಆರ್‍ಸಿ ಹೇರಲು ನಮ್ಮ ಪಕ್ಷ ಅವಕಾಶ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಫೆ.27ರಂದು ನಡೆಯಲಿರುವ ಮೇಘಾಲಯ ಚುನಾವಣೆ ಅಂಗವಾಗಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಅವರು, ಕಾನ್ರಾಡ್ ಸಂಗ್ಮಾ ನೇತೃತ್ವದ ಸರ್ಕಾರ ಯಾವುದೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ ವಿವಿಧ ಹಗರಣಗಳಲ್ಲಿ ತೊಡಗಿಸಿಕೊಂಡಿದೆ ಎಂದು ಅವರು ಆರೋಪ ಮಾಡಿದ್ದಾರೆ.

ರಾಷ್ಟ್ರೀಯ ನಾಗರಿಕರ ನೋಂದಣಿ, ಪೌರತ್ವ ತಿದ್ದುಪಡಿ ಕಾಯ್ದೆ, ಗುಂಡುಗಳು ಮತ್ತು ಹಗರಣಗಳ ಮೂಲಕ ನಿಮ್ಮನ್ನು ದಬ್ಬಾಳಿಕೆ ಮಾಡುತ್ತಿರುವಾಗ ಹೊರಗಿನವರು ಇಲ್ಲಿ ಆಳ್ವಿಕೆ ನಡೆಸಲು ಬಯಸುತ್ತಾರೆ. ಇದನ್ನು ಸಹಿಸಬೇಡಿ. ನಿಮ್ಮ ಮೇಲೆ ಸಿಎಎ ಅಥವಾ ಎನ್‍ಆರ್‍ಸಿ ಹೇರಲು ಹೊರಗಿನಿಂದ ಬರುವ ಜನರನ್ನು ಅನುಮತಿಸಬೇಡಿ ಎಂದು ಅವರು ಕರೆ ನೀಡಿದ್ದಾರೆ.

ಸಂಜಯ್‍ ರಾವತ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

ಮೇಘಾಲಯವನ್ನು ಅದರ ಜನರು ನಡೆಸುತ್ತಾರೆಯೇ ಹೊರತು ಗುವಾಹಟಿ ಅಥವಾ ದೆಹಲಿಯಿಂದಲ್ಲ. ನಾವು ಅದನ್ನು ಬಂಗಾಳದಿಂದ ನಡೆಸುವುದಿಲ್ಲ. ನಾವು ನಿಮ್ಮ ಸ್ನೇಹಿತರು ಮತ್ತು ನಿಮಗೆ ಬೇಕಾದುದನ್ನು ನಿಮಗೆ ಸಹಾಯ ಮಾಡುತ್ತೇವೆ ಎಂದು ಹೀಗಾಗಿ ನಮ್ಮ ಪಕ್ಷಕ್ಕೆ ಮತ ನೀಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಮುಕ್ರೋಹ್ ಹಿಂಸಾಚಾರಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡ ಟಿಎಂಸಿ ಮುಖ್ಯಸ್ಥರು, ಅಸ್ಸಾಂ ಪೊಲೀಸರು ತನ್ನದೇ ಆದ ಇಚ್ಛೆಗೆ ಅನುಗುಣವಾಗಿ ಜನರ ಮೇಲೆ ಗುಂಡು ಹಾರಿಸಿದ್ದಾರೆ. ಅಂತಹ ಘಟನೆಯ ತನಿಖೆಗೆ ಕೇಂದ್ರ ತಂಡಗಳನ್ನು ಏಕೆ ಕಳುಹಿಸಲಿಲ್ಲ? ಮೇಘಾಲಯದ ಮುಕ್ರೋಹ್‍ನಲ್ಲಿ ನವೆಂಬರ್ 22 ರಂದು ಅಸ್ಸಾಂ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ರಾಜ್ಯದ ಐವರು ಮತ್ತು ಅಸ್ಸಾಂನ ಅರಣ್ಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದರು.

ಸಣ್ಣ ಸಣ್ಣ ವಿಷಯಗಳಿಗಾಗಿ ಕೇಂದ್ರ ತಂಡಗಳನ್ನು ಬಂಗಾಳಕ್ಕೆ ಕಳುಹಿಸಲಾಗುತ್ತದೆ ಆದರೆ ಮುಕ್ರೋಹ್‍ದಲ್ಲಿ ಏನನ್ನೂ ಮಾಡಲಾಗಿಲ್ಲ. (ಅಂತರ ರಾಜ್ಯ) ಗಡಿ ಪ್ರದೇಶಗಳಲ್ಲಿ ಎಷ್ಟೋ ಜನ ಸತ್ತರು. ಇದನ್ನು ಬಿಜೆಪಿ ನಾಯಕರು ಪ್ರಶ್ನಿಸಲಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಲಂಚ ಪ್ರಕರಣದಲ್ಲಿ ಪಂಜಾಬ್ AAP ಶಾಸಕ ಅಮಿತ್ ರತ್ತನ್ ಅರೆಸ್ಟ್

ಬಿಜೆಪಿ ಮತ್ತು ಕಾಂಗ್ರೆಸ್‍ನವರು ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದರು, ಆದರೆ ಮೇಘಾಲಯದಲ್ಲಿ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ವೈದ್ಯಕೀಯ ಕಾಲೇಜುಗಳಿಲ್ಲ, ಉತ್ತಮ ರಸ್ತೆಗಳಿಲ್ಲ ಮತ್ತು ಆರೋಗ್ಯ ಸೌಲಭ್ಯಗಳ ವ್ಯವಸ್ಥೆಯೂ ಇಲ್ಲ. ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಅವರು ಕಿಡಿಕಾರಿದರು.

Articles You Might Like

Share This Article