ಡಾ.ರಾಜಕುಮಾರ್ ಪುತ್ಥಳಿಯನ್ನೇ ಕದ್ದಿದ್ದ ಇಬ್ಬರು ವಶಕ್ಕೆ 

Social Share

ಬೆಂಗಳೂರು, ಫೆ.7- ಕಳ್ಳತನವಾಗಿದ್ದ ಲುಂಬಿನಿ ಗಾರ್ಡನ್‍ನಲ್ಲಿನ ವರನಟ ಡಾ.ರಾಜ್‍ಕುಮಾರ್ ಪುತ್ಥಳಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಾಗವಾರ ಕೆರೆಯ ಲುಂಬಿನಿ ಗಾರ್ಡನ್‍ನಲ್ಲಿ ವರನಟ ಡಾ.ರಾಜ್‍ಕುಮಾರ್ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಕಳೆದ 24ರಂದು ಈ ಪುತ್ಥಳಿ ಕಳ್ಳತನವಾಗಿರುವ ಬಗ್ಗೆ ಅರಣ್ಯ ವೀಕ್ಷಕರಾದ ಸಿ.ಕೆ.ರಾಜು ಎಂಬುವರು ತಕ್ಷಣ ಮೇಲಧಿಕಾರಿ ಯೋಗೇಶ್ ಅವರ ಗಮನಕ್ಕೆ ತಂದರು.
ಈ ಬಗ್ಗೆ ಯೋಗೇಶ್ ಅವರು ದೂರು ನೀಡಿದ್ದು,
ಅಮೃತಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಇಬ್ಬರು ಯುವಕರನ್ನು ವಶಕ್ಕೆ ಪಡೆದು ಡಾ.ರಾಜ್ ಪುತ್ಥಳಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಯಾವ ಕಾರಣಕ್ಕಾಗಿ ವರನಟ ಡಾ.ರಾಜ್ ಪುತ್ಥಳಿಯನ್ನು ಇವರಿಬ್ಬರು ಕಳ್ಳತನ ಮಾಡಿದ್ದರು ಎಂಬ ವಿವರವನ್ನು ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ.

Articles You Might Like

Share This Article