ಬೆಂಗಳೂರು,ಮೇ 27- ಒಂದೆಡೆ ಸಚಿವ ಸ್ಥಾನ ದೊರೆತ್ತಿದೆ, ಮತ್ತೊಂದೆಡೆ ಮೊಮ್ಮಗಳು ಹುಟ್ಟಿದ್ದಾಳೆ, ಇಂದು ನನಗೆ ಡಬಲ್ ಧಮಾಕ ಎಂದು ನೂತನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ವಿಶ್ವಾಸ ಇಟ್ಟು ಪಕ್ಷ ಜವಾಬ್ದಾರಿ ನೀಡಿದೆ. ಇದು ಸಂತೋಷದ ವಿಷಯ, ಮತ್ತೊಂದೆಡೆ ನನ್ನ ಮಗ ಮೃಣಾಲ್‍ಗೆ ಮಗಳು ಹುಟ್ಟಿದ್ದಾಳೆ. ಇದು ನನ್ನ ಪಾಲಿನ ಡಬಲ್ ದಮಾಕದ ದಿನ ಎಂದು ಹೇಳಿದ್ದಾರೆ.
ವಿಧಾನಸಭೆ ಉಪಾಧ್ಯಕ್ಷ ಸ್ಥಾನ : ಅಸಮಾಧಾನ ಹೊರಹಾಕಿದ ಶಾಸಕ ಪುಟ್ಟರಂಗಶೆಟ್ಟಿ
ಸಂಪುಟದಲ್ಲಿ ಸಚಿವ ಏಕೈಕ ಮಹಿಳಾ ಸಚಿವೆ ನಾನು. ಯಾವುದೇ ಖಾತೆ ಕೊಟ್ಟರು ನಿಭಾಯಿಸುತ್ತೇನೆ. ಅದರಲ್ಲೂ ಶೇ.50ರಷ್ಟು ಮಹಿಳೆಯರು ಇರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿಭಾಯಿಸಲು ಸಿದ್ಧ, ಬೇರೆ ಯಾವುದೇ ಜವಾಬ್ದಾರಿ ನೀಡಿದರು ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ.
ಗ್ಯಾರಂಟಿ ಕಾರ್ಡ್‍ನಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುತ್ತೇವೆ ಎಂದ ಅವರು, ಮುಂದಿನ ದಿನಗಳಲ್ಲಿ ತಮ್ಮ ಜಿಲ್ಲೆಯ ಲಕ್ಷ್ಮಣ್ ಸವದಿ ಅವರಿಗೂ ಅವಕಾಶಗಳು ಸಿಗಲಿವೆ ಎಂದು ಹೇಳಿದ್ದಾರೆ.
#LakshmiHebbalkar, #CabinetExpansion,