ಅಭಿಮಾನಿಗಳ 13 ವರ್ಷಗಳ ಕನಸು ನನಸು, ವಿಷ್ಣು ಸ್ಮಾರಕ ಲೋಕಾರ್ಪಣೆ

Social Share

ಮೈಸೂರು,ಜ29- ಬಹುವರ್ಷಗಳಿಂದ ವಿಷ್ಣುವರ್ಧನ್ ಅಭಿಮಾನಿಗಳು ಎದುರು ನೋಡುತ್ತಿದ್ದ ವಿಷ್ಣು ಸ್ಮಾರಕ ಇಂದು ಮೈಸೂರಿನ ಉದ್ಭೂರಿನಲ್ಲಿ ಲೋಕಾರ್ಪಣೆಗೊಂಡಿದೆ. ಕಳೆದ 13 ವರ್ಷಗಳ ಕನಸು ನನಸಾಗಿದ್ದು, ವಿಷ್ಣು ಅಭಿಮಾನಿಗಳಲ್ಲಿ ಉತ್ಸಾಹ ಇಮ್ಮಡಿಗೊಂಡಿತ್ತು.

ವಿಷ್ಣುವರ್ಧನ್ ಅವರ ತವರೂರಿನಲ್ಲಿ ಅವರ ಸ್ಮಾರಕ ಉದ್ಘಾಟನೆಯಾಗುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಸ್ಮಾರಕ ಉದ್ಘಾಟನೆ ಅಂಗವಾಗಿ ಇತ್ತ ವಿಷ್ಣು ಪುಣ್ಯ ಭೂಮಿ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.

ಮೊದಲಿಗೆ ಮೈಸೂರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಇರುವ ಡಾ.ವಿಷ್ಣುವರ್ಧನ್ ಉದ್ಯಾನವನದ ಸಮೀಪ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಪಠ್ಯದಲ್ಲಿ ಕನ್ನಡ ಚಿತ್ರರಂಗದ ಮೇರುನಟರ ಯಶೋಗಾತೆ ಸೇರಿಸಲು ಸಿಎಂಗೆ ಮನವಿ

ಮಾಜಿ ಕಾರ್ಪೊರೇಟರ್ ಹಾಗೂ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ ಮೆರವಣಿಗೆಗೆ ಚಾಲನೆ ನೀಡಿದರು. ನೂರಾರು ವಿಷ್ಣು ಅಭಿಮಾನಿಗಳು ವಿಷ್ಣುವರ್ಧನ್ ಅವರ ಭಾವಚಿತ್ರವಿರುವ ಬಾವುಟ ಪ್ರದರ್ಶಿಸುತ್ತಾ ಮೆರವಣಿಗೆಯಲ್ಲಿ ಸಾಗಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಹೊರಟು ಶ್ರೀರಾಂಪುರ ವೃತ್ತದಲ್ಲಿ ಸಮಾವೇಶಗೊಂಡಿತು. ಬೆಂಗಳೂರಿನಿಂದ ಮೈಸೂರುವರೆಗೆ ನೂರಾರು ವಾಹನಗಳ ಮೂಲಕ ಅಭಿಮಾನಿಗಳು ರ್ಯಾಲಿಯಲ್ಲಿ ಸಾಗಿ ನೆಚ್ಚಿನ ನಾಯಕ ನಟನ ಸ್ಮಾರಕ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಸಾಥ್ ನೀಡಿದರು.

#DrVishnuvardhan, #Memorial, #Inauguration, #VishnuvardhanMemorial,

Articles You Might Like

Share This Article