ಬೆಂಗಳೂರು, ಜ.23- ಮಕ್ಕಳಿಗೆ ಕಡ್ಡಾಯ ಲಸಿಕೆ ಹೇರಿಕೆ ಕ್ರಮ ಸರಿಯಲ್ಲ ಎಂದು ಖ್ಯಾತ ವೈದ್ಯ ಹಾಗೂ ಕೋವಿಡ್ ನಿಗ್ರಹ ಕಾರ್ಯದಿಂದ ರಾಷ್ಟ್ರದ ಗಮನ ಸೆಳೆದಿರುವ ಡಾ.ಅನಿಲ್‍ಕುಮಾರ್ ಅವುಲಪ್ಪ ಅವರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೋವಿಡ್ ಸಂದರ್ಭದಲ್ಲಿ ಹಮ್ಮಿಕೊಂಡಿರುವ ತಜ್ಞವೈದ್ಯರ ಜತೆಗಿನ ಸಂವಾದ ಮಾಲೆಯಲ್ಲಿ ಕೋವಿಡ್ ಮೂರನೆ ಅಲೆ ಮಕ್ಕಳ ಮೇಲೆ ಬೀರುವ ಪರಿಣಾಮ ಹಾಗೂ ಆತಂಕದ ಬಗ್ಗೆ ಮಾತನಾಡಿದ ಅವರು, ಮಕ್ಕಳಲ್ಲಿ ರೋಗ-ನಿರೋಧಕ ಶಕ್ತಿ ಪ್ರಕೃತಿದತ್ತವಾಗಿ ಹೆಚ್ಚಿರುತ್ತದೆ.
ಮಕ್ಕಳಿಗೆ ಲಸಿಕೆ ಹಾಕುವುದನ್ನು ಸುಪ್ರೀಂಕೋರ್ಟ್ ಸಹ ಕಡ್ಡಾಯ ಮಾಡಿಲ್ಲ. ಪೆÇೀಷಕರು ಈ ಬಗ್ಗೆ ನಿರ್ಧರಿಸಲು ಅನುಮತಿ ನೀಡಿದೆ. ಹೀಗಿರುವಾಗ ರಾಜ್ಯದ ಎಲ್ಲೆಡೆ ಶಾಲೆಗಳು ಲಸಿಕೆಯನ್ನು ಕಡ್ಡಾಯ ಮಾಡುತ್ತಿರುವುದು ತಪ್ಪು ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಮೂರನೆ ಅಲೆ ಎದುರಿಸಲು ಬೂಸ್ಟರ್ ಡೋಸ್ ಅಗತ್ಯವೆಂದು ಮಾಡಿರುವ ಪ್ರಚಾರದ ಬಗ್ಗೆ ಮಾತನಾಡಿದ ಅವರು, ಬೂಸ್ಟರ್ ಡೋಸ್ ಕೂಡ ಕಡ್ಡಾಯವೇನಲ್ಲ ಎಂದು ಹೇಳಿದ್ದಾರೆ.
ಕೋವಿಡ್ ಮೂರನೆ ಅಲೆ ಬಗ್ಗೆ ನಿರ್ಲಕ್ಷ್ಯ ಬೇಡ, ಆದರೆ ಅತಿಯಾಗಿ ಆತಂಕ ಪಡುವುದೂ ಬೇಡ. ಅತಿ ಆತಂಕದಿಂದಲೇ ಕೆಲವರು ಸಾವನ್ನಪ್ಪಿದ್ದಾರೆ. ನಮ್ಮ ಆರೋಗ್ಯವನ್ನು ಎಚ್ಚರದಿಂದ ಸರಿಯಾಗಿ ಇಟ್ಟುಕೊಂಡರೆ ಇಂತಹ ಸಾಂಕ್ರಾಮಿಕ ಕಾಯಿಲೆಗಳಿಂದ ದೂರವಿರಬಹುದು.
ಉತ್ತಮ ಆರೋಗ್ಯಕ್ಕೆ ಒಳ್ಳೆಯ ಆಹಾರ ಪದ್ಧತಿ, ವ್ಯಾಯಾಮ ಹಾಗೂ ಒಳ್ಳೆಯ ನಿದ್ದೆ ಅತ್ಯಗತ್ಯವಾಗಿರುತ್ತದೆ. ಇವು ದೇಹವನ್ನು ಸದೃಢವಾಗಿರುತ್ತವೆ. ದೇಸಿ ಆಹಾರ ಪದ್ಧತಿ ಕೂಡ ಆರೋಗ್ಯ ರಕ್ಷಣೆಗೆ ಅತಿ ಮುಖ್ಯವಾಗಿದೆ. ದೇಶದಲ್ಲಿ ಶೇ.85ರಷ್ಟು ಮಂದಿಗೆ ಈಗಾಗಲೇ ಕೊರೊನಾ ಬಂದು ಹೋಗಿರುವ ಸಾಧ್ಯತೆಯೇ ಹೆಚ್ಚಿದೆ.
ಹಾಗಿದ್ದಲ್ಲಿ ಅವರು ಸಹಜವಾಗಿ ರೋಗ-ನಿರೋಧಕ ಶಕ್ತಿ ಹೊಂದಿರುತ್ತಾರೆ. ಈ ಕಾರಣದಿಂದ ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ಒಳ್ಳೆಯದು. ಆಗ ಕೋವಿಡ್ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ. ಕೋವಿಡ್ ಬಂದ ತಕ್ಷಣ ಭಯ, ಆತಂಕ ಬಿಡಬೇಕು. ನಮ್ಮ ಆರೋಗ್ಯದ ವಿಚಾರದಲ್ಲಿ ನಾವೇ ಮೊದಲ ವೈದ್ಯರು ಎಂದು ಹೇಳಿದರು.
ಸದಾ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಮಾಧ್ಯಮದವರದ್ದಂತೂ ಧಾವಂತದ ಬದುಕು. ಆದರೆ, ಕೋವಿಡ್‍ಅನ್ನು ನಿರ್ಲಕ್ಷ್ಯ ಮಾಡಿಕೊಂಡು ಓಡಾಡಬಾರದು. ಅಷ್ಟೇ ಅಲ್ಲ, ತಾವೇ ಔಷ ಮಾಡಿಕೊಳ್ಳುವ ಕ್ರಮ ಕೈಬಿಡಬೇಕು. ವೈದ್ಯರ ಸಲಹೆ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಎರಡನೆ ಅಲೆಯಂತೆ ಮೂರನೆ ಅಲೆ ಪ್ರಾಣಾಪಾಯಕಾರಿಯಾಗಿ ಪರಿಣಮಿಸಿಲ್ಲ. ಮೂರನೆ ಅಲೆ ಅತಿ ವೇಗವಾಗಿ ಹರಡುವ ಗುಣ ಹೊಂದಿದೆ. ಆದರೆ, ಪ್ರಾಣಕ್ಕೆ ಕುತ್ತು ತರುವ ಸಂಭವವಿಲ್ಲ. ಸಾಂಕ್ರಾಮಿಕ ರೋಗಗಳು ಹೊಸ ಹೊಸ ರೂಪ ಪಡೆಯುತ್ತ ಹೋಗುತ್ತವೆ. ಆದರೆ, ಕ್ರಮೇಣ ಅದರ ಶಕ್ತಿ ಕಡಿಮೆಯಾಗುತ್ತದೆ ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಐಎಫ್‍ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಸಂಘದ ಪದಾಕಾರಿಗಳಾದ ಮತ್ತಿಕೆರೆ ಜಯರಾಮ್, ಪುಂಡಲೀಕ ಬಿ.ಬಾಳೋಜಿ, ಜಿ.ಸಿ.ಲೋಕೇಶ್, ಸಂಜೀವರಾವ್ ಕುಲಕರ್ಣಿ, ಮಲ್ಲಿಕಾರ್ಜುನ್, ಸೋಮಶೇಖರ್ ಗಾಂ ಮತ್ತಿತರರು ಈ ಸಂದರ್ಭದಲ್ಲಿದ್ದರು.
